ಮನೋರಂಜನೆ

ಧೋನಿ ನಾಯಕತ್ವಕ್ಕೆ ಕಠಿಣ ಪರೀಕ್ಷೆ

Pinterest LinkedIn Tumblr

20dhoni

ಬ್ರಿಸ್ಬೇನ್, ಡಿ.16: ಗಾಯದಿಂದಾಗಿ ಮೊದಲ ಟೆಸ್ಟ್‌ನಲ್ಲಿ ಹೊರಗುಳಿದಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ಸೇವೆಗೆ ಮರಳಿದ್ದಾರೆ. ಬುಧವಾರ ಬ್ರಿಸ್ಬೇನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಆಸ್ಟ್ರೇಲಿಯ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಭಾರತಕ್ಕೆ ಕಠಿಣ ಸವಾಲು ಎದುರಾಗಿದೆ.
ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್ ವೈಲ್ಯದಿಂದಾಗಿ ಗೆಲುವಿನ ಅಂಚಿನಲ್ಲಿ ಮುಗ್ಗರಿಸಿದ್ದ ಟೀಮ್ ಇಂಡಿಯಾಕ್ಕೆ ಧೋನಿ ಆಗಮನದಿಂದಾಗಿ ಆನೆ ಬಲ ಬಂದಂತಾಗಿದೆ. ಸವಾಲನ್ನು ಬೆನ್ನಟ್ಟುವಲ್ಲಿ ಧೋನಿ ಯಾವತ್ತೂ ಮುಂದೆ. ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಕಳೆದ ಟೆಸ್ಟ್‌ನಲ್ಲಿ ಎರಡು ಶತಕ ದಾಖಲಿಸಿ ತಂಡದ ಗೆಲುವಿಗಾಗಿ ಶ್ರಮಿಸಿದ್ದರು. ಟೆಸ್ಟ್ ಆರಂಭಕ್ಕೆ ಮುನ್ನ ಬೆಂಕಿ ವಿರುದ್ಧ ಬೆಂಕಿಯಂತೆ ಹೋರಾಡುವುದಾಗಿ ಕೊಹ್ಲಿ ಹೇಳಿದ್ದರು. ಅವರ ಆ ಪ್ರಯತ್ನದಲ್ಲಿ ಕೊನೆಯ ಹಂತದಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿ 48 ರನ್‌ಗಳ ಸೋಲು ಅನುಭವಿಸಿತ್ತು.
ವಿರಾಟ್ ಕೊಹ್ಲಿ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ನಾಯಕ ಧೋನಿ ಟೀಮ್ ಇಂಡಿಯಾದ ಆಕ್ರಮಣಕಾರಿ ಆಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದು ಅದೇ ರೀತಿ ಮುಂದುವರಿಯಲಿದೆ ಎಂದಿದ್ದಾರೆ. ಧೋನಿ ತಂಡದ ದೌರ್ಬಲ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಯಾಗಲಿದೆ. ವರುಣ್ ಆ್ಯರೊನ್ ಬದಲಿಗೆ ಉಮೇಶ್ ಯಾದವ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಮೊದಲ ಟೆಸ್ಟ್‌ನಲ್ಲಿ ಯಾದವ್‌ಗೆ ಅವಕಾಶ ನೀಡುವ ನಿಟ್ಟಿನಲ್ಲಿ ಯೋಚಿಸಲಾಗಿದ್ದರೂ, ಕೊನೆಯ ಹಂತದಲ್ಲಿ ಆ್ಯರೊನ್ ಅವಕಾಶ ಗಿಟ್ಟಿಸಿಕೊಂಡಿದ್ದರು.
ವೇಗಿಗಳ ಸ್ನೇಹಿಯಾಗಿರುವ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಎರಡನೆ ಟೆಸ್ಟ್‌ನಲ್ಲಿ ಐವರು ಬೌಲರ್‌ಗಳನ್ನು ಕಣಕ್ಕಿಳಿಸಲು ಧೋನಿ ಚಿಂತನೆ ನಡೆಸಿದ್ದಾರೆ. ರೋಹಿತ್ ಶರ್ಮ ಅವಕಾಶ ಕಳೆದುಕೊಳ್ಳಲಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ದೊರೆಯಲಿದ್ದು, ಕರಣ್ ಶರ್ಮ ಜಾಗ ತೆರವುಗೊಳಿಸಲಿದ್ದಾರೆ.
