ಮನೋರಂಜನೆ

ಹಾಕಿ: ಚಾಂಪಿಯನ್ಸ್ ಟ್ರೋಫಿ ಅಭ್ಯಾಸ ಪಂದ್ಯ: ಆಸ್ಟ್ರೇಲಿಯದ ವಿರುದ್ಧ ಭಾರತಕ್ಕೆ ಜಯ

Pinterest LinkedIn Tumblr

india-aus-champions-trophy

ಭುವನೇಶ್ವರ, ಡಿ.4: ಚಾಂಪಿಯನ್ಸ್ ಟ್ರೋಫಿ ಅಭ್ಯಾಸ ಪಂದ್ಯದಲ್ಲಿ ಭಾರತದ ಹಾಕಿ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು 2-0 ಅಂತರದಿಂದ ಮಣಿಸಿದೆ. ಡಿ.6 ರಿಂದ ಆರಂಭವಾಗಲಿರುವ ಟೂರ್ನಮೆಂಟ್‌ನಲ್ಲಿ ‘ಬಿ’ ಗುಂಪಿನಲ್ಲಿರುವ ಭಾರತ ಗುರುವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ಸ್ ಟ್ರೋಫಿಗೆ ಭರ್ಜರಿ ತಯಾರಿ ನಡೆಸಿದೆ.

ಮೊದಲ ಹಾಗೂ ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಒಂದೂ ಗೋಲನ್ನು ದಾಖಲಿಸಲು ಸಾಧ್ಯವಾಗಲಿಲ್ಲ. ತೃತೀಯಾರ್ಧದಲ್ಲಿ ಭಾರತದ ಗುರ್ಜಿಂದರ್ ಸಿಂಗ್ ಹಾಗೂ ಎಸ್.ವಿ. ಸುನೀಲ್ ತಲಾ ಒಂದು ಗೋಲು ಬಾರಿಸಿದರು.

‘‘ನಾವು ಆಡುವ ಪ್ರತಿ ಪಂದ್ಯದಲ್ಲೂ ನಮ್ಮ ದೌರ್ಬಲ್ಯವನ್ನು ಸುಧಾರಿಸಿಕೊಳ್ಳಲು ಹೆಚ್ಚು ಒತ್ತು ನೀಡುವೆವು. ಪಂದ್ಯದಿಂದ ಪಂದ್ಯಕ್ಕೆ ಪ್ರಗತಿ ಸಾಧಿಸಲು ಬಯಸಿದ್ದೇವೆ. ವಿಶ್ವದ ನಂ.1 ತಂಡ ಆಸ್ಟ್ರೇಲಿಯದ ವಿರುದ್ಧ ತಂಡ ಚೆನ್ನಾಗಿ ಆಡಿದೆ.

ಪಂದ್ಯದಲ್ಲಿ ನಮಗೆ ಹಲವು ಬಾರಿ ಗೋಲು ಗಳಿಸುವ ಅವಕಾಶ ಲಭಿಸಿತ್ತು’’ ಎಂದು ಭಾರತದ ಉನ್ನತ ಪ್ರದರ್ಶನದ ನಿರ್ದೇಶಕ ಹಾಗೂ ಕೋಚ್ ರೊಲ್ಯಾಂಟ್ ಒಲ್ಟಮನ್ಸ್ ಹೇಳಿದ್ದಾರೆ.

Write A Comment