ಮುಂಬೈ

‘ದಿ ಗೋಲ್ಡನ್ ಟಾರ್ಗೆಟ್’ ಪ್ರಶಸ್ತಿಗೆ ಭಾಜನರಾದ ಮೂವರು ಭಾರತೀಯ ಶೂಟರ್‌ಗಳು.

Pinterest LinkedIn Tumblr

ಪುಣೆ: ಪ್ರಸಕ್ತ ವರ್ಷದಲ್ಲಿ ವಿಶ್ವ ದರ್ಜೆಯಲ್ಲಿ ಭಾರತದ ಶೂಟರ್ ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆಂಬ ಬಗ್ಗೆ ಯಾವುದೇ ಅನುಮಾನವಿಲ್ಲ. ಮೂವರು ಭಾರತೀಯ ಶೂಟರ್‍ಗಳು ವರ್ಷಾಂತ್ಯದಲ್ಲಿ ಬಿಡುಗಡೆಯಾಗಿರುವ ವಿಶ್ವ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆಯುವ ಮೂಲಕ ಇಂಟರ್ ನ್ಯಾಷನಲ್ ಶೂಟಿಂಗ್ ಫೆಡರೇಷನ್ ನೀಡುವ ‘ದಿ ಗೋಲ್ಡನ್ ಟಾರ್ಗೆಟ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇಂದಿನ ವರ್ಷದಿಂದಲೇ ಐಎಸ್‍ಎಸ್‍ಎಫ್ ಅಗ್ರ ಶ್ರೇಯಾಂಕ ಪಡೆದ ಅಥ್ಲಿಟ್‍ಗಳಿಗೆ ‘ದಿ ಗೋಲ್ಡನ್ ಟಾರ್ಗೆಟ್’ ಪ್ರಶಸ್ತಿ ನೀಡಲು ಮುಂದಾಗಿದೆ. ಶೂಟಿಂಗ್ 12 ವಿಭಾಗಗಳಲ್ಲಿ ಅಗ್ರ ಸ್ಥಾನ ಪಡೆದವರಿಗೆ ಡಿಸೆಂಬರ್ 7 ರಂದು ಮುನಿಚ್ ನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಭಾರತದ ದಿವ್ಯಾಂಶ್ ಸಿಂಗ್ ಪನ್ವಾರ್ ಹಾಗೂ ಎಲವೆನಿಲ್ ವಲರಿವನ್ ಅವರು ಕ್ರಮವಾಗಿ ಪುರುಷ ಹಾಗೂ ಮಹಿಳೆಯರ 10ಮೀ. ರೈಫಲ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಪಿಸ್ತೂಲ್ ಅನುಭವಿ ಸೌರಭ್ ಚೌಧರಿ ವರ್ಷಾಂತ್ಯದಲ್ಲಿ ಏರ್ ಪಿಸ್ತೂಲ್ ವಿಭಾಗದ ಶ್ರೇಯಾಂಕದಲ್ಲಿ ಅಗ್ರ ಸ್ಥಾನದೊಂದಿಗೆ ತಮ್ಮ ಅಭಿಯಾನ ಮುಗಿಸಿದ್ದಾರೆ. ಈ ಮೂವರು ದಿ ಗೋಲ್ಡನ್ ಟಾರ್ಗೆಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Comments are closed.