ಮುಂಬೈ

ಅಮೆರಿಕ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ತೀರ ಕುಸಿತ

Pinterest LinkedIn Tumblr

ಮುಂಬೈ : ದೇಶದಲ್ಲಿನ ಆರ್ಥಿಕ ಹಿಂಜರಿತದ ನಡುವೆಯೇ ಇಂದು ಅಮೆರಿಕ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿದಿದೆ. ಇಂದು ಮಧ್ಯಾಹ್ನದ ಬಳಿಕ ಭಾರತೀಯ ರೂಪಾಯಿ 57 ಪೈಸೆ ಕನಿಷ್ಠ ವಹಿವಾಟುಗೊಂಡಿದ್ದು, ಡಾಲರ್ ಎದುರು 72.04 ರೂಪಾಯಿಗೆ ಕುಸಿದಿದೆ.

ಕಳೆದ ಎರಡು ದಿನಗಳ ಹಿಂದೆ ಅಮೆರಿಕ ಡಾಲರ್ ಎದುರು 71.47 ರೂಪಾಯಿಗೆ ಇಳಿದಿತ್ತು. ನಿನ್ನೆ ಗುರು ನಾನಕ್​ ಜಯಂತಿ ಪ್ರಯುಕ್ತ ವಿದೇಶಿ ವಿನಿಮಯ ಮಾರುಕಟ್ಟೆಗೆ ರಜೆ ಇತ್ತು. ಇಂದು ಮಧ್ಯಾಹ್ನದ ಬಳಿಕ ಅಮೆರಿಕ ಡಾಲರ್ ಎದುರು 72.04 ರೂಪಾಯಿಗೆ ಕುಸಿದಿದೆ.

ವಾಹನ ಮಾರಾಟ ಕುಸಿತ, ತಯಾರಿಕೆ ಮತ್ತು ಮೂಲಸೌಕರ್ಯ ವಲಯದ ಇಳಿಮುಖ ಬೆಳವಣಿಗೆ, ಮೂಲಸೌಕರ್ಯ ಮತ್ತು ನಿರ್ಮಾಣ ವಲಯಗಳಲ್ಲಿ ಹೂಡಿಕೆ ಚಟುವಟಿಕೆಯಲ್ಲಿ ಇಳಿಕೆಯಾಗಿದ್ದು, ದೇಶದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಇವುಗಳೆಲ್ಲದರ ಪರಿಣಾಮ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ ಎಂದು ಆರ್ಥಿಕ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ…

Comments are closed.