ಮನೋರಂಜನೆ

ರಣಜಿ ಟ್ರೋಫಿ: ಕರ್ನಾಟಕದ ಮೇಲುಗೈ

Pinterest LinkedIn Tumblr

Vinay-Kuma

ಕೋಲ್ಕತಾ, ಡಿ.16: ಆಲ್‌ರೌಂಡ್ ಪ್ರದರ್ಶನ ನೀಡಿದ ಕರ್ನಾಟಕ ತಂಡ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಬಂಗಾಳದ ವಿರುದ್ಧ ಮೇಲುಗೈ ಸಾಸಿದೆ.

ಮೂರನೆ ದಿನವಾದ ಮಂಗಳವಾರ ಕರ್ನಾಟಕದ ಮೊದಲ ಇನಿಂಗ್ಸ್‌ನಲ್ಲಿ ದಾಖಲಿಸಿದ 408 ರನ್‌ಗಳ ಸವಾಲಿಗೆ ಉತ್ತರಿಸಹೊರಟ ಬಂಗಾಳ ತಂಡ ಮೊದಲ ಇನಿಂಗ್ಸ್‌ನಲ್ಲಿ 251 ರನ್‌ಗೆ ಆಲೌಟಾಯಿತು. ಾಲೋ-ಆನ್‌ಗೆ ಸಿಲುಕಿರುವ ಲಕ್ಷ್ಮೀರತನ್ ಶುಕ್ಲಾ ನೇತೃತ್ವದ ಬಂಗಾಳ ತಂಡ ಎರಡನೆ ಇನಿಂಗ್ಸ್‌ನಲ್ಲಿ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿದ್ದು, ಅರಿಂದಮ್ ದಾಸ್(11) ಹಾಗೂ ಸುದೀಪ್ ಚಟರ್ಜಿ(20) ಕ್ರೀಸ್ ಕಾಯ್ದುಕೊಂಡಿದ್ಧಾರೆ.

ಮಂಗಳವಾರ 1 ವಿಕೆಟ್ ನಷ್ಟಕ್ಕೆ 62 ರನ್‌ನಿಂದ ಆಟ ಮುಂದುವರಿಸಿದ ಬಂಗಾಳ ಕರ್ನಾಟಕದ ನಾಯಕ ಆರ್. ವಿನಯ ಕುಮಾರ್(3-56) ಹಾಗೂ ಶ್ರೀನಾಥ್ ಅರವಿಂದ್(3-31) ದಾಳಿಗೆ ಸಿಲುಕಿ 85.1 ಓವರ್‌ಗಳಲ್ಲಿ 251 ರನ್ ಗಳಿಸಲಷ್ಟೇ ಶಕ್ತವಾಯಿತು.

ಬಂಗಾಳದ ಪರ ಶ್ರೀವಾಸ್ತವ ಗೋಸ್ವಾಮಿ (68 ರನ್, 141 ಎಸೆತ, 12 ಬೌಂಡರಿ) ಅಗ್ರ ಸ್ಕೋರರ್ ಎನಿಸಿಕೊಂಡರು. ದೊಡ್ಡ ಮೊತ್ತ ಗಳಿಸಲು ವಿಲವಾದ ಗೋಸ್ವಾಮಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್‌ಗೆ ವಿಕೆಟ್ ಒಪ್ಪಿಸಿದರು. ರೋಹನ್ ಬ್ಯಾನರ್ಜಿ (46) ಹಾಗೂ ಸುದೀಪ್ ಚಟರ್ಜಿ (57) ಎರಡನೆ ವಿಕೆಟ್‌ಗೆ 62 ರನ್ ಜೊತೆಯಾಟ ನಡೆಸಿದ್ದರು. ಬ್ಯಾನರ್ಜಿ ಕೇವಲ 4 ರನ್‌ನಿಂದ ಅರ್ಧಶತಕ ವಂಚಿತರಾಗಿ ಪೆವಿಲಿಯನ್ ಸೇರಿದರು.

ಆಗ ಕ್ರೀಸ್‌ಗೆ ಆಗಮಿಸಿದ ಬಂಗಾಳದ ಪ್ರಮುಖ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ತಾನೆದುರಿಸಿದ ಎರಡನೆ ಎಸೆತದಲ್ಲಿ ಶೂನ್ಯಕ್ಕೆ ಔಟಾದರು. ಬರೋಡಾ ವಿರುದ್ಧ ಪಂದ್ಯದಲ್ಲಿ 192 ರನ್ ಗಳಿಸಿದ್ದ ಚಟರ್ಜಿ ಅವರು ಶ್ರೀವಾಸ್ತವ ಅವರೊಂದಿಗೆ 4ನೆ ವಿಕೆಟಿಗೆ 71 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸುವ ಯತ್ನ ನಡೆಸಿದರು. ಆದರೆ ಈ ಇಬ್ಬರ ಪ್ರಯತ್ನವನ್ನು ಕರ್ನಾಟಕದ ನಾಯಕ ವಿನಯ ಕುಮಾರ್ ವಿಲಗೊಳಿಸಿದರು.

ಸಂಕ್ಷಿಪ್ತ ಸ್ಕೋರ್:
ಕರ್ನಾಟಕ ಪ್ರಥಮ ಇನಿಂಗ್ಸ್: 408 ರನ್
ಬಂಗಾಳ ಪ್ರಥಮ ಇನಿಂಗ್ಸ್: 251 ರನ್
(ಗೋಸ್ವಾಮಿ 68, ರೋಹನ್ ಚಟರ್ಜಿ 57, ಸುದೀಪ್ ಬ್ಯಾನರ್ಜಿ 46, ವಿನಯಕುಮಾರ್ 3-56, ಅರವಿಂದ್ 3-31, ಮಿಥುನ್ 2-83, ಗೋಪಾಲ್ 1-1)
ಬಂಗಾಳ ಎರಡನೆ ಇನಿಂಗ್ಸ್20 ಓವರ್‌ಗಳಲ್ಲಿ 46/1
(ಅರಿಂದಮ್ ದಾಸ್ ಅಜೇಯ 11, ಸುದೀಪ್ ಚಟರ್ಜಿ ಅಜೇಯ 20, ಶ್ರೀನಾಥ್ ಅರವಿಂದ್ 1-10)

Write A Comment