ಮನೋರಂಜನೆ

ಕಂಚು ಗೆದ್ದ ದೀಪಿಕಾ; ಮೂರನೆ ದಿನ ಭಾರತದ ಖಾತೆಗೆ ಎರಡು ಪದಕ

Pinterest LinkedIn Tumblr

dipika-pallikal

ಇಂಚೋನ್, ಸೆ.22: ಭಾರತದ ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಮತ್ತು ಮಹಿಳಾ ಶೂಟರ್‌ಗಳ ತಂಡ ಇಂದು ಕಂಚು ಗೆಲ್ಲುವ ಮೂಲಕ 17ನೆ ಏಷ್ಯನ್ ಗೇಮ್ಸ್‌ನ ಮೂರನೆ ದಿನ ಭಾರತದ ಖಾತೆಗೆ ಎರಡು ಪದಕಗಳು ಜಮೆಯಾಗಿವೆ.

ಇಂದು ನಡೆದ ಮಹಿಳೆಯರ ಸ್ಕ್ವಾಷ್‌ನ ಸೆಮಿಫೈನಲ್‌ನಲ್ಲಿ ದೀಪಿಕಾ ಪಲ್ಲಿಕಲ್ ಅವರು ವರ್ಲ್ಡ್ ನಂ.1 ಮಲೇಷ್ಯಾದ ನಿಕೊಲ್ ಡೇವಿಡ್ ಎದುರು 4-11, 4-11, 5-11 ಸೆಟ್‌ಗಳಂತರದಲ್ಲಿ ಸೋತು ಕಂಚು ಪಡೆದರು.

ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ರಾಹಿ ಸರ್ನೋಬಾಟ್, ಅನಿಸಾ ಸೆಯ್ಯದ್ ಮತ್ತು ಹಿನಾ ಸಿಧು ನೇತೃತ್ವದ ತಂಡ ಕಂಚು ಪಡೆಯಿತು.

ಇದರೊಂದಿಗೆ ಭಾರತದ ಶೂಟರ್‌ಗಳು ಪಡೆದಿರುವ ಪದಕಗಳ ಸಂಖ್ಯೆಯನ್ನು ನಾಲ್ಕಕ್ಕೆ ಏರಿಸಿದ್ದಾರೆ. ಮೊದಲ ದಿನ ಶೂಟರ್ ಜಿತು ರಾಯ್ ಚಿನ್ನ ಮತ್ತು ಶ್ವೇತಾ ಚೌಧರಿ ಕಂಚು ಎರಡನೆ ದಿನ ಭಾರತದ ಪುರುಷರ ಶೂಟಿಂಗ್ ತಂಡ ಕಂಚು ಪಡೆದಿತ್ತು. ದೀಪಿಕಾ ಮಿಂಚು: 23ರ ಹರೆಯದ ದೀಪಿಕಾ ಶನಿವಾರ ತನ್ನ ಡಬಲ್ಸ್ ಜೊತೆಗಾರ್ತಿ ಜೋತ್ಸ್ನಾ ಚಿನ್ನಪ್ಪ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದ್ದರು. 2010ರಲ್ಲಿ ಗುವಾಂಗ್‌ರೊದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮೂರು ಪದಕಗಳನ್ನು ಪಡೆದಿತ್ತು. ಅವೆಲ್ಲವೂ ಕಂಚು ಆಗಿತ್ತು. ಈ ಬಾರಿ ನಾಲ್ಕು ವಿಭಾಗಗಲ್ಲೂ ಪದಕ ಗೆಲ್ಲುವ ಪ್ರಯತ್ನ ನಡೆಸಿದೆ. 1998ರಲ್ಲೂ ಭಾರತಕ್ಕೆ ಸ್ಕ್ವಾಷ್‌ನಲ್ಲಿ ನಾಲ್ಕು ಪದಕಗಳು ಸಿಕ್ಕಿತ್ತು.ಪುರುಷರ ಸಿಂಗಲ್ಸ್‌ನಲ್ಲಿ ಸೌರವ್ ಘೋಷಾಲ್ ಮತ್ತು ಉಳಿದ ಪದಕಗಳು ಪುರುಷರು ಮತ್ತು ಮಹಿಳಾ ತಂಡದಿಂದ ಜಮೆಯಾಗಿತ್ತು.

ಮಲೇಷ್ಯಾ ಸ್ಕ್ವಾಷ್‌ನಲ್ಲಿ ಹಿಡಿತವನ್ನು ಸಡಿಲಗೊಳಿಸಿಲ್ಲ. 1998ರಲ್ಲಿ ಬ್ಯಾಂಕಾಕ್ ಗೇಮ್ಸ್‌ನಲ್ಲಿ ಸ್ಕ್ವಾಷ್ ಸೇರ್ಪಡೆಗೊಂಡ ಬಳಿಕ ಮಲೇಷ್ಯಾ ತಂಡ ಈ ವರೆಗೆ ಒಂದು ಪಂದ್ಯದಲ್ಲೂ ಸೋತಿಲ್ಲ.

ಶೂಟಿಂಗ್‌ನ ಸಿಂಗಲ್ಸ್‌ನಲ್ಲಿ ವಿಫಲ: ಮಹಿಳೆಯರ ಶೂಟಿಂಗ್‌ನ ಸಿಂಗಲ್ಸ್‌ನ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ರಾಹಿ ಸರ್ನೋಬಾಟ್ 7ನೆ, 10 ಮೀಟರ್ ಏರ್ ರೈಫಲ್‌ನಲ್ಲಿ ಅಯೊನಿಕಾ 7ನೆ ಸ್ಥಾನ ಪಡೆದಿದ್ದರು. ತಂಡದಲ್ಲಿ ಸ್ಪರ್ಧಿಸಿ 1729 ಅಂಕಗಳನ್ನು ಜಮೆ ಮಾಡಿ ಸರ್ನೋಬಾಟ್, ಅನಿಸಾ ಸೆಯ್ಯದ್ ಮತ್ತು ಹಿನಾ ಸಿಧು ಕಂಚು ಗೆದ್ದರು.

Write A Comment