ಮುಂಬೈ

ದಾವೂದ್ ಇಬ್ರಾಹಿಂ ಮಾಜಿ ಸಹಚರ ಎಜಾಜ್ ಲಕ್ಡಾವಾಲಾ ಬಂಧನ

Pinterest LinkedIn Tumblr


ಮುಂಬೈ: ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಗ್ಯಾಂಗ್ ಸ್ಟರ್ ಛೋಟಾ ರಾಜನ್ ಮಾಜಿ ಸಹಚರ ಎಜಾಜ್ ಲಕ್ಡಾವಾಲಾನ್ನು ಬುಧವಾರ ರಾತ್ರಿ ಬಂಧಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ಕೊಲೆ ಯತ್ನ, ಸುಲಿಗೆ ಹಾಗೂ ಹಿಂಸಾಚಾರ ಸೇರಿದಂತೆ 25ಕ್ಕೂ ಹೆಚ್ಚು ಪ್ರಕರಣಗಳು ಎಜಾಜ್ ಮೇಲೆ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಜಾಜ್ ಲಕ್ಡಾವಾಲಾನನ್ನು ಬಂಧಿಸಲು ನಾವು ಕಳೆದ ಆರು ತಿಂಗಳಿನಿಂದ ಪ್ರಯತ್ನಿಸುತ್ತಿದ್ದೇವು. ಆತನ ಬಂಧನಕ್ಕೆ ಖಚಿತ ಮಾಹಿತಿಗಾಗಿ ಕಾಯುತ್ತಿದ್ದೇವು. ಈ ಹಿನ್ನೆಲೆಯಲ್ಲಿ ಬುಧವಾರ ಪಾಟ್ನಾದ ಮನೆಗೆ ಭೇಟಿ ನೀಡಿದ ವೇಳೆ ಬಂಧಿಸಲಾಯ್ತು ಎಂದು ವರದಿ ತಿಳಿಸಿದೆ.

ಎಜಾಜ್ ನನ್ನು ಮುಂಬೈಗೆ ಕರೆ ತರಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಸ್ತೋಗಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

Comments are closed.