ಮುಂಬೈ

ಮಸೀದಿಗಳಲ್ಲಿ ಧ್ವನಿವರ್ಧಕಗಳಿಗೆ ಕೇಂದ್ರವು ನಿಷೇಧ ಹೇರಲಿ: ಶಿವಸೇನಾ

Pinterest LinkedIn Tumblr


ಮುಂಬೈ: ಶಬ್ಧ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳ ನಿಷೇಧಕ್ಕೆ ಕೇಂದ್ರವು ಮುಂದಾಗಬೇಕೆಂದು ಶಿವಸೇನಾ ಒತ್ತಾಯಿಸಿದೆ.

ಕೇಂದ್ರ ಸರ್ಕಾರವು ಶಬ್ಧ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿ ಸುಗ್ರೀವಾಜ್ಞೆಯನ್ನು ಹೊರಡಿಸಬೇಕು ಎಂದು ಶಿವಸೇನಾದ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.

ಶಿವಸೇನಾದ ದಕ್ಷಿಣ ಮುಂಬೈ ವಿಭಾಗದ ಮುಖ್ಯಸ್ಥ ಪಾಂಡುರಂಗ ಸಕ್ಪಾಲ್ ಅವರು ಮುಸ್ಲಿಂ ಮಕ್ಕಳಿಗಾಗಿ ‘ಅಜಾನ್‌’ ವಾಚನ ಸ್ಪರ್ಧೆಯನ್ನು ಏರ್ಪಡಿಸುವಂತೆ ಸಲಹೆ ನೀಡಿದ್ದರು. ಇದಕ್ಕೆ ಬಿಜೆಪಿಯಿಂದ ಭಾರೀ ಟೀಕೆ ವ್ಯಕ್ತವಾಗಿತ್ತು.

ಶಿವಸೇನಾ ನಾಯಕ ‘ಅಜಾನ್‌’ ಬಗ್ಗೆ ಹೊಗಳಿದ್ದು ಮತ್ತು ದೆಹಲಿಯ ಗಡಿಯಲ್ಲಿ ಪ್ರತಿಭಟಿಸಿದ ರೈತರನ್ನು ‘ಪಾಕಿಸ್ತಾನದ ಉಗ್ರರಿಗೆ’ ಹೋಲಿಸಿದ ಬಿಜೆಪಿ ನಡೆ ಎರಡೂ ಒಂದೇ ರೀತಿಯದ್ದು ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

Comments are closed.