ಮನೋರಂಜನೆ

ಟ್ವೆಂಟಿ-20: ಪಾಕಿಸ್ತಾನಕ್ಕೆ ಸುಲಭ ಜಯ

Pinterest LinkedIn Tumblr

ahmed-pakistnaದುಬೈ, ಡಿ.5: ಆರಂಭಿಕ ಬ್ಯಾಟ್ಸ್‌ಮನ್ ಸರ್ಫ್ರಾಝ್ ಅಹ್ಮದ್ ದಾಖಲಿಸಿದ ಜೀವನಶ್ರೇಷ್ಠ ಇನಿಂಗ್ಸ್(ಅಜೇಯ 76) ಸಹಾಯದಿಂದ ಪಾಕಿಸ್ತಾನ ತಂಡ ನ್ಯೂಝಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದುಕೊಂಡಿದೆ.

ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 136 ರನ್ ಸುಲಭ ಸವಾಲು ಪಡೆದ ಪಾಕ್ ಅಹ್ಮದ್ ಅರ್ಧಶತಕ (76 ರನ್, 64 ಎ, 8 ಬೌಂ, 2 ಸಿ.) ನೆರವಿನಿಂದ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು. ಈ ಗೆಲುವಿನೊಂದಿಗೆ ಪಾಕ್ ಎರಡು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಪಾಕ್ ಮುಹಮ್ಮದ್ ಹಫೀಝ್ (2) ಹಾಗೂ ಹಾರಿಸ್ ಸೊಹೈಲ್ (11)ರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತ್ತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲೆಂಡ್ ಕೋರೆ ಆ್ಯಂಡರ್ಸನ್(48 ರನ್, 37 ಎ.1 ಬೌಂ, 4 ಸಿ.) ಏಕಾಂಗಿ ಹೋರಾಟದಿಂದ ಸಾಧಾರಣ ಮೊತ್ತ ಗಳಿಸಿತು. ತಂಡ 15 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಆಗಮಿಸಿದ್ದ ಆ್ಯಂಡರ್ಸನ್ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ (32) ರೊಂದಿಗೆ 4ನೆ ವಿಕೆಟ್‌ಗೆ 46 ರನ್ ಹಾಗೂ ಲೂಕ್ ರಾಂಚಿ (33) ಅವರೊಂದಿಗೆ 5ನೆ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿದರು.

ಪಾಕ್ ಬೌಲಿಂಗ್‌ನಲ್ಲಿ ಇಬ್ಬರು ವೇಗಿಗಳಾದ ಸೊಹೈಲ್ ತನ್ವೀರ್ (2-24) ಹಾಗೂ ಮುಹಮ್ಮದ್ ಇರ್ಫಾನ್ (2-27) ತಲಾ ಎರಡು ವಿಕೆಟ್ ಪಡೆದರು. ನಾಯಕ ಶಾಹಿದ್ ಅಫ್ರಿದಿ, ರಝಾ ಹಸನ್ ಹಾಗೂ ಅನ್ವರ್ ಅಲಿ ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್: 20 ಓವರ್‌ಗಳಲ್ಲಿ 135/7
(ಆ್ಯಂಡರ್ಸನ್ 48, ರಾಂಚಿ 33, ತನ್ವೀರ್ 2-24, ಇರ್ಫಾನ್ 2-27)
ಪಾಕಿಸ್ತಾನ: 19.1 ಓವರ್‌ಗಳಲ್ಲಿ 140/3
(ಸರ್ಫಾಝ್ ಅಜೇಯ 76, ಉಮರ್ ಅಕ್ಮಲ್ ಅಜೇಯ 27, ಮೆಕ್ಲಿನಘನ್ 1-21).

Write A Comment