ಚಿಕ್ಕಮಗಳೂರು: ಅಂಗನವಾಡಿ ಕೇಂದ್ರದಲ್ಲಿ ಮೂರು ವರ್ಷದ ಬಾಲಕಿ ಚಡ್ಡಿಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದರಿಂದ ಕೋಪಗೊಂಡ ಆಯಾ ಚಾಕುವಿನಿಂದ ತಲೆಗೆ ಇರಿದಿರುವ ಘಟನೆ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆರೆಮಕ್ಕಿ ನಿವಾಸಿ ಚಂದ್ರಶೇಖರ್ ಮತ್ತು ಗೀತಾ ದಂಪತಿ ಪುತ್ರಿ ಅಮಿತಾಳನ್ನು ಕಳೆದ ಮೂರು ತಿಂಗಳಿನಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದರು. ನಿನ್ನೆ ಅಂಗನವಾಡಿ ಕೇಂದ್ರದಲ್ಲಿ ಈ ಮಗು ಚಡ್ಡಿಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದೆ.
ಇದರಿಂದ ಕುಪಿತಗೊಂಡ ಆಯಾ ತರಕಾರಿ ಹಚ್ಚುವ ಚಾಕುವಿನಿಂದ ಮಗುವಿನ ತಲೆಗೆ ಇರಿದಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಈ ಮಗುವನ್ನು ನಗರದ ಮಲ್ಲೇಗೌಡ ಎಂಬುವರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು , ವೈದ್ಯರು ಎರಡು ಹೊಲಿಗೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಪೋಷಕರು ಅಂಗನವಾಡಿಯ ಆಯಾ ಮತ್ತು ಶಿಕ್ಷಕಿಯ ವಿರುದ್ಧ ಮಲ್ಲಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇವರಿಬ್ಬರ ವಿರುದ್ಧ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Comments are closed.