ಧೋನಿ ಆಗಮನದಿಂದಾಗಿ ವೃದ್ಧಿಮಾನ್ ಸಹಾ ಜಾಗ ತೆರವುಗೊಳಿಸುವಂತಾಗಿದೆ. ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ಭುವನೇಶ್ವರ ಕುಮಾರ್ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಧವಳ್ ಕುಲಕರ್ಣಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ಕಳೆದ ಟೆಸ್ಟ್ ನಲ್ಲಿ ನಾಯಕತ್ವದ ಒತ್ತಡದ ನಡುವೆಯೂ ಎರಡು ಶತಕ ಸಿಡಿಸಿದ್ದರು. ಧೋನಿ ಆಗಮನದಿಂದಾಗಿ ಅವರಿಗೆ ತನ್ನ ಅಪೂರ್ವ ಾರ್ಮನ್ನು ಮುಂದುವರಿಸಲು ಯಾವುದೇ ಸಮಸ್ಯೆ ಇಲ್ಲ. ಆರಂಭಿಕ ದಾಂಡಿಗ ಶಿಖರ್ ಧವನ್ ತಂಡಕ್ಕೆ ಹೊರೆಯಾಗಿದ್ದಾರೆ. ಆದರೆ ಇನ್ನೊಬ್ಬ ಆರಂಭಿಕ ದಾಂಡಿಗ ಮುರಳಿ ವಿಜಯ್ ಉತ್ತಮ ಾರ್ಮ್ ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ತನ್ನ ಬ್ಯಾಟಿಂಗನ್ನು ಇನ್ನಷ್ಟು ಸುಧಾರಣೆ ಮಾಡಬೇಕಾಗಿದೆ. ಭಾರತದ ಅಂತಿಮ ಹನ್ನೊಂದರ ತಂಡ ಕೊನೆಯ ಹಂತದಲ್ಲಿ ಪ್ರಕಟಗೊಳ್ಳಲಿದೆ.
ಆಸ್ಟ್ರೇಲಿಯ ತಂಡವನ್ನು ಹೊಸ ನಾಯಕ ಸ್ಟೀವನ್ ಸ್ಮಿತ್ ಮುನ್ನಡೆಸಲಿದ್ದಾರೆ. ಅವರು ಹನ್ನೊಂದರ ಬಳಗವನ್ನು ಪ್ರಕಟಿಸಿದ್ದಾರೆ. ಇಬ್ಬರು ಎಡಗೈ ವೇಗದ ಬೌಲರ್‌ಗಳನ್ನು ಎರಡನೆ ಟೆಸ್ಟ್‌ನಲ್ಲಿ ಕಣಕ್ಕಿಳಿಸುವ ಸುಳಿವು ನೀಡಿದ್ದಾರೆ. ಮಿಚೆಲ್ ಸ್ಟಾರ್ಕ್ ಮತ್ತು ಮಿಚೆಲ್ ಜಾನ್ಸನ್ ತಂಡದಲ್ಲಿದ್ದಾರೆ. ರ್ಯಾನ್ ಹ್ಯಾರಿಸ್ ಫಿಟ್‌ನೆಸ್ ಸಮಸ್ಯೆಯಿಂದ ಹೊರಬಂದಿಲ್ಲ. ಪೀಟರ್ ಸಿಡ್ಲ್ ಅವಕಾಶ ಕಳೆದುಕೊಂಡಿದ್ದಾರೆ. ಯುವ ವೇಗಿ ಜೋಶ್ ಹಝ್ಲೆವುಡ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಅವರು ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಲಿದ್ದಾರೆ. ಮೈಕಲ್ ಕ್ಲಾರ್ಕ್ ಬದಲಿಗೆ ಶಾನ್ ಮಾರ್ಷ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ನಾಯಕ ಸ್ಮಿತ್ ನಂ.4 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ.
ಸ್ಮಿತ್ ಆಸ್ಟ್ರೇಲಿಯದ ಟೆಸ್ಟ್ ತಂಡದ 45ನೆ ನಾಯಕ. ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯ ಕ್ರಿಕೆಟ್‌ನ ಹೊಸ ಶಕೆ ಆರಂಭವಾಗಲಿದೆ. ಮೈಕಲ್ ಕ್ಲಾರ್ಕ್ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಈ ಕಾರಣದಿಂದಾಗಿ ಸ್ಮಿತ್‌ಗೆ ನಾಯಕರಾಗುವ ಅನಿರೀಕ್ಷಿತ ಅವಕಾಶ ಸಿಕ್ಕಿದೆ. ಸ್ಮಿತ್ ಅವರು ಮೊದಲ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ್ದರು. ಅವರಿಗೆ ಟೀಮ್ ಇಂಡಿಯಾದ ವಿರುದ್ಧ ಮೊದಲ ಪರೀಕ್ಷೆ. ಅವರು ಬ್ಯಾಟಿಂಗ್‌ನಲ್ಲಿ ಡೇವಿಡ್ ವಾರ್ನರ್‌ನ್ನು ಅತಿಯಾಗಿ ಅವಲಂಬಿಸಬೇಕಾಗಿದೆ.ವಾರ್ನರ್ ಕಳೆದ ಟೆಸ್ಟ್‌ನಲ್ಲಿ ಎರಡು ಶತಕ ಜಮೆ ಮಾಡಿದ್ದರು. ಶೇನ್ ವ್ಯಾಟ್ಸನ್ ಮತ್ತು ಕ್ರಿಸ್ ರೋಜರ್ಸ್‌ ತಂಡದ ಇನಿಂಗ್ಸ್ ಆರಂಭಿಸಲಿದ್ದಾರೆ.
ಭಾರತ :  ಎಂಎಸ್ ಧೋನಿ(ನಾಯಕ), ವಿರಾಟ್ ಕೊಹ್ಲಿ, ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಸುರೇಶ್ ರೈನಾ, ವೃದ್ಧಿಮಾನ್ ಸಹಾ, ನಮನ್ ಓಜಾ, ಆರ್.ಅಶ್ವಿನ್, ಕರಣ್ ಶರ್ಮ, ರವೀಂದ್ರ ಜಡೇಜ, ಮುಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ವರುಣ್ ಆ್ಯರೊನ್, ಕೆ.ಎಲ್.ರಾಹುಲ್, ಧವಳ್ ಕುಲಕರ್ಣಿ.

Write A Comment