ಮುಂಬೈ

ಮಹಾರಾಷ್ಟ್ರದ ಭಂಡಾರದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; 10 ನವಜಾತ ಶಿಶುಗಳು ಬೆಂಕಿಗೆ ಬಲಿ

Pinterest LinkedIn Tumblr

ಮಹಾರಾಷ್ಟ್ರ: ಆಸ್ಪತ್ರೆಯಲ್ಲಿ ಏಕಾಏಕಿ ಸಂಭವಿಸಿದ ಬೆಂಕಿ ಅವಘಡದಿಂದ ಹತ್ತು ಮಂದಿ ನವಜಾತು ಶಿಶುಗಳು ಸಜೀವ ದಹನವಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಭಂಡಾರದಲ್ಲಿ ನಡೆದಿದೆ.

ಈ ಘಟನೆ ಶುಕ್ರವಾರ ತಡರಾತ್ರಿ ಸರಿಸುಮಾರು 2 ಗಂಟೆಗೆ ನಡೆದಿದ್ದು, ಅನಾರೋಗ್ಯ ನವಜಾತ ಶಿಶುಗಳ ಆರೈಕೆ ಘಟಕ(ಎಸ್‌ಎನ್‌ಸಿಯು)ದಲ್ಲಿ ಏಕಾಏಕಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.

ನೋಡು ನೋಡುತ್ತಲೇ ಬೆಂಕಿ ಜ್ವಾಲೆ ಹರಡಿದೆ. ಬೆಂಕಿಯ ಕೆನ್ನಾಲಿಗೆಗೆ ಐಸಿಯುನಲ್ಲಿದ್ದ 1 ದಿನದಿಂದ 3 ತಿಂಗಳೊಳಗಿನ 10 ಮಂದಿ ನವಜಾತು ಶಿಶುಗಳ ಸಜೀವ ದಹನವಾಗಿದೆ. ಐಸಿಯುನಲ್ಲಿ ಒಟ್ಟು 17 ಮಕ್ಕಳಿದ್ದರು, ಈ ಪೈಕಿ 7 ಶಿಶುಗಳ ರಕ್ಷಣೆ ಮಾಡಲಾಗಿದೆ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಪ್ರಮೋದ್ ಖಂಡೇಟ್ ತಿಳಿಸಿದ್ದಾರೆ.

ಕೂಡಲೇ ಕಾರ್ಯಾಚರಣೆ ನಡೆಸಲಾಗಿತ್ತಾದರೂ ಬೆಂಕಿ ಹಠಾತ್‌ ಆಗಿ ಹರಡಿದ್ದರಿಂದ ಮಕ್ಕಳು ಸಾವನಪ್ಪಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ.

Comments are closed.