ಮುಂಬೈ: ಚಿನ್ನಾಭರಣ ಪ್ರಿಯರಿಗೆ ಡಿಸೆಂಬರ್ ಮೂರನೇ ವಾರದಲ್ಲಿ ಶಾಕ್ ಉಂಟಾಗಿದೆ. ಚಿನ್ನದ ದರದಲ್ಲಿ ಒಂದೇ ವಾರದಲ್ಲಿ ಶೇ. 2 ಏರಿಕೆ ಕಂಡುಬಂದಿದ್ದು, 10 ಗ್ರಾಂ ಚಿನ್ನದ ದರ 50 ಸಾವಿರದ ಗಡಿ ದಾಟಿದೆ.
ವಾರಾಂತ್ಯದಲ್ಲಿ ಚಿನ್ನದ ದರ 50,305 ರೂಪಾಯಿಗೆ ಅಂತ್ಯವಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ 980 ರೂಪಾಯಿ ಅಂದರೆ ಶೇ. 1.99 ಏರಿಕೆ ಕಂಡುಬಂದಿದೆ. ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 45,899 ರೂಪಾಯಿಯಾಗಿದ್ದು (ಪ್ಲಸ್ ಶೇ. 3 ಜಿಎಸ್ಟಿ) 24 ಕ್ಯಾರೆಟ್ ಚಿನ್ನದ ದರ 50,108 ರೂಪಾಯಿ(ಜಿಎಸ್ಟಿ ಹೊರೆತು)ಯಷ್ಟಾಗಿದೆ. 18 ಕ್ಯಾರೆಟ್ ಚಿನ್ನದ ದರ 37,581 ರೂ. (ಜಿಎಸ್ಟಿ ಹೊರೆತು) ಆಗಿದೆ. ಒಂದು ಕೆಜಿ ಬೆಳ್ಳಿ ದರ 66,784 ರೂಪಾಯಿಗಳಷ್ಟಾಗಿದೆ.