ಮುಂಬೈ

ಎಂಗೇಜ್​ಮೆಂಟ್​ ಪಾರ್ಟಿಗೆ ಕರೆಸಿ ಯುವತಿ ಮೇಲೆ ಸಾಮೂಹಿಕ ಅತ್ಯಾ#ಚಾರ ನಡೆಸಿದ ಕಾಮು#ಕರು !

Pinterest LinkedIn Tumblr

ಮುಂಬೈ : ಅತ್ಯಾ#ಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮುಂಬೈನಲ್ಲಿ 22 ವರ್ಷದ ಯುವತಿಯನ್ನು ಎಂಗೇಜ್​ಮೆಂಟ್​ ಪಾರ್ಟಿಗೆ ಕರೆಸಿ ಸಾಮೂಹಿಕ ಅತ್ಯಾ#ಚಾರ ನಡೆಸಲಾಗಿದೆ.

ಈ ಘಟನೆ ನಡೆದಿರುವುದು ನವೆಂಬರ್ 8ರಂದು, ಪೊಲೀಸ್ ಠಾಣೆಗೆ ಸಂತ್ರಸ್ತ ಯುವತಿ ದೂರು ನೀಡಿದ ಹಿನ್ನೆಲೆಯಲ್ಲಿ ಈಗ ಘಟನೆ ಬೆಳಕಿಗೆ ಬಂದಿದೆ.

ಮುಂಬೈನ ಅಂಧೇರಿ- ಕುರ್ಲ ರಸ್ತೆಯಲ್ಲಿರುವ ಹೋಟೆಲ್​ನಲ್ಲಿ ನವೆಂಬರ್ 8ರಂದು ಎಂಗೇಜ್​ಮೆಂಟ್ ಪಾರ್ಟಿ ಇತ್ತು. ಅದಕ್ಕೆ ನಾನು ಮತ್ತು ಇನ್ನೂ ಇಬ್ಬರು ಯುವತಿಯರು ಹೋಗಿದ್ದೆವು. ಪಾರ್ಟಿ ಮುಗಿಸಿಕೊಂಡು ಹೊರಡುವಾಗ ನಾನೇ ಕೊನೆಯವಳಾಗಿದ್ದೆ. ಆಗ ನನ್ನ ಮೇಲೆ ಮೂವರು ಯುವಕರು ಅತ್ಯಾ#ಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

28 ವರ್ಷದ ಅವಿನಾಶ್ ಪಂಗೇಕರ್, 27 ವರ್ಷದ ಶಿಶಿರ, 25 ವರ್ಷದ ತೇಜಸ್ ಎಂಬ ಮೂವರು ಸೇರಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮುಂಬೈ ನಿವಾಸಿಯಾಗಿರುವ ಪಂಗೇಕರ್ ತನ್ನ ಎಂಗೇಜ್​ಮೆಂಟ್ ಪಾರ್ಟಿಗೆ ಗೆಳೆಯರನ್ನು ಆಹ್ವಾನಿಸಿದ್ದ. ತನ್ನದೇ ಎಂಗೇಜ್​ಮೆಂಟ್ ಪಾರ್ಟಿಯಲ್ಲಿ ಗೆಳೆತಿಯ ಮೇಲೆ ಆತ ಅತ್ಯಾ#ಚಾರ ಎಸಗಿದ್ದಾನೆ.

ನನ್ನ ಗೆಳೆಯನಾದ ಪಂಗೇಕರ್​ನ ಎಂಗೇಜ್​ಮೆಂಟ್ ಪಾರ್ಟಿಗೆ ಹೋಗಿದ್ದಾಗ ಆತ ನನಗೆ ಬಲವಂತವಾಗಿ ಆಲ್ಕೋಹಾಲ್ ಕುಡಿಸಿದ್ದ. ನನ್ನ ಜೊತೆಗೆ ಬಂದಿದ್ದ ಇನ್ನಿಬ್ಬರು ಯುವತಿಯರು ಹೋದ ಬಳಿಕ ನನ್ನ ಮೇಲೆ ಲೈಂ#ಗಿಕ ದೌರ್ಜನ್ಯ ನಡೆಸಿದ್ದ. ಆತನ ಜೊತೆಗೆ ಇನ್ನಿಬ್ಬರು ಕೂಡ ಅತ್ಯಾ#ಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಯುವತಿ ವಿವರಿಸಿದ್ದಾಳೆ.

ಆ ಸಂತ್ರಸ್ತ ಯುವತಿ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಆದರೆ, ಮೂರ್ನಾಲ್ಕು ದಿನಗಳಾದ ಮೇಲೆ ಆಕೆ ತನ್ನ ಮನೆಯವರಿಗೆ ಈ ವಿಷಯ ಹೇಳಿದಳು. ಅವರು ಆಕೆಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ, ದೂರು ಕೊಡಿಸಿದರು.

Comments are closed.