
ಇಳಯ ದಳಪತಿ ವಿಜಯ್ ಅಭಿನಯದ ತಮಿಳು ಸಿನಿಮಾದಲ್ಲಿ, ಕಿಚ್ಚ ಸುದೀಪ್ ಌಕ್ಟ್ ಮಾಡ್ತಿರೋದು ಹಳೇ ನ್ಯೂಸ್.. ವಿಜಯ್ ನಾಯಕರಾಗಿ ಅಭಿನಯಿಸ್ತಿರೋ ಈ ಚಿತ್ರದಲ್ಲಿ, ಸುದೀಪ್ ನೆಗೆಟಿವ್ ರೋಲ್ ಪ್ಲೇ ಮಾಡ್ತಿದ್ದಾರೆ.. ಲೇಟೆಸ್ಟ್ ನ್ಯೂಸ್ ಏನಪ್ಪಾ ಅಂದ್ರೆ, ವಿಜಯ್ ಹಾಗೂ ಸುದೀಪ್ ಟೀಮ್’ಗೆ ಬಾಲಿವುಡ್ ನಟಿ ಶ್ರೀದೇವಿ ಎಂಟ್ರಿಯಾಗ್ತಿದ್ದಾರೆ.
ಇದೊಂದು ಫ್ಯಾಂಟಸಿ ಕಮರ್ಷಿಯಲ್ ಸಿನಿಮಾ ಆಗಿದ್ದು, ಪ್ರಿನ್ಸೆಸ್ ಪಾತ್ರದಲ್ಲಿ ಹನ್ಸಿಕಾ ಮೋಟ್ವಾನಿ ಕೂಡ ಕಾಣಿಸಿಕೊಳ್ತಿರೋದು ಮತ್ತೊಂದು ಹೈಲೈಟ್.. ಚಿಂಬುದೇವನ್ ಡೈರೆಕ್ಟ್ ಮಾಡ್ತಿರೋ ಸಿನಿಮಾದಲ್ಲಿ, ಹನ್ಸಿಕಾಗೆ ತಾಯಿಯ ಪಾತ್ರದಲ್ಲಿ ಶ್ರೀದೇವಿ ಅಭಿನಯಿಸ್ತಿದ್ದಾರೆ.. ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಚೆನ್ನೈನ ಹೊರವಲಯದಲ್ಲಿ ಆರಂಭವಾಗಲಿದ್ದು, ವಿಜಯ್, ಸುದೀಪ್, ಶ್ರೀದೇವಿ ಹಾಗೂ ಹನ್ಸಿಕಾ ಕಾಂಬಿನೇಷನ್’ನ ದೃಶ್ಯವನ್ನ ಚಿತ್ರೀಕರಿಸಲಾಗುತ್ತೆ..
ಇಂಟ್ರೆಸ್ಟಿಂಗ್ ಸಂಗತಿ ಏನಪ್ಪಾ ಅಂದ್ರೆ, ಶ್ರೀದೇವಿ ಜೊತೆ ಅಭಿನಯಿಸ್ಬೇಕು ಅನ್ನೋ ಕಿಚ್ಚನ ಕನಸು, ಈ ಸಿನಿಮಾದ ಮೂಲಕ ಈಡೇರಿದಂತಾಗ್ತಿದೆ..