ಮುಂಬೈ

ತಂಗಿ ಸ್ನಾನದ ವೀಡಿಯೋವನ್ನು ಬಾಯ್ ಫ್ರೆಂಡ್ ಜತೆ ಹಂಚಿಕೊಂಡ ಅಕ್ಕ!

Pinterest LinkedIn Tumblr


ಮುಂಬೈ:ತಂಗಿಯ ನಗ್ನ ದೇಹದ ವೀಡಿಯೋವನ್ನು ಸ್ವತಃ ಅಕ್ಕನೇ ಮದುವೆಯಾಗಿದ್ದ ಗೆಳೆಯನ ಜತೆ ಹಂಚಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 25ರ ಹರೆಯದ ಮಹಿಳೆಯನ್ನು ದಕ್ಷಿಣ ಮುಂಬೈನ ