ಮನೋರಂಜನೆ

ಮಾಧ್ಯಮಗಳ ವಿರುದ್ಧ ಶ್ವೇತಾ ಬಸು ಗರಂ

Pinterest LinkedIn Tumblr

Shwetha-Basu-Prasad

ಹೈದರಾಬಾದ್: ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಟಾಲಿವುಡ್ ನಟಿ ಶ್ವೇತಾ ಬಸು ಪ್ರಸಾದ್ ಅವರಿಗೆ ಹೈದರಾಬಾದ್ ಹೈಕೋರ್ಟ್ ಕ್ಲೀನ್‌ಚಿಟ್ ನೀಡಿದ ಬೆನ್ನಲ್ಲೇ ನಟಿ ಅಧಿಕೃತ ಪ್ರಕರಣೆ ಮೂಲಕ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

ಹೈದರಾಬಾದ್‌ನ ಹೊಟೇಲ್‌ವೊಂದರಲ್ಲಿ ಶ್ವೇತಾ ಬಸು ವೇಶ್ಯಾವೃತ್ತಿಯಲ್ಲಿ ನಿರತಳಾಗಿದ್ದಾಗ ಪೊಲೀಸಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಳು ಎಂದು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು. ಅಲ್ಲದೆ ಅನೇಕ ಉದ್ಯಮಿಗಳು ಆಕೆಯ ಗಿರಾಕಿಗಳಾಗಿದ್ದಾರೆ ಎಂಬಂಥ ಅನೇಕ ಸುದ್ದಿಗಳು ಪ್ರಕರಟಗೊಂಡಿದ್ದವು. ಇದರಿಂದ ಬೇಸೆತ್ತ ನಟಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಅಧಿಕೃತ ಪ್ರಕಟಣೆ ಮೂಲಕ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ.

ಸತ್ಯವನ್ನು ಜಗಜ್ಜಾಹೀರು ಮಾಡುವ ಸಲುವಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಾರೆ ಪತ್ರಕರ್ತರು ಮತ್ತು ವರದಿಗಾರರನ್ನು ನೋಡುತ್ತಾ ಬೆಳೆದ ನನಗೆ ಮಾಧ್ಯಮ ಮಿತ್ರರ ಬಗ್ಗೆ ಅಪಾರ ಗೌರವವಿತ್ತು ಎಂದು ಹೇಳುವ ಮೂಲಕ ಆಗ ಹೀರೋಗಳಾಗಿದ್ದ ಪತ್ರಕರ್ತರು ಇದೀಗ ನನ್ನ ಜೀವನದಲ್ಲಿ ವಿಲನ್‌ಗಳಾಗಿದ್ದಾರೆ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ನನ್ನ ವೃತ್ತಿ ಜೀವನದಲ್ಲಿ ತಪ್ಪು ಆಯ್ಕೆಗಳನ್ನು ಮಾಡಿದೆ ಮತ್ತು ಹಣವೇ ಇಲ್ಲದಂಥ ಸ್ಥಿತಿ ತಲುಪಿದೆ. ನನ್ನ ಕುಟುಂಬಕ್ಕೆ ನನ್ನ ನೆರವು ಬೇಕಿತ್ತು. ಆದರೆ ಅವಕಾಶಗಳು ಸಿಗದೆ ಜೀವನ ನಡೆಸುವ ಎಲ್ಲಾ ದಾರಿಗಳು ಮುಚ್ಚಿದ್ದವು. ಇಂತ ಸಂದರ್ಭದಲ್ಲಿ ಕೆಲ ವ್ಯಕ್ತಿಗಳು ಹಣ ಗಳಿಸುವ ಉದ್ದೇಶದಿಂದ ನನ್ನನ್ನು ವೇಶ್ಯಾವೃತ್ತಿ ನಡೆಸಲು ಉತ್ತೇಜಿಸಿದರು. ನಾನು ಅಸಹಾಯಕಳಾಗಿದ್ದೆ ಮತ್ತು ನನಗೆ ಬೇರೆ ಆಯ್ಕೆ ಇರಲಿಲ್ಲವಾದರಿಂದ ವೇಶ್ಯಾವಾಟಿಕೆಯಲ್ಲಿ ಪಾಲ್ಗೊಳ್ಳಬೇಕಾಯಿತು. ಈ ಸಮಸ್ಯೆ ಎದುರಿಸಿದ್ದು ನಾನೊಬ್ಬಳೇ ಅಲ್ಲ, ಹಾಗೂ ಇತರ ಹಲವಾರು ನಾಯಕಿಯರು ಈ ಹಂತಕ್ಕೆ ಬಂದು ಹೋಗಿದ್ದಾರೆ. ಹೀಗೆಂದು ಬಂಧಿತಳಾಗಿದ್ದಾಗ ಶ್ವೇತಾ ಬಸು ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ವರದಿಗಳಾಗಿತ್ತು. ಪೊಲೀಸ ಬಂಧನದ ನಂತರ ನಾನು ಪುನರ್ವಸತಿ ಕೇಂದ್ರಕ್ಕೆ ಸೇರಿದ್ದೇ, ಅಲ್ಲಿ 60 ದಿನಗಳ ಕಾಲ ಇದ್ದೆ. ಹೀಗಿರುವಾಗ ಮಾಧ್ಯಮಕ್ಕೆ ಹೇಗೆ ಹೇಳಿಕೆ ನೀಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಪುನರ್ವಸತಿ ಕೇಂದ್ರದಲ್ಲಿ ನನ್ನ ಮೊಬೈಲನ್ನು ವಶಪಡಿಸಿಕೊಳ್ಳಲಾಗಿತ್ತು. ಇದರೊಂದಿಗೆ ಬಾಹ್ಯಾ ಪ್ರಪಂಚದ ಸಂಪರ್ಕವನ್ನು ಕಳೆದುಕೊಂಡಿದ್ದೆ. ಇಂತಹ ಸಂದರ್ಭದಲ್ಲಿ ನನಗೆ ಪತ್ರಿಕೆ, ಟಿವಿ, ಇಂಟರ್ನೆಟ್ ಅಥವಾ ರೇಡಿಯೋವನ್ನಾಗಲೀ ನಾನು ನೋಡುವಂತಿರಲಿಲ್ಲ. ಹೊರ ಪ್ರಪ್ರಂಚದಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಗೊತ್ತೆ ಇರಲಿಲ್ಲ. ಪುನರ್ವಸತಿ ಕೇಂದ್ರದಲ್ಲಿದ್ದ ಎರಡು ತಿಂಗಳು ನಾನು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದೆ, ಅಲ್ಲದೆ 12 ಪುಸ್ತಕಗಳನ್ನು ಓದಿ ಮುಗಿಸಿದ್ದೇ ಎಂದು ಶ್ವೇತಾ ಬಸು ಹೇಳಿದ್ದಾರೆ.

