ಮನೋರಂಜನೆ

ಫೆಡರರ್ ಮುಡಿಗೆ ಡೇವಿಸ್‌ಕಪ್

Pinterest LinkedIn Tumblr

davis-cup__

ಝೂರಿಕ್, ನ.24: ಹದಿನೇಳು ಗ್ರಾನ್‌ಸ್ಲಾಮ್ ಪ್ರಶಸ್ತಿ, ಆರು ಎಟಿಪಿ ವರ್ಷಾಂತ್ಯದ ಪ್ರಶಸ್ತಿ, 23 ಮಾಸ್ಟರ್ಸ್‌ ಸರಣಿ ಪ್ರಶಸ್ತಿ, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಹಾಗೂ ಇದೀಗ ಸ್ವಿಟ್ಜರ್‌ರ್ಲೆಂಡ್‌ನ ಪರ ಡೇವಿಸ್ ಕಪನ್ನು ಜಯಿಸಿರುವ ರೋಜರ್ ಫೆಡರರ್ ವೃತ್ತಿಜೀವನದಲ್ಲಿ ಎಲ್ಲ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಫೆಡರರ್ 16 ವರ್ಷಗಳ ನಂತರ ಟೆನಿಸ್‌ನ ಎಲ್ಲ ಪ್ರಶಸ್ತಿಯನ್ನು ಜಯಿಸಿದ್ದಾರೆ. ‘‘2003ರಲ್ಲಿ ಮೊದಲ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಕ್ಷಣ ಅತ್ಯಂತ ಮಧುರವಾಗಿತ್ತು. ನನ್ನ ವೃತ್ತಿಜೀವನದಲ್ಲಿ ಒಮ್ಮೆಯಾದರೂ ಡೇವಿಸ್ ಕಪ್ ಗೆಲ್ಲುತ್ತೇನೆಂಬ ವಿಶ್ವಾಸ ನನಗಿತ್ತು. ಎಲ್ಲರನ್ನು ಸಂತೋಷಗೊಳಿಸುವುದು ತುಂಬಾ ಕಷ್ಟಕರ. ನಾವು ಒಂದು ತಂಡವಾಗಿ ಡೇವಿಸ್ ಕಪ್ ಗೆದ್ದುಕೊಂಡಿದ್ದಕ್ಕೆ ಸಂತಸವಾಗುತ್ತಿದೆ’’ ಎಂದು ಫೆಡರರ್ ಪ್ರತಿಕ್ರಿಯಿಸಿದ್ದಾರೆ.

Write A Comment