ರಾಷ್ಟ್ರೀಯ

ಠಾಣೆಗೆ ಹೆಂಡತಿಯ ರುಂಡ ಕತ್ತರಿಸಿ ತಂದು ರಾಷ್ಟ್ರಗೀತೆ ಹಾಡಿದ!

Pinterest LinkedIn Tumblr


ಉತ್ತರಪ್ರದೇಶ: ಬೆಚ್ಚಿಬೀಳಿಸುವ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ತಲೆಯನ್ನೇ ಕಡಿದು ಪೊಲೀಸ್ ಠಾಣೆಗೆ ಹಿಡಿದುಕೊಂಡು ಬಂದ ದಾರುಣ ಘಟನೆ ಬಾರಾಬಂಕಿ ಸಮೀಪದ ಬಹದ್ದೂರ್ ಪುರ್ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಜಹಾಂಗೀರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಬಹದ್ದೂರ್ ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯ ರುಂಡ ಕತ್ತರಿಸಿ ಗ್ರಾಮವುದ್ದಕ್ಕೂ ನಡೆದುಕೊಂಡೇ ಬಂದು ಪೊಲೀಸ್ ಠಾಣೆಗೆ ತಲುಪಿದ್ದಾನೆ. ಈ ಭೀಕರ ದೃಶ್ಯ ಕಂಡು ದಂಗಾದ ಪೊಲೀಸರು ಕೂಡಲೇ ಆತನ ಕೈಯಲ್ಲಿದ್ದ ರಕ್ತಸಿಕ್ತವಾದ ಚೀಲವನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಆದರೇ ಆತ ರಾಷ್ಟ್ರಗೀತೆ ಹಾಡಲು ತೊಡಗಿ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದಾನೆ. ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿ ಕೊನೆಗೆ ಆತನ ಕೈಯಲ್ಲಿದ್ದ ರುಂಡವನ್ನು ಕಸಿದುಕೊಂಡು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಅದೇ ಗ್ರಾಮದ ಅಖಿಲೇಶ್ ರಾವತ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ ಪಿ ಅರವಿಂದ ಚತುರ್ವೇಧಿ, ಆರೋಪಿ ಅಖಿಲೇಶ್ ಯಾದವ್ ತನ್ನ ಪತ್ನಿಯನ್ನು ಹತ್ಯೆಗೈದು ಆ ಬಳಿಕ ರುಂಡವನ್ನು ಕತ್ತರಿಸಿ ಪೊಲೀಸ್ ಠಾಣೆಗೆ ತಂದಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಸಲಾಗುವುದು ಎಂದಿದ್ದಾರೆ.

Comments are closed.