ನನ್ನ ಗ್ರಹಚಾರಕ್ಕೆ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಅನೇಕ ವರದಿಗಳು ಬಿತ್ತರಗೊಂಡವು ಇವುಗಳಿಂದ ನನ್ನ ಖಾಸಗಿ ಜೀವನಕ್ಕೆ ದೊಡ್ಡ ಪೆಟ್ಟುಬಿದ್ದವು. ಅದೃಷ್ಠವಶಾತ್ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ನನ್ನ ಕುಟುಂಬವಾಗಲಿ, ಸ್ನೇಹಿತರಾಗಲಿ ಅಥವಾ ಸ್ನೇಹ ಬಳಗದವರಾಗಲೀ ನಂಬಲಿಲ್ಲ. ಅದು ತನ್ನ ಹೇಳಿಕೆ ಅಲ್ಲ ಎಂದು ಈ ಪ್ರಪಂಚದಲ್ಲಿರುವ ಎಲ್ಲರಿಗೂ ಮತ್ತೊಮ್ಮೆ ತಾನು ಸ್ಪಷ್ಟಪಡಿಸುವುದಾಗಿ ಶ್ವೇತಾ ಬಸು ವಿಷಾದ ವ್ಯಕ್ತಪಡಿಸಿದ್ದಾರೆ.

ನನ್ನನ್ನು ಬಂಧಿಸಿದ ದಿನ ಅಂದರೆ ಆಗಸ್ಟ್ 30ರಂದು ಸಂತೋಷಮ್ ಪ್ರಶಸ್ತಿ ಸಮಾರಂಭ ಇತ್ತು. ಹೀಗಾಗಿ ನಾನು ಹೈದರಾಬಾದ್‌ನಲ್ಲಿದ್ದೆ. ಯಾವುದೇ ಮಧ್ಯಮರ್ತಿ ನನ್ನ ಟಿಕೆಟ್ ಬುಕ್ ಮಾಡಿರಲಿಲ್ಲ. ಸಮಾರಂಭದ ಆಯೋಜಕರು ಟಿಕೆಟ್ ಮತ್ತು ವಸತಿ ಸೌಲಭ್ಯವನ್ನು ಒದಗಿಸಿದ್ದರು. ಸಮಾರಂಭದ ಇತರ ಅತಿಥಿಗಳೂ ಇದೇ ಹೊಟೇಲ್‌ನಲ್ಲಿದ್ದರು. ಹೀಗೆಂದು ಶ್ವೇತಾ ಬಸು ಸ್ಪಷ್ಟಪಡಿಸಿದ್ದಾರೆ. ಸಮಾರಂಭದ ಸಂಪೂರ್ಣ ವೇಳಾಪಟ್ಟಿ ತನ್ನ ಇಮೇಲ್ ಇನ್ ಬಾಕ್ಸ್‌ನಲ್ಲಿದೆ ಎಂದು ಶ್ವೇತಾ ಬಸು ಹೇಳಿದ್ದಾರೆ.

Write A Comment