ಮುಂಬೈ

ಒಂದು ಪವನ್ ಚಿನ್ನಕ್ಕೆ 32800 ರೂಪಾಯಿಗಳು

Pinterest LinkedIn Tumblr


ಮುಂಬಯಿ: ಕಳೆದ ಎರಡು ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 1800 ರೂಪಾಯಿಗಳ ಜಿಗಿತ ಕಂಡಿದೆ. ಮದ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿರುವುದು ಬಂಗಾರದ ಬೆಲೆ ಏರಲು ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಸೋಮವಾರ ಚಿನಿವಾರ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 41 ಸಾವಿರಕ್ಕೆ ತಲುಪುವುದರೊಂದಿಗೆ ಚಿನ್ನದ ಬೆಲೆ ಐತಿಹಾಸಿಕ ದಾಖಲೆಯನ್ನು ಬರೆಯಿತು. ದೇಶೀ ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ನಲ್ಲಿ ಚಿನ್ನದ ಬೆಲೆ ಕಳೆದೆರಡು ದಿನಗಳಲ್ಲಿ 1800 ರೂಪಾಯಿಗಳಷ್ಟು ಹೆಚ್ಚಳವನ್ನು ಕಂಡಂತಾಗಿದೆ.

ಇರಾನ್ ಹಾಗೂ ಅಮೆರಿಕಾ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಜಾಗತಿಕ ಶೇರು ಮಾರುಕಟ್ಟೆಯಲ್ಲೂ ಕುಸಿತ ಸಂಭವಿಸಿದೆ ಮಾತ್ರವಲ್ಲದೇ ಕಚ್ಛಾ ತೈಲಗಳ ಬೆಲೆಯಲ್ಲೂ ಏರಿಕೆಯಾಗಿರುವುದು ವಿಶ್ವಾದ್ಯಂತ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ಏಳು ವರ್ಷಗಳಲ್ಲೇ ಅತೀ ಹೆಚ್ಚಿನ ದರ ಸೋಮವಾರದಂದು ದಾಖಲಾಯಿತು.

Comments are closed.