ಮುಂಬೈ

ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆ ಬೆನ್ನಲ್ಲೆ ಸ್ಫೋಟಗೊಂಡ ಅಸಮಾಧಾನ; ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್ ಸಿಪಿ ಶಾಸಕ

Pinterest LinkedIn Tumblr

ಔರಂಗಬಾದ್ :ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆ ಆದ ಕೆಲ ತಾಸುಗಳಲ್ಲೇ ಅಸಮಾಧಾನ ಸ್ಫೋಟಗೊಂಡಿದ್ದು, ಬೀಡ್ ಜಿಲ್ಲೆಯ ಎನ್ ಸಿಪಿ ಶಾಸಕ ಪ್ರಕಾಶ್ ಸೊಲಾಂಕೆ ಸೋಮವಾರ ರಾತ್ರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಮ್ಮಂತವರು ರಾಜಕೀಯ ಮಾಡಲು ಅನರ್ಹರು ಎಂದು ಅವರು ಹೇಳಿದ್ದಾರೆ.

ಮಜಲ್ಗಾಂವ್ ಕ್ಷೇತ್ರದಿಂದ ನಾಲ್ಕು ಬಾರಿ ಚುನಾಯಿತರಾಗಿರುವ ಸೋಲಾಂಕೆ ಅವರ ಹಠಾತ್ ನಿರ್ಧಾರದ ಹಿಂದೆ ಸಂಪುಟಕ್ಕೆ ಸೇರಿಸಿಕೊಳ್ಳದಿರುವುದು ಪ್ರಮುಖ ಕಾರಣವಾಗಿರಬಹುದು. ಆದರೆ, ಇದನ್ನು ಅವರು ನಿರಾಕರಿಸಿದ್ದು,

ಮತ್ತು ರಾಜ್ಯ ಕ್ಯಾಬಿನೆಟ್ನಲ್ಲಿ ಅವರ ಪ್ರವೇಶವಿಲ್ಲದ ನಡುವಿನ ಯಾವುದೇ ಸಂಬಂಧವನ್ನು ನಿರಾಕರಿಸಿದರು, ಇದನ್ನು ಸೋಮವಾರ ವಿಸ್ತರಿಸಲಾಯಿತು. ನಾವು ರಾಜಕೀಯ ಮಾಡಲು ಯೋಗ್ಯರಲ್ಲ ಎಂಬುದನ್ನು ಸಂಪುಟ ವಿಸ್ತರಣೆ ಸಾಕ್ಷಿಕರಿಸಿದೆ ಎಂದು ಹೇಳಿದರು.

ಮಂಗಳವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ದೂರ ಉಳಿಯುವುದಾಗಿ ಸುದ್ದಿಸಂಸ್ಥೆಯೊಂದಕ್ಕೆ ಸೊಲಾಂಕೆ ತಿಳಿಸಿದ್ದಾರೆ.

ಪಕ್ಷದ ಯಾವುದೇ ನಾಯಕರೊಂದಿಗೆ ತಮಗೆ ಅಸಮಾಧಾನವಿಲ್ಲ, ಇಂದು ಮಧ್ಯಾಹ್ನ ಸ್ಪೀಕರ್ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ . ತಮ್ಮ ರಾಜೀನಾಮೆಗೂ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ ನಡೆದ ಸಂಪುಟ ವಿಸ್ತರಣೆಯಲ್ಲಿ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಉದ್ದವ್ ಠಾಕ್ರೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಇವರಲ್ಲದೆ 36 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು

Comments are closed.