ಮನೋರಂಜನೆ

ನನ್ನ ಹೆಸರು ಮನೋಜ್ ಕುಮಾರ್… ನಿಮಗೆ ಗೊತ್ತಿರಲಿ: ಹೈಕೋರ್ಟ್ ಸಹಾಯದಿಂದ ಅರ್ಜುನ ಪ್ರಶಸ್ತಿ ಪಡೆದ ಬಾಕ್ಸರ್; ಆಯ್ಕೆ ಸಮಿತಿಯ ಅಧ್ಯಕ್ಷ ಕಪಿಲ್ ದೇವ್ ವಿರುದ್ಧ ದಾಳಿ

Pinterest LinkedIn Tumblr

manoj

ಹೊಸದಿಲ್ಲಿ, ನ.26: ‘‘ನನ್ನ ಹೆಸರು ಮನೋಜ್ ಕುಮಾರ್. ಒಂದು ವೇಳೆ ನಿಮಗೆ ಗೊತ್ತಿಲ್ಲದಿದ್ದರೆ ನೆನಪಿರಲಿ’’ ಹೀಗೆಂದವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ ಬಾಕ್ಸರ್ ಮನೋಜ್ ಕುಮಾರ್.
ಅರ್ಜುನ ಪ್ರಶಸ್ತಿ ಕೈ ತಪ್ಪಿರುವ ಹಿನ್ನೆಲೆಯಲ್ಲಿ ದಿಲ್ಲಿ ನ್ಯಾಯಾಲಯ ಮೊರೆ ಹೋಗಿ ಆ ಮೂಲಕ ಪ್ರಶಸ್ತಿಗೆ ಭಾಜನರಾದ ಮನೋಜ್ ಕುಮಾರ್‌ಗೆ ಕ್ರೀಡಾ ಸಚಿವ ಸರ್ವಾನಂದ ಸೊನೊವಾಲಾ ಅವರು ಅರ್ಜುನ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಮನೋಜ್ ಕುಮಾರ್ ಅವರ ಹೆಸರನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದ ಆಯ್ಕೆ ಸಮಿತಿಯು ಲೀಸ್ಟ್‌ನಿಂದ ಕೈ ಬಿಟ್ಟಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಗೆಲುವು ಸಾಧಿಸಿದ ಮನೋಜ್ ಕುಮಾರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದೊರೆತ ಅವಕಾಶವನ್ನು ತಮಗೆ ಪ್ರಶಸ್ತಿ ನಿರಾಕರಿಸಿದ ಕಪಿಲ್ ದೇವ್ ನೇತೃತ್ವದ ಆಯ್ಕೆ ಸಮಿತಿಯ ಮೇಲಿರುವ ಸಿಟ್ಟನ್ನು ಹೊರಗೆಡವಲು ಬಳಿಸಿಕೊಂಡರು.
‘‘ಕಪಿಲ್ ದೇವ್ ಅವರನ್ನು ಪ್ರಶಸ್ತಿ ತಪ್ಪಿದ ವಿಚಾರದಲ್ಲಿ ಸಂಪರ್ಕಿಸಿದಾಗ, ನಿಮಗೆೆ ನನ್ನ ಪರಿಚಯ ಇದೆಯೇ?’’ ಎಂದು ಪ್ರಶ್ನಿಸಿದ್ದರು. ‘‘ ನಾನು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಪಡೆದ ಬಾಕ್ಸರ್ ಮನೋಜ್ ಕುಮಾರ್. ನನ್ನ ಹೆಸರನ್ನು ಪ್ರಶಸ್ತಿಯ ಲೀಸ್ಟ್‌ನಿಂದ ಕೈ ಬಿಟ್ಟು ಕಂಚು ಪಡೆದವರನ್ನು ಸೇರಿಸಿಕೊಂಡಿರುವಿರಿ’’ ಎಂದು ಕಪಿಲ್ ಅವರಿಗೆ ಮಾಹಿತಿ ನೀಡಿದ್ದೆ. ಕಪಿಲ್ ದೇವ್ ನನ್ನ ಮಾತಿಗೆ ಕಿವಿಗೊಡಲಿಲ್ಲ. ಅವರು ‘‘ ನಿಮ್ಮಲ್ಲಿ ಈ ವಿಚಾರ ಮಾತನಾಡಲು ಬಯಸುವುದಿಲ್ಲ ’’ ಎಂದು ಹೇಳಿ ಫೋನ್ ಕಟ್ ಮಾಡಿದ್ದರು.
‘‘ಇಂದು ನಾನು ಮತ್ತೆ ಕಪಿಲ್ ದೇವ್‌ಗೆ ಹೇಳುತ್ತಿರವೆನು ನಾನು ಮನೋಜ್ ಕುಮಾರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ ಬಾಕ್ಸರ್ ಎಂಬ ವಿಚಾರ ನಿಮಗೆ ಗೊತ್ತಿರಲಿ’’ ಎಂದು ಕಪಿಲ್ ದೇವ್ ವಿರುದ್ಧ ಮನೋಜ್ ಕುಮಾರ್ ದಾಳಿ ನಡೆಸಿದರು.
‘‘ ಬಾಕ್ಸಿಂಗ್ ನನ್ನ ಕೆಲಸ. ಇದರಲ್ಲಿ ಸಾಧಿಸಿರುವ ಸಾಧನೆಯನ್ನು ಮುಂದಿಟ್ಟು ನಾನು ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದೆ. ಆದರೆ ನನ್ನನ್ನು ಕಡೆಗಣಿಸಲಾಯಿತು. ನನಗೆ ಪ್ರಶಸ್ತಿ ನಿರಾಕರಿಸಲು ನನ್ನ ವಿರುದ್ಧ ಡೋಪಿಂಗ್ ಆರೋಪ ಯಾರು ಮಾಡಿದವರು ಯಾರೆಂದು ಗೊತ್ತಿಲ್ಲ. ನನ್ನ ವಿರುದ್ಧದ ಆರೋಪದ ನಿರಾಧಾರ’’ ಎಂದು ಮನೋಜ್ ಕುಮಾರ್ ಹೇಳಿದರು.
ಕಪಿಲ್‌ದೇವ್ ನೇತೃತ್ವದ ಪ್ರಶಸ್ತಿಯ ಆಯ್ಕೆ ಸಮಿತಿಯು ಮನೋಜ್ ಕುಮಾರ್ ಅವರನ್ನು ಕೈ ಬಿಟ್ಟು ಕಂಚು ಪಡೆದ ಬಾಕ್ಸರ್ ಜೈ ಭಗವಾನ್ ಹೆಸರನ್ನು ಪಟ್ಟಯಲ್ಲಿ ಸೇರಿಸಿಕೊಂಡಿತ್ತು.
ಮನೋಜ್ ಕುಮಾರ್ ಈ ವಿಚಾರದಲ್ಲಿ ಆಘಾತಗೊಂಡಿದ್ದರು. ಕ್ರೀಡಾ ಸಚಿವರಿಗೆ ದೂರು ನೀಡಿ ಸಮಸ್ಯೆಯನ್ನು ಬಗೆಹರಿಸುವಂತೆ ಕೇಳಿಕೊಂಡಿದ್ದರು. ಕ್ರೀಡಾ ಸಚಿವರು ಪ್ರಶಸ್ತಿಗೆ ಆಯ್ಕೆಗೆ ನಡೆಯುವ ಪರಿಶೀಲನಾ ಸಭೆಯಲ್ಲಿ ಈ ತಪ್ಪನ್ನು ಸರಿಪಡಿಸುವ ಭರವಸೆಯನ್ನು ಮನೋಜ್ ಕುಮಾರ್‌ಗೆ ನೀಡಿದ್ದರು. ಆದರೆ ಪರಿಶೀಲನಾ ಸಭೆಯಲ್ಲಿ ಮನೋಜ್ ಕುಮಾರ್‌ಗೆ ನ್ಯಾಯ ಸಿಗಲಿಲ್ಲ. ಕ್ರೀಡಾ ಸಚಿವರ ಭರವಸೆ ಈಡೇರಲಿಲ್ಲ. ಇದನ್ನು ಪ್ರಶ್ನಿಸಿ ಮನೋಜ್ ಕುಮಾರ್ ದಿಲ್ಲಿ ಹೈಕೋರ್ಟ್‌ನ ಮೊರೆ ಹೋಗಿ, ಹೋರಾಟದ ಮೂಲಕ ಪ್ರಶಸ್ತಿ ಪಡೆಯುವ ಅರ್ಹತೆ ಗಿಟ್ಟಿಸಿಕೊಂಡಿದ್ದರು.

Write A Comment