ಮನೋರಂಜನೆ

ಚೆನ್ನೈಯಿನ್ ಫುಟ್ಬಾಲ್ ಕ್ಲಬ್ ಖರೀದಿಸಿದ ಧೋನಿ

Pinterest LinkedIn Tumblr

ms-dhoni1

ಚೆನ್ನೈ, ಅ.6: ಸಚಿನ್ ತೆಂಡುಲ್ಕರ್ ಹಾಗೂ ವಿರಾಟ್ ಕೊಹ್ಲಿಯ ನಂತರ ಇದೀಗ ಭಾರತದ ನಾಯಕ ಎಂಎಸ್ ಧೋನಿ ಬಹು ನಿರೀಕ್ಷಿತ ಇಂಡಿಯನ್ ಸೂಪರ್ ಫುಟ್ಬಾಲ್ ಲೀಗ್‌ನ(ಐಎಸ್‌ಎಫ್‌ಎಲ್) ಚೆನ್ನೈಯಿನ್ ಫುಟ್ಬಾಲ್ ಕ್ಲಬ್‌ನ್ನು ಖರೀದಿಸಿದ್ದಾರೆ.

ಐಎಸ್‌ಎಲ್ ಟೂರ್ನಿಯು ಅ.12 ರಿಂದ ಆರಂಭವಾಗಲಿದ್ದು ಇದೀಗ ಬಾಲಿವುಡ್ ನಟ ಅಭಿಷೇಕ್ ಬಚ್ಚನ್‌ರೊಂದಿಗೆ ಧೋನಿ ಚೆನ್ನೈ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ. ಧೋನಿ ಚೆನ್ನೈಯಿನ್ ಎಫ್‌ಸಿ ಸಹ ಮಾಲಕತ್ವಕ್ಕೆ ಧೋನಿ ಅವರು ಸಹಿ ಹಾಕಿದ್ದಾರೆ ಎಂದು ಲೀಗನ್ನು ಆಯೋಜಿಸುತ್ತಿರುವ ಐಎಂಜಿ-ರಿಲೆಯನ್ಸ್ ಹೇಳಿದೆ.

ಕಳೆದ ತಿಂಗಳು ಭಾರತೀಯ ಕ್ರಿಕೆಟ್ ತಂಡದ ಉಪ ನಾಯಕ ವಿರಾಟ್ ಕೊಹ್ಲಿ ಐಎಸ್‌ಎಲ್‌ನ ತಂಡ ಗೋವಾ ಎಂಸಿ ಸಹ ಮಾಲಕತ್ವವಹಿಸಿಕೊಂಡಿದ್ದಾಗಿ ಘೋಷಿಸಿದ್ದರು. ಮಾಜಿ ಕ್ರಿಕೆಟಿಗರಾದ ತೆಂಡುಲ್ಕರ್ ಅವರು ಕೇರಳ ಬ್ಲಾಸ್ಟರ್ಸ್‌ ತಂಡವನ್ನು , ಇನ್ನೋರ್ವ ಮಾಜಿ ಕ್ರಿಕೆಟಿಗ ಸೌರವ್ ಗಂಗುಲಿ ಅಟ್ಲೆಟಿಕೊ ಡೆ ಕೋಲ್ಕತಾ ತಂಡದ ಸಹ ಮಾಲಕತ್ವವನ್ನು ಪಡೆದುಕೊಂಡಿದ್ದಾರೆ. ಐಎಸ್‌ಎಲ್ ಅ.12 ರಂದು ಕೋಲ್ಕತಾದಲ್ಲಿ ಆರಂಭವಾಗಲಿದ್ದು, ಫೈನಲ್ ಪಂದ್ಯ ಡಿ.20 ರಂದು ನಡೆಯಲಿದೆ.

Write A Comment