ಮನೋರಂಜನೆ

ಫಿಲಿಪ್‌ ಹ್ಯೂಸ್‌ ಅಂತ್ಯಕ್ರಿಯೆ ಇಂದು

Pinterest LinkedIn Tumblr

pvec03xhughes

ಸಿಡ್ನಿ : ತಲೆಗೆ ಚೆಂಡು ಬಡಿದು ದಾರುಣ ಅಂತ್ಯ ಕಂಡ ಆಸ್ಟ್ರೇಲಿಯದ ಕ್ರಿಕೆಟಿಗ ಫಿಲಿಪ್‌ ಹ್ಯೂಸ್‌ ಅವರ ಅಂತ್ಯಕ್ರಿಯೆ ಬುಧವಾರ ಮ್ಯಾಕ್ಸ್‌ವಿಲ್ಲೆಯಲ್ಲಿ ನಡೆಯಲಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಶೆಫೀಲ್ಡ್‌ ಶೀಲ್ಡ್‌ ಟೂರ್ನಿಯ ಪಂದ್ಯದ ವೇಳೆ ಸೀನ್ ಅಬಾಟ್‌ ಎಸೆದ ಬೌನ್ಸರ್‌ನಲ್ಲಿ ಚೆಂಡು ಹ್ಯೂಸ್‌ ತಲೆಗೆ ಬಡಿದಿತ್ತು. ಗಂಭೀರ ಗಾಯಗೊಂಡಿದ್ದ ಅವರು ಎರಡು ದಿನಗಳ ನಂತರ ನವೆಂಬರ್‌ 27 ರಂದು ಮೃತಪಟ್ಟಿದ್ದರು.

ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಎಲ್ಲ ಆಟಗಾರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವರು. ನಾಯಕ ಮೈಕಲ್‌ ಕ್ಲಾರ್ಕ್‌ ಮತ್ತು ಆರಂಭಿಕ ಆಟಗಾರ ಆ್ಯರನ್‌ ಫಿಂಚ್‌ ಅಂತ್ಯಕ್ರಿಯೆಯ ವೇಳೆ ಹ್ಯೂಸ್‌ ಕುಟುಂಬ ಸದಸ್ಯರ ಜತೆ ಶವಪೆಟ್ಟಿಗೆ ಹೊರಲಿದ್ದಾರೆ.

ಮಾಜಿ ಆಟಗಾರರಾದ ಸ್ಟೀವ್‌ ವಾ, ಶೇನ್‌ ವಾರ್ನ್‌, ಮಾರ್ಕ್‌ ಟೇಲರ್‌, ರಿಕಿ ಪಾಂಟಿಂಗ್‌, ಆ್ಯಡಮ್‌ ಗಿಲ್‌ಕ್ರಿಸ್ಟ್‌, ಜಸ್ಟಿನ್ ಲ್ಯಾಂಗರ್‌ ಹಾಗೂ ನ್ಯೂಜಿಲೆಂಡ್‌ ತಂಡದ ಮಾಜಿ ಆಟಗಾರ ರಿಚರ್ಡ್‌ ಹ್ಯಾಡ್ಲಿ ಅವರೂ ಈ ವೇಳೆ ಹಾಜರಿರುವರು.

ಭಾರತ ತಂಡದ ಆಟಗಾರರಾದ ರೋಹಿತ್‌ ಶರ್ಮ, ಮುರಳಿ ವಿಜಯ್‌, ನಿರ್ದೇಶಕ ರವಿ ಶಾಸ್ತ್ರಿ, ಕೋಚ್‌ ಡಂಕನ್‌ ಫ್ಲೆಚರ್‌ ಮತ್ತು ಮ್ಯಾನೇಜರ್‌ ಅರ್ಶದ್‌ ಆಯುಬ್‌ ಅವರೊಂದಿಗೆ ವಿರಾಟ್‌ ಕೊಹ್ಲಿ ಕೂಡ ಪಾಲ್ಗೊಳ್ಳಲಿದ್ದಾರೆ.

ಅಭ್ಯಾಸ ಆರಂಭಿಸಿದ ಸೀನ್ ಅಬಾಟ್‌
ಸಿಡ್ನಿ: ಫಿಲಿಪ್‌ ಹ್ಯೂಸ್‌ ಅವರ ಸಾವಿನಿಂದ ಉಂಟಾಗಿದ್ದ ಮಾನಸಿಕ ಆಘಾತದಿಂದ ಸೀನ್‌ ಅಬಾಟ್‌ ಹೊರಬಂದಿದ್ದು, ಮತ್ತೆ ಅಂಗಳಕ್ಕಿಳಿದಿದ್ದಾರೆ.

ನ್ಯೂ ಸೌತ್‌ವೇಲ್ಸ್‌ ತಂಡವನ್ನು ಪ್ರತಿನಿಧಿಸುತ್ತಿರುವ 22ರ ಹರೆಯದ ಅಬಾಟ್‌ ಮಂಗಳವಾರ ಎಸ್‌ಸಿಜಿ ಮೈದಾನದ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡಿ ದ್ದಾರೆ. ಹ್ಯೂಸ್‌ ನಿಧನದಿಂದ ಅಬಾಟ್‌ ಆಘಾತಕ್ಕೆ ಒಳಗಾಗಿದ್ದರು. ಅವರು ಕ್ರಿಕೆಟ್‌ನಿಂದಲೇ ದೂರ ಸರಿಯುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಅಬಾಟ್‌ ಬೌಲಿಂಗ್‌ ವೇಳೆ ಚೆಂಡು ಹ್ಯೂಸ್‌ ತಲೆಗೆ ಬಡಿದಿತ್ತು.

ಹ್ಯೂಸ್‌ ಅಂತ್ಯಕ್ರಿಯೆಯಲ್ಲಿ ನ್ಯೂ ಸೌತ್‌ ವೇಲ್ಸ್‌ ತಂಡದ ಆಟಗಾರರ ಜತೆ ಅಬಾಟ್‌ ಕೂಡಾ ಪಾಲ್ಗೊಳ್ಳಲಿದ್ದಾರೆ ಎಂದು ತಂಡದ ಮುಖ್ಯಸ್ಥ ಆ್ಯಂಡ್ರ್ಯೂ ಜೋನ್ಸ್‌ ತಿಳಿಸಿದ್ದಾರೆ.

Write A Comment