ಮುಂಬೈ

ನಾಳೆಯಿಂದ ಪುಣೆಯಲ್ಲಿ ಒಂದು ವಾರ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಕರ್ಫ್ಯೂ ಜಾರಿ

Pinterest LinkedIn Tumblr

ಪುಣೆ: ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಪರಿಸ್ಥಿತಿಯನ್ನು ನಿಭಾಯಿಸಲು ನಾಳೆಯಿಂದ ಒಂದು ವಾರಗಳ ಕಾಲ 12 ಗಂಟೆಗಳ ಕರ್ಫ್ಯೂವನ್ನು ಜಾರಿಗೊಳಿಸಿ ಪುಣೆ ಮಹಾನಗರ ಪಾಲಿಕೆ ಇಂದು ಆದೇಶ ಹೊರಡಿಸಿದೆ. ಸಂಜೆ ಆರು ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಒಂದು ವಾರಗಳ ಕಾಲ ಧಾರ್ಮಿಕ ಸ್ಥಳಗಳು, ಹೋಟೆಲ್ ಗಳು, ಬಾರ್ ಗಳು, ಶಾಫಿಂಗ್ ಮಾಲ್ ಗಳು ಮತ್ತು ಚಿತ್ರಮಂದಿರಗಳನ್ನು ಮುಚ್ಚುವಂತೆ ನಿರ್ದೇಶಿಸಲಾಗಿದೆ. ಪುಣೆ ಮಹಾನಗರ ನಿಗಮದ ಬಸ್ ಸಂಚಾರವನ್ನು ಕೂಡಾ ಒಂದು ವಾರಗಳ ಕಾಲ ಸ್ಥಗಿತಗೊಳಿಸಲಾಗಿದೆ.

ಕರ್ಫ್ಯೂ ಅವಧಿಯಲ್ಲಿ ಕೇವಲ ಹೋಮ್ ಡೆಲಿವರಿ, ಅತ್ಯಾವಶ್ಯಕ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ದೇಶದಲ್ಲಿ ಕೊರೋನಾ ಹೊಸ ಅಲೆಯಿಂದ ತತ್ತರಿಸಿರುವ ಪ್ರದೇಶಗಳಲ್ಲಿ ಪುಣೆ ಕೂಡಾ ಒಂದಾಗಿದೆ.

Comments are closed.