ಆನ್ಲೈನ್ ಮಾರಾಟ ಮಳಿಗೆಯಾದ ಫ್ಲಿಪ್ಕಾಟ್ ಹೊಸ ಸೇವೆಯೊಂದನ್ನು ಆರಂಭಿಸುವುದಾಗಿ ತಿಳಿಸಿದೆ. ಈವರೆಗೆ ಆನ್ಲೈನ್ ಗ್ಯಾಜೆಟ್ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಫ್ಲಿಪ್ಕಾಟ್ ಇದೀಗ ಪ್ಲಾಸ್ಟಿಕ್ ಸಮರ್ಪಕ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ.
ಫ್ಲಿಪ್‍ಕಾರ್ಟ್ ಪ್ಲಾಸ್ಟಿಕ್ ಪ್ಯಾಕ್ಗಳನ್ನು ಗ್ರಾಹಕರಿಂದ ಸಂಗ್ರಹಿಸಲು ಯೋಜನೆಯನ್ನು ಹಾಕಿಕೊಂಡಿದ್ದು, ಆರಂಭದಲ್ಲಿ ಮುಂಬೈ, ಬೆಂಗಳೂರು, ಡೆಹ್ರಾಡೂನ್, ದೆಹಲಿ, ಕೊಲ್ಕತ್ತಾ, ಪುಣೆ ಮತ್ತು ಅಹ್ಮದಾಬಾದ್ನಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ.
ಈಗಾಗಲೇ ಫ್ಲಿಪ್‍ಕಾರ್ಟ್ ಒಮ್ಮೆ ಬಳಕೆ ಮಾಡಲಾದ ಪ್ಲಾಸ್ಟಿಕ್ನ ಉಪಯೋಗವನ್ನು ಶೇ.33 ರಷ್ಟು ಇಳಿಸಿದ್ದು, ಶೇ. 100 ರಷ್ಟು ಪುನರ್ ಬಳಕೆಯ ಪ್ಲಾಸ್ಟಿಕ್ ಅನ್ನು ತನ್ನ ಪೂರೈಕೆ ಸರಣಿಯಲ್ಲಿ ಮಾರ್ಚ್ 2021ರ ಹೊತ್ತಿಗೆ ಬಳಸುವ ಗುರಿ ಹೊಂದಿದೆ. ಈ ಕುರಿತಾಗಿ ಫ್ಲಿಪ್‍ಕಾರ್ಟ್ ಸಮೂಹದ ಮುಖ್ಯ ಕಾರ್ಪೋರೇಟ್ ವಿದ್ಯಮಾನಗಳ ಅಧಿಕಾರಿ ರಜನೀಶ್ ಕುಮಾರ್ ಮಾತನಾಡಿ ‘ಮನೆ ಬಾಗಿಲಿಗೆ ತೆರಳಿ ಪ್ಲಾಸ್ಟಿಕ್ ಸಂಗ್ರಹಿಸಿ ಅದರ ನಿರ್ಮೂಲನೆ ಮಾಡುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ. ಇಂತಹ ಮಹತ್ತರವಾದ ಕಾರ್ಯ ನಿರ್ವಹಿಸುವ ಇ-ವಾಣಿಜ್ಯ ಮಾರುಕಟ್ಟೆಯಲ್ಲಿ ಮೊದಲಿಗರು ಎಂಬ ಹೆಮ್ಮೆ ನಮಗಿದೆ ಎಂದು ಹೇಳಿದರು.
ಫ್ಲಿಪ್‍ಕಾರ್ಟ್ ಸಂಸ್ಥೆ ಪ್ಲಾಸ್ಟಿಕ್ ಬಳಕೆಯ ಕುರಿತು ಹೆಚ್ಚಿನ ಜಾಗೃತಿ ವಹಿಸಿದ್ದು, ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡುವತ್ತ ಗ್ರಾಹಕರ ಮನವೊಲಿಸುತ್ತಿದೆ. ಅದಕ್ಕೆಂದೆ ಪೇಪರ್ ಬ್ಯಾಗ್ಗಳನ್ನು ಮತ್ತು ಕಾರ್ಟನ್ ವೇಸ್ಟ್ ಶ್ರೆಡೆಟ್ ವಸ್ತುಗಳ ಬಳಕೆಯನ್ನು ಮಾಡಲು ಸಂಸ್ಥೆ ಕ್ರಮ ಕೈಗೊಂಡಿದೆ.
============
Comments are closed.