ಬೆಂಗಳೂರು: ಸ್ಯಾಂಡಲ್‌ವುಡ್ ಲಕ್ಕಿ ಸ್ಟಾರ್, ರಾಜಕಾರಣಿ ರಮ್ಯಾ (ದಿವ್ಯ ಸ್ಪಂದನ) ಇಂದು ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
ಆದರೆ ರಮ್ಯಾ ಈಗೆಲ್ಲಿದ್ದಾರೆ? ಎಂಬುದು ಅಭಿಮಾನಿಗಳ ಪ್ರಶ್ನೆ. ಸೋಷ್ಯಲ್ ನೆಟ್ವರ್ಕ್ ಸೈಟ್ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಿದ್ದ ರಮ್ಯಾ, ಎಲ್ಲಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ? ಹೇಗೆ ಆಚರಿಸಿಕೊಂಡಿದ್ದಾರೆ? ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ.
ಈ ಹಿಂದೆ ಸೋಷ್ಯಲ್ ನೆಟ್ವರ್ಕ್ ಸೈಟ್‌ಗಳಲ್ಲಿ ಸಕ್ರಿಯವಾಗಿರುತ್ತಿದ್ದ ರಮ್ಯಾ ಟ್ವೀಟರ್‌ನಲ್ಲಿ ಕೊನೆಯ ಟ್ವೀಟ್ ಮಾಡಿದ್ದು ನವೆಂಬರ್ 7ನೇ ತಾರೀಖಿಗೆ.
ರಮ್ಯಾ ಎಲ್ಲಿದ್ದಾಳೆ? ಎಂದು ಟ್ವೀಟರ್‌ನಲ್ಲಿ ಹುಡುಕಿದರೆ, ನ್ಯೂಯಾರ್ಕ್‌ನಲ್ಲಿ ಐಆರ್‌ಸಿ ಫ್ರೀಡಂ ಅವಾರ್ಡ್ ಡಿನ್ನರ್‌ನಲ್ಲಿ ಪಾಲ್ಗೊಂಡ ಫೋಟೋ ಸಿಗುತ್ತದೆ. ರಮ್ಯಾ ಇದನ್ನು ಅಪ್‌ಲೋಡ್ ಮಾಡಿದ್ದು ನವೆಂಬರ್ 7 ನೇ ತಾರೀಖಿಗೆ, ಅದು ಬಿಟ್ಟರೆ ಟ್ವೀಟರ್‌ನಲ್ಲಿ ಇಲ್ಲಿಯವರೆಗೆ ಯಾವುದೇ ಅಪ್‌ಡೇಟ್‌ಗಳು ಅಲ್ಲಿಲ್ಲ.
ಇತ್ತ ಫೇಸ್‌ಬುಕ್‌ನಲ್ಲಿ ನವೆಂಬರ್ 7ರಂದು ಪ್ರೊಫೈಲ್ ಫೋಟೋ ಚೇಂಜ್ ಮಾಡಿರುವ ರಮ್ಯಾ ಇವತ್ತು ಫೇಸ್ಬುಕ್ಗೆ ಲಾಗಿನ್ ಆಗಿದ್ದು , ಸಂಜೆ 3.11ಕ್ಕೆ ತಮ್ಮ ಹುಟ್ಟುಹಬ್ಬಕ್ಕೆ ಹಾರೈಸಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿ ಸ್ಟೇಟಸ್ ಅಪ್‌ಡೇಟ್ ಮಾಡಿದ್ದಾರೆ.
ರಮ್ಯಾಳ ಫೇಸ್‌ಬುಕ್ ಪೇಜ್‌ನಲ್ಲಿ ಹಲವಾರು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, ಮಿಸ್ ಯೂ ಎಂದು ಬರೆದಿದ್ದಾರೆ.
ಹುಟ್ಟುಹಬ್ಬದ ಶುಭಾಶಯಗಳು ರಮ್ಯಾ…
