ರಾಷ್ಟ್ರೀಯ

ನೆರೆ ರಾಷ್ಟ್ರಗಳ ಜೊತೆಗಿನ ಸಂಬಂಧ ಬಹಳ ಸೂಕ್ಷ್ಮ: ರಕ್ಷಣಾ ಸಚಿವ

Pinterest LinkedIn Tumblr

Parrikar-Filing-nomination-PTI

ಲಕ್ನೌ: ನೆರೆಹೊರೆಯ ರಾಷ್ಟ್ರಗಳ ಜೊತೆ ಸಂಬಂಧ ಉಳಿಸಿಕೊಳ್ಳುವುದು ಬಹಳ ಸೂಕ್ಷ್ಮವಾದ ವಿಷಯ ಆದರೆ ಶತ್ರುಗಳಿಂದ ದೇಶಕ್ಕೆ ರಕ್ಷಣೆ ಇಲ್ಲದಿರುವುದಕ್ಕೆ ಬಿಡುವುದಿಲ್ಲ ಎಂದು ಹೊಸ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಿಳಿಸಿದ್ದಾರೆ.

“ಇಂದು ಮಾಧ್ಯಮಗಳ ಎದುರಿಗೆ ರಕ್ಷಣಾ ಸಚಿವರಿಗೇ ರಕ್ಷಣೆ ಇಲ್ಲವಾಯಿತು, ಆದರೆ ಶತ್ರುಗಳಿಂದ ದೇಶಕ್ಕೆ ರಕ್ಷಣೆ ಇಲ್ಲದಿರುವುದಕ್ಕೆ ಎಂದಿಗೂ ಬಿಡುವುದಿಲ್ಲ” ಎಂದು ರಾಜ್ಯಸಭಾ ಚುನಾವಣೆಗೆ ಅರ್ಜಿ ಸಲ್ಲಿಸಿದ ನಂತರ ವರಿದಿಗಾರರಿಗೆ ತಿಳಿಸಿದ್ದಾರೆ.

ಪ್ರಶ್ನೆಗಳಿಗೆ ಉತ್ತರಿಸುತ್ತ ಅವರು “ಭಾರತ ಮತ್ತು ನೆರೆಹೊರೆಯ ದೇಶಗಳ ನಡುವಿನ ಸಂಬಂಧ ಬಹಳ ಸೂಕ್ಷ್ಮವಾದ ವಿಷಯ” ಎಂದರು.

“ನಾನು ರಕ್ಷಣಾ ಮಂತ್ರಿ ಆಗಿದ್ದೇನೆ ಎಂದು ತಿಳಿದು ಬಂದದ್ದೆ ರಾತ್ರಿ ೧೧:೩೫ ಘಂಟೆಗೆ. ನನಗೆ ಅಧ್ಯಯನ ಮಾಡಲು ಸ್ವಲ್ಪ ಸಮಯ ಕೊಡಿ. ಭಾರತ ಮತ್ತು ನೆರೆಹೊರೆಯ ದೇಶಗಳ ನಡುವಿನ ಸಂಬಂಧ ಬಹಳ ಸೂಕ್ಷ್ಮವಾದ ವಿಷಯ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಚಿವಾಲಯದ ಜೊತೆ ಹೊಂದಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕೆಂದಿದ್ದಾರೆ.

“ನನ್ನ ಕೆಲಸ ಭಾರತದ ರಕ್ಷಣಾ ದಳಗಳನ್ನು ಬಲಪಡಿಸುವುದರತ್ತ ಇರುತ್ತದೆ. ನಾನು ಕೇಂದ್ರದಲ್ಲಿರಲಿಲ್ಲ. ಈಗ ತಾನೇ ರಕ್ಷಣಾ ಮಂತ್ರಿಯಾಗಿದ್ದೇನೆ. ರಕ್ಷಣಾ ಸಚಿವಾಲಯವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಒಂದು ವಾರವಾದರೂ ಬೇಕು.” ಎಂದಿದ್ದಾರೆ.

ಚುನಾವಣೆಯ ಬಗ್ಗೆ ಕೇಳಿದ ಒಂದು ಪ್ರಶ್ನೆಗೆ “ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ” ಎಂದಿದ್ದಾರೆ.

ಉತ್ತರ ಪ್ರದೇಶದ ಬಿಜೆಪಿ ಪಕ್ಷದ ಶಾಸಕರು ಮತ್ತು ಜನಕ್ಕೆ ನಾನು ಚಿರಋಣಿ ಎಂದಿದ್ದಾರೆ.

Write A Comment