ಮುಂಬೈ

ಬಿಎಂಸಿ ಸಿವಿಲ್ ಗುತ್ತಿಗೆದಾರರ ಮೆನೆ,ವಾಣಿಜ್ಯ ಸ್ಥಳಗಳ ಮೇಲೆ ಐಟಿ ದಾಳಿ

Pinterest LinkedIn Tumblr

ಮುಂಬೈ: ಬೃಹತ್ ಮುಂಬೈ ನಗರ ಪಾಲಿಕೆ(ಬಿಎಂಸಿ) ಸಿವಿಲ್ ಗುತ್ತಿಗೆದಾರರ ಮೆನೆಗಳು ಮತ್ತು ವಾಣಿಜ್ಯ ಸ್ಥಳಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ(ಐಟಿ) ಅಧಿಕಾರಿಗಳು 735 ಕೋಟಿ ರೂ.ಗಳ ಭಾರೀ ಅಕ್ರಮ-ಅವ್ಯವಹಾರಗಳನ್ನು ಪತ್ತೆ ಮಾಡಿದ್ದಾರೆ.

ಇದೇ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಿಎಂಸಿಯ ಕೆಲವು ಅಧಿಕಾರಿಗಳ ಮನೆಗಳಲ್ಲೂ ಶೋಧ ನಡೆಸಲಾಗಿದೆ.ಮುಂಬೈ ಮತ್ತು ಗುಜರಾತ್‍ನ ಸೂರತ್ ನಗರಗಳ ಗುತ್ತಿಗೆದಾರರ 37 ಮನೆಗಳು ಮತ್ತು ಕಮರ್ಷಿಯಲ್ ಕಾಂಪ್ಲೆಕ್ಸ್‍ಗಳಲ್ಲಿ ಈ ದಾಳಿ ನಡೆಸಲಾಗಿದೆ.

ಸರಣಿ ದಾಳಿಗೆ ವೇಳೆ ಭಾರೀ ಭ್ರಷ್ಟಾಚಾರ, ತೆರಿಗೆ ವಂಚನೆ, ಅಕ್ರಮ ಮತ್ತು ಅವ್ಯವಹಾರಗಳು ಪತ್ತೆಯಾಗಿವೆ ಎಂದು ಐಟಿ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ದಾಳಿಗಳ ವೇಳೆ ಹಲವು ದಾಖಲೆಪತ್ರಗಳು ಮತ್ತು ದಸ್ತಾವೇಜುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಭಾರೀ ಪ್ರಮಾಣದ ತೆರಿಗೆ ವಂಚನೆ ಮತ್ತು ಹಣ ದುರ್ಬಳಕೆಗಳು ನಡೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಿವಿಲ್ ಗುತ್ತಿಗೆದಾರರ 37ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದ ದಾಳಿಗಳ ವೇಳೆ ಜಪ್ತಿ ಮಾಡಲಾಗದ ದಾಖಲೆಪತ್ರಗಳನ್ನು ಪರಿಶೀಲಿಸಲಾಗಿ, ನಕಲಿ ಖರ್ಚು-ವೆಚ್ಚಗಳು ಮತ್ತು ಬೋಗಸ್ ಎಂಟ್ರಿಗಳು ಮಾಡಿರುವುದಕ್ಕೆ ಸಾಕಷ್ಟು ಪುರಾವೆಗಳು ಲಭಿಸಿವೆ. ಒಟ್ಟು 735 ಕೋಟಿ ರೂ.ಗಳ ಅಕ್ರಮ-ಅವ್ಯವಹಾರಗಳು ನಡೆದಿರುವುದು ದೃಢಪಟ್ಟಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

============

Comments are closed.