ಮನೋರಂಜನೆ

ಸೌರವ್ ಘೋಷಾಲ್ ಶುಭಾರಂಭ

Pinterest LinkedIn Tumblr

-sourav

ದೋಹಾ, ನ.15: ಭಾರತದ ಅಗ್ರ ಆಟಗಾರ ಸೌರವ್ ಘೋಷಾಲ್ ಇಲ್ಲಿ ಇಂದು ನಡೆದ ಪಿಎಸ್‌ಎ ವಿಶ್ವ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಇಂದು ಶುಭಾರಂಭ ಮಾಡಿದ್ದಾರೆ. ಇಂದು ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿಶ್ವದ ನಂ.18ನೆ ಆಟಗಾರ ಘೋಷಾಲ್ ಅವರು ಆಸ್ಟ್ರೇಲಿಯದ ಸ್ಟೀವನ್ ಫಿನಿಟ್‌ಸಿಸ್‌ರನ್ನು 11-5, 11-4, 11-6 ಸೆಟ್‌ಗಳಿಂದ ಮಣಿಸಿದ್ದಾರೆ. ಘೋಷಾಲ್ ಸೋಮವಾರ ನಡೆಯಲಿರುವ 32ನೆ ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನದ ಯುವ ಆಟಗಾರ ನಾಸಿರ್ ಇಕ್ಬಾಲ್‌ರನ್ನು ಎದುರಿಸಲಿದ್ದಾರೆ. ‘‘ನಾನು ಈ ಹಿಂದೆ ಫ್ರೆಂಚ್ ಲೀಗ್ ಫೈನಲ್ಸ್‌ನಲ್ಲಿ ಸ್ಟೀವನ್ ವಿರುದ್ಧ ಸೋತಿದ್ದೆ. ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐದು ಗೇಮ್ಸ್‌ನಿಂದ ಮಣಿಸಿ ತಿರುಗೇಟು ನೀಡಿದ್ದೆ. ಇಂದು ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಸಂತಸವಾಗುತ್ತಿದೆ’’ ಎಂದು ಘೋಷಾಲ್ ಪಿಟಿಐಗೆ ತಿಳಿಸಿದ್ದಾರೆ. ಕಳೆದ ವರ್ಷ ನಡೆದ ಪ್ರತಿಷ್ಠಿತ ವಿಶ್ವ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಘೋಷಾಲ್ ಕ್ವಾರ್ಟರ್ ಫೈನಲ್ ತಲುಪಿದ ಭಾರತದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದರು. ಈ ವರ್ಷ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಘೋಷಾಲ್ ಅವರು ವಿಶ್ವದ ನಂ.3 ಹಾಗೂ ಮೂರು ಬಾರಿಯ ಚಾಂಪಿಯನ್ ನಿಕ್ ಮ್ಯಾಥ್ಯೂ ಅವರಿಂದ ಕಠಿಣ ಸವಾಲು ಎದುರಿಸಲಿದ್ದಾರೆ. ಘೋಷಾಲ್ ಈ ಹಿಂದೆ ನಾಲ್ಕು ಬಾರಿ ಇಂಗ್ಲೆಂಡ್‌ನ ಮ್ಯಾಥ್ಯೂ ಅವರನ್ನು ಎದುರಿಸಿದ್ದು, ಮೂರು ಬಾರಿ ಸೋತಿದ್ದರು. 2014ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿಪದಕವನ್ನು ಜಯಿಸಿದ್ದ ಘೋಷಾಲ್ ಇತ್ತೀಚೆಗಷ್ಟೇ ಹೊಸದಿಲ್ಲಿಯಲ್ಲಿ ನಡೆದಿದ್ದ ನ್ಯಾಶನಲ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾರತದ ಹರಿಂದರ್ ಪಾಲ್ ಸಿಂಗ್ ವಿರುದ್ಧ ಸೋತು ಪ್ರಶಸ್ತಿ ವಂಚಿತರಾಗಿದ್ದರು.

http://vbnewsonline.com

Write A Comment