ಮನೋರಂಜನೆ

ಕರ್ನಾಟಕ ಚಲನಚಿತ್ರ ಅಕಾಡೆಮಿ: ರಾಜೇಂದ್ರ ಸಿಂಗ್‌ ಬಾಬು ಅಧಿಕಾರ ಸ್ವೀಕಾರ

Pinterest LinkedIn Tumblr

pvec28BRY KCA-3

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾ­ಡೆಮಿಯ ನೂತನ ಅಧ್ಯಕ್ಷರಾಗಿ ನಿರ್ದೇ­­ಶಕ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಅವರು ಗುರುವಾರ ಅಧಿಕಾರ ವಹಿಸಿಕೊಂಡರು.

ಅಕಾಡೆಮಿಯಲ್ಲಿ ಮಧ್ಯಾಹ್ನ ನಡೆದ ಸಮಾ­ರಂಭದಲ್ಲಿ ಅಧ್ಯಕ್ಷರ ಕೊಠಡಿ­ಯಲ್ಲಿ ಕುಟುಂಬದ ಸದಸ್ಯರೊಂದಿಗೆ ಪೂಜೆ ಸಲ್ಲಿಸಿ ನಂತರ ಅಧ್ಯಕ್ಷರ ಆಸನ­ದಲ್ಲಿ ಆಸೀನರಾದರು.

ನಂತರ ಸುದ್ದಿಗಾರರೊಂದಿಗೆ ಮಾತ­ನಾ­ಡಿದ ಸಿಂಗ್‌, ‘1970–90ರ ದಶಕ­ಗ­ಳಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ನಿರ್ಮಾ­ಣದಿಂದಾಗಿ ಕನ್ನಡ ಚಿತ್ರ­ರಂಗವು ಮೆರುಗಿ­ನಿಂದ ತುಂಬಿತ್ತು. ಪ್ರಸ್ತುತ ತುಂಬ ಸಂಕಷ್ಟದಲ್ಲಿದೆ. ಕನ್ನಡ ಚಿತ್ರಗಳು ಕರ್ನಾ­ಟಕದಲ್ಲಿಯೇ ಪ್ರದ­ರ್ಶನ ಕಾಣ­ದಂತಹ ಸ್ಥಿತಿಗೆ ತಲುಪಿವೆ. ಹಂಚಿಕೆ­ದಾ­ರರು ಕನ್ನಡ ಚಿತ್ರರಂಗ ಬಿಟ್ಟು ಹೋಗು­ತ್ತಿ­ದ್ದಾರೆ. ಕೆಲ ಪ್ರದರ್ಶ­ಕರು ಕನ್ನಡ ಚಿತ್ರಗ­ಳನ್ನು ಪ್ರದರ್ಶಿ­ಸುತ್ತಿಲ್ಲ. ಹೀಗಾಗಿ, ನಮ್ಮ ಚಿತ್ರ­ರಂಗ ದಿನೇ ದಿನೇ ಸೊರಗುತ್ತಿದೆ’ ಎಂದು ಹೇಳಿದರು.

‘ಉತ್ತಮ ಅಭಿರುಚಿಯ ಚಿತ್ರ ತಯಾರಿಸಿ ಎನ್ನುವ ಬೇಡಿಕೆ ಬರುತ್ತಲೇ ಇವೆ. ಆದರೆ ನಮ್ಮಲ್ಲಿ ಉತ್ತಮ ಚಿತ್ರಗಳು ಬರುತ್ತಿಲ್ಲ. ಬಂದರೂ ಪ್ರದರ್ಶನ ಕಾಣುತ್ತಿಲ್ಲ. ಆದ್ದರಿಂದ  ಮುಂಬರುವ ದಿನಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರು, ನಿರ್ದೇಶಕರು ಹಾಗೂ ಕಾರ್ಮಿಕರ ಸಂಘಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಚಿತ್ರರಂಗದ ಎಲ್ಲರ ಸಹಕಾರದಿಂದ ನ್ಯೂನತೆಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತೇನೆ’ ಎಂದರು.

ಚಲನಚಿತ್ರ ಕಾರ್ಮಿಕ ಒಕ್ಕೂಟ ಅಧ್ಯಕ್ಷ ಅಶೋಕ್, ನಟ ಸುನೀಲ್‌ ಪುರಾಣಿಕ್‌ ಮತ್ತು ಚಿತ್ರರಂಗದ ಅನೇಕ ಹಿತೈಷಿಗಳು ಬಾಬು ಅವರಿಗೆ ಶುಭ ಕೋರಿದರು.

ನಿರ್ದೇಶಕರ ಸಂಘದಿಂದ ಮೊದಲ ಮನವಿ
ರಾಜೇಂದ್ರ ಸಿಂಗ್‌ ಬಾಬು ಅವರು ಅಧಿಕಾರ ವಹಿಸಿಕೊಂಡು ಅಧ್ಯಕ್ಷರ ಕುರ್ಚಿಯಲ್ಲಿ ಆಸೀನರಾಗುತ್ತಿದ್ದಂತೆ ಅವರಿಗೆ ಚಲನಚಿತ್ರ ನಿರ್ದೇಶಕರ ಸಂಘದ ಪದಾಧಿಕಾರಿಗಳು ಮೊದಲ ಮನವಿ ಪತ್ರ ಸಲ್ಲಿಸಿದರು.

ಸಂಘದ ವತಿಯಿಂದ 15 ವರ್ಷ­ದಿಂದ ನಿರ್ದೇಶನ ತರಬೇತಿ  ನೀಡಲಾ­ಗುತ್ತಿದೆ. ಇದೀಗ, 7ನೇ ಅಂತರ­ರಾಷ್ಟ್ರೀಯ ಚಲನಚಿತ್ರೋತ್ಸವ­ದಲ್ಲಿ ಭಾಗವ­ಹಿಸಲು ತರಬೇತಿ ವಿದ್ಯಾ­ರ್ಥಿ­ಗಳು, ಸಹ ಮತ್ತು ಸಹಾಯಕ ನಿರ್ದೇಶಕರು ಉತ್ಸುಕರಾ­ಗಿ­ದ್ದಾರೆ. ಅವರಿಗೆ ರಿಯಾ­ಯಿತಿ ದರದ ಪಾಸ್‌ ನೀಡಬೇಕೆಂದು ಮನವಿ ಮಾಡಿದರು.­ಆಗ ಸಿಂಗ್‌ ಅವರು ಪತ್ರದ ಮೇಲೆ ‘ನೋಡಿ, ಪರಿಶೀಲಿಸಿ’ ಎಂದು ಷರಾ ಬರೆದು ಸಹಿ ಹಾಕಿದರು.

Write A Comment