ಮುಂಬೈ

ಬಿಜೆಪಿಯೇತರ ಸರಕಾರ ರಚನೆಗೆ ಶಿವಸೇನಾ ಸಿದ್ಧತೆ

Pinterest LinkedIn Tumblr


ಮುಂಬೈ: ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ, ಶಿವಸೇನಾ ಮೈತ್ರಿಕೂಟದ ಬಿಕ್ಕಟ್ಟು ಮತ್ತೆ ಮುಂದುವರಿದಿದ್ದು, ಶಿವಸೇನಾಗೆ ಮುಖ್ಯಮಂತ್ರಿ ಹುದ್ದೆ ನೀಡುವ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದೆ. ಮತ್ತೊಂದೆಡೆ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಜತೆ ಕೈಜೋಡಿಸುವ ಬಗ್ಗೆ ಮಾತುಕತೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಶಿವಸೇನಾ ಮುಖಂಡ ಸಂಜಯ್ ರಾವತ್, ಶಿವಸೇನಾಗೆ ಮುಖ್ಯಮಂತ್ರಿ ಹುದ್ದೆ ನೀಡಲೇಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅಲ್ಲದೇ ಬಿಜೆಪಿಯನ್ನು ಹೊರತುಪಡಿಸಿ ಸರಕಾರ ರಚಿಸುವುದಾಗಿ ಪರೋಕ್ಷವಾಗಿ ಮುನ್ಸೂಚನೆ ನೀಡಿದ್ದಾರೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನಾ 2/3ರಷ್ಟು ಬಹುಮತ ಪಡೆದಿದೆ. ಯಾರಿಗೆ ಬಹುಮತ ಇಲ್ಲವೋ ಅವರು ಸರಕಾರ ರಚಿಸುವ ಸಾಹಸಕ್ಕೆ ಮುಂದಾಗಬಾರದು ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದ್ದು, ಚುನಾವಣಾ ಪೂರ್ವದ ಮೈತ್ರಿಯಂತೆ ಭರವಸೆಯನ್ನು ಈಡೇರಿಸುವ ಮೂಲಕ ಮಹಾರಾಷ್ಟ್ರದಲ್ಲಿ ಸರಕಾರ ರಚನೆಯಾಗಲಿ ಎಂದು ರಾವತ್ ತಿಳಿಸಿದ್ದಾರೆ.

Comments are closed.