ಮನೋರಂಜನೆ

ಟೋಕಿಯೊ ಓಪನ್ : ಸಾನಿಯಾ-ಕಾರಾ ಜೋಡಿ ಫೈನಲ್‌ಗೆ

Pinterest LinkedIn Tumblr

Mirza-Black

ಟೋಕಿಯೊ, ಸೆ.19: ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ ಹಾಲಿ ಚಾಂಪಿಯನ್ ಭಾರತದ ಸಾನಿಯಾ ಮಿರ್ಝಾ ಹಾಗೂ ಝಿಂಬಾಬ್ವೆ ಯ ಕಾರಾ ಬ್ಲಾಕ್ ಡಬ್ಲೂಟಿಎ ಟೋಕಿಯೊ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ

ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಇಂಡೋ-ಝಿಂಬಾಬ್ವೆ ಜೋಡಿ ಸಾನಿಯಾ ಹಾಗೂ ಬ್ಲಾಕ್ ಅವರು ಕೇವಲ 63 ನಿಮಿಷಗಳ ಹೋರಾಟದಲ್ಲಿ ಸರ್ಬಿಯಾದ ಜೆಲೆನಾ ಜಾಂಕೊವಿಕ್ ಹಾಗೂ ಸ್ಪೇನ್‌ನ ಅರ್ಯಾಂಟ್ಸಾ ಪಾರ್ರಾ ಸ್ಯಾಂಟೊಜಾ ಅವರನ್ನು 6-3, 6-2 ಸೆಟ್‌ಗಳಿಂದ ಮಣಿಸಿದ್ದಾರೆ. ಸರ್ವಿಸ್ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಾನಿಯಾ ಹಾಗೂ ಕಾರಾ 30 ಸರ್ವಿಸ್ ಪಾಯಿಂಟ್‌ನಲ್ಲಿ 24 ಅಂಕವನ್ನು ಜಯಿಸಿದರು.

ಜೆಲೆನಾ ಹಾಗೂ ಅರ್ಯಾಂಟ್ಸಾ ಕೇವಲ ನಾಲ್ಕು ಅವಕಾಶವನ್ನು ಸದುಪಯೋಗಪಡಿಸಿಕೊಂಡರು.

ಸಾನಿಯಾ ಹಾಗೂ ಕಾರಾ ಎರಡನೆ ಸೆಮಿಫೈನಲ್‌ನಲ್ಲಿ ಸೆಣಸಾಡಲಿರುವ ರಾಕ್ವೆಲ್ ಕೊಪ್ಸ್ ಜೋನ್ಸ್ ಹಾಗೂ ಅಬಿಗೈಲ್ ಸ್ಪಿಯರ್ ಅಥವಾ ಸ್ಪೇನ್‌ನ ಗಾರ್ಬೈನ್ ಮುಗುರಝ್ ಹಾಗೂ ಕಾರ್ಲ ಸುಯರೆಝ್ ನವಾರ್ರೊ ಅವರನ್ನು ಎದುರಿಸಲಿದ್ದಾರೆ. ಸಾನಿಯಾ ಟೋಕಿಯೊ ಓಪನ್ ಕೊನೆಗೊಂಡ ತಕ್ಷಣವೇ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲು ದಕ್ಷಿಣ ಕೊರಿಯಾಕ್ಕೆ ಪ್ರಯಾಣಿಸಲಿದ್ದಾರೆ

Write A Comment