ರಾಷ್ಟ್ರೀಯ

ದೆಹಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 527ಕ್ಕೆ ಕುಸಿತ

Pinterest LinkedIn Tumblr

ನವದೆಹಲಿ: ರಾಷ್ಟ್ರ ರಾಜಧಾನಿ, ವಿಶ್ವದ ಅತಿ ಮಲಿನ ನಗರ ಎಂಬ ಅಪಖ್ಯಾತಿಗೆ ಒಳಗಾಗಿದೆ. ಏರ್​ ವಿಷುವಲ್​ ಡೇಟಾ ಪ್ರಕಾರ ದೆಹಲಿಯಲ್ಲಿ ಶುಕ್ರವಾರದಂದು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 527ಕ್ಕೆ ಕುಸಿದಿದೆ.

ದೆಹಲಿಯ ವಾಯು ಗುಣಮಟ್ಟ ನ.5ರಂದು ಅತ್ಯಂತ ಮಲಿನಕಾರಕವಾಗಿತ್ತು. ಸತತ 9 ದಿನ ದೆಹಲಿಯ ಗಾಳಿಯ ಗುಣಮಟ್ಟ ಉಸಿರಾಡಲು ಅಸಾಧ್ಯ ಎಂಬ ಮಟ್ಟದಲ್ಲಿ ಇದ್ದದ್ದು ದಾಖಲೆಯಾಗಿತ್ತು ಎಂದು ಏರ್​ ವಿಷುವಲ್​ ಹೇಳಿದೆ.

ವಿಶ್ವದ ಅತಿ ಮಲಿನ ನಗರಗಳ ಪಟ್ಟಿಯಲ್ಲಿ ಭಾರತೀಯ ಉಪಖಂಡದ 10 ನಗರಗಳು ಸ್ಥಾನ ಪಡೆದುಕೊಂಡಿವೆ. ದೆಹಲಿ, ಲಾಹೋರ್​, ಕರಾಚಿ, ಕೋಲ್ಕತ, ಮುಂಬೈ ಮತ್ತು ಕಠ್ಮಂಡು ನಗರಗಳು ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿವೆ.

ದೆಹಲಿ ನಂತರದ ಸ್ಥಾನದಲ್ಲಿರುವ ಪಾಕಿಸ್ತಾನದ ಲಾಹೋರ್​ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 234 ಇದೆ. ಅಂದರೆ ದೆಹಲಿಗೆ ಹೋಲಿಸಿದರೆ ಅಲ್ಲಿನ ಗಾಳಿಯ ಗುಣಮಟ್ಟ 2 ಪಟ್ಟು ಉತ್ತಮವಾಗಿದೆ ಎಂದೇ ಹೇಳಬಹುದಾಗಿದೆ. ಕೋಲ್ಕತದ ವಾಯು ಗುಣಮಟ್ಟ ಸೂಚ್ಯಂಕ 161 ಇದೆ. ಉಜ್ಬೇಕಿಸ್ತಾನದ ತಾಷ್ಕೆಂಟ್​ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ 185 ಇದೆ. ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಕಡಿಮೆ ಇದ್ದ ಹೊರತಾಗಿಯೂ ಅಲ್ಲಿನ ಗಾಳಿಯ ಗುಣಮಟ್ಟ ಕಳಪೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಕರಾಚಿ (180), ಚೀನಾದ ಚೆಂಗ್ಡು (158), ವಿಯೆಟ್ನಾಂನ ಹನೋಯಿ (158) ಚೀನಾದ ಗುವಾಂಗ್​ಝೌ (157), ಭಾರತದ ಮುಂಬೈ (153), ನೇಪಾಳದ ಕಠ್ಮಂಡು (152) ನಂತರದ ಸ್ಥಾನಗಳಲ್ಲಿವೆ

Comments are closed.