ಮನೋರಂಜನೆ

’ಲೈಫ್ ಸೂಪರ್ ಗುರು’ ಅಂತಾರೆ ಯೋಗಿ ಮತ್ತು ಗುರು

Pinterest LinkedIn Tumblr

lifesuperguru

ಕನ್ನಡದ ಟಿ.ವಿ ವಿಭಾಗದ ಮನೋರಂಜನೆಗೆ ಮತ್ತೊಂದು ರಿಯಾಲಿಟಿ ಸೋ ಹೆಜ್ಜೆಯಿಟ್ಟಿದೆ. ರಾಘವೇಂದ್ರ ಹುಣಸೂರ್ ತಲೆಗೆ ಹೊಳೆದ ಕ್ರಿಯೇಟಿವ್ ಐಡಿಯಾ ಲೈಫ್ ಸೂಪರ್ ಗುರು ಎಂಬ ಹೆಸರಲ್ಲಿ ವೀಕ್ಷಕರ ಮುಂದೆ ಬಂದಿದೆ.

ಸದಾ ವಿಭಿನ್ನ ರೀತಿಯ ರಿಯಾಲಿಟಿ ಶೋಗಳಿಗೆ ಹೆಸರಾದ ಜೀ ವಾಹಿನಿಯ ಪ್ರಸ್ತುತ ಕೊಡಡುಗೆಯಾದ ‘ಲೈಫ್ ಸೂಪರ್ ಗುರು’ ಕೂಡ ಅಷ್ಟೇ ವಿಭಿನ್ನತೆಗೆ ಹೆಸರಾಗಿದೆ. ರಿಯಾಲಿಟಿ ಶೋಗಳು ಯಂಗ್ ಸ್ಟರ್ ಗಳಿಗೆ ಮಾತ್ರವೆಂಬುದನ್ನು ದೂರ ಮಾಡುವಂತೆ ಇದರಲ್ಲಿ 60 ಮತ್ತು ಅದಕ್ಕಿಂತ ಮೇಲ್ವಯಸ್ಸಿನವರನ್ನು ಕೂಡ ಪಾಲ್ಗೊಳ್ಳುವಂತೆ ಮಾಡಲಾಗಿದೆ. ಅಂಥ ಹತ್ತು ಮಂದಿ ತಂಡವನ್ನು ಪ್ರತಿನಿಧಿಸಿ 42ರ ನಿರ್ದೇಶಕ ಗುರುಪ್ರಸಾದ್ ಇದ್ದರೆ 24ರ ಹರೆಯದ ಲೂಸ್ ಮಾದ ಯೋಗಿ 18ರಿಂದ 23ರ ವರೆಗಿನ ಹುಡುಗರನ್ನು ಪ್ರತಿನಿಧಿಸಲಿದ್ದಾರೆ. ಇವರಿಬ್ಬರ ತಂಡಗಳನ್ನು ಮಾಡಿ ಅವರನ್ನು ಮೂರುವರೆ ತಿಂಗಳ ಕಾಲ ಶೋನಲ್ಲಿ ಬಳಸಲಾಗುವುದಂತೆ. ಅಂದಹಾಗೆ ಈ ಸಂದರ್ಭದಲ್ಲಿ ಅವರಿಗೆ ವಿವಿಧ ಟಾಸ್ಕ್ ಗಳನ್ನು ನೀಡಿ ಅದರಲ್ಲಿ ವಿಜಯಿಗಳನ್ನು ತೀರ್ಮಾನಿಸಲಾಗುವುದಂತೆ. ಇದರಲ್ಲಿ ಪಾಲ್ಗೊಳ್ಳುವ 60ರ ಮೇಲ್ಪಟ್ಟವರಲ್ಲಿ 60ರ ವಿಧುರ, 67ರ ಯೋಧ, 83ರ ಬೈಕ್ ರೈಡರ್ ಹೀಗೆ ವಿವಿಧ ವ್ಯಕ್ತಿತ್ವದ ಹಿರಿಯರಿದ್ದಾರೆ. ಅದೇ ರೀತಿ ಯುವಕರಲ್ಲಿ ಮನೆಯೊಂದಿಗೆ, ಪೋಷಕರೊಂದಿಗೆ ಸಂಪರ್ಕವಿರಿಸಿಕೊಳ್ಳದವರು ಕೂಡ ಇದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ಜೀ ತಂಡ ವಿವರಿಸಿತು. ಡ್ಯಾನ್ಸ್ ಶೋಗೆ ಜಡ್ಜ್ ಆದಮೇಲೆ ರಿಯಾಲಿಟಿ ಶೋಗಳ ಮೇಲೆ ಕ್ರೇಜ್ ಹುಟ್ಟಿಕೊಂಡಿದೆ ಎಂದಿರುವ ಗುರು ಈ ಬಾರಿಯಾದರೂ ತಮ್ಮ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗುತ್ತಾರ ನೋಡಬೇಕಿದೆ.

Write A Comment