ಮುಂಬೈ

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ NRC ಜಾರಿಗೊಳಿಸಲು ಬಿಡುವುದಿಲ್ಲ: ಉದ್ದವ್ ಠಾಕ್ರೆ

Pinterest LinkedIn Tumblr


ಮಹಾರಾಷ್ಟ್ರ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಎನ್ ಆರ್ ಸಿ( ರಾಷ್ಟ್ರೀಯ ಪೌರತ್ವ ನೋಂದಣಿ) ಕಾಯ್ದೆಯನ್ನು ಜಾರಿಗೆ ತರಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಉದ್ದವ್ ಠಾಕ್ರೆ ತಿಳಿಸಿದ್ದಾರೆ. ಆ ಮೂಲಕ ಮಹಾರಾಷ್ಟ್ರ ಕೂಡ ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿ ಆರ್ ಅನ್ನು ಜಾರಿಗೊಳಿಸದಿರಲು ನಿರ್ಧರಿಸಿದ ರಾಜ್ಯಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.

ಆದರೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ಕುರಿತು ಮೃದು ಧೋರಣೆ ತಳೆದಿದ್ದು, ಸಿಎಎ ಯಾವುದೇ ಭಾರತೀಯನ ಪೌರತ್ವನ್ನು ಕಿತ್ತುಕೊಳ್ಲುವುದಿಲ್ಲ ಎಂದು ತಿಳಿಸಿದ್ದಾರೆ.

ದೇಶದ ವಿವಿದೆಢೆಗಳಲ್ಲಿ ಪೌರತ್ಬ ತಿದ್ದುಪಡಿ ಕಾಯ್ದೆ, ಎನ್ ಆರ್ ಸಿ, ಮತ್ತು ಎನ್ ಪಿ ಆರ್ ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮತ್ತು ಪ್ರತಿಭಟನೆಗೂ ಕಾರಣವಾಗಿ ಹಿಂಸಾತ್ಮಕ ರೂಪ ಪಡೆದಿತ್ತು. ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರಲು ವಿರೋಧ ವ್ಯಕ್ತವಾಗಿತ್ತು. ಈಗ ಮಹಾರಾಷ್ಟ್ರ ಕೂಡ ವಿರೋಧದ ಧ್ವನಿಗೂಡಿಸಿದೆ.

ಜನವರಿ 24 ರಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುಪ್ರಿಂಕೋರ್ಟ್ ನಲ್ಲಿ, ತಿದ್ದುಪಡಿ ಮಾಡಿದ ಕಾನೂನು ಭಾರತೀಯ ಸಂವಿಧಾನವು ನೀಡಿದ ಸಮಾನತೆಯ ಹಕ್ಕಿನ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದಿದ್ದರು.

Comments are closed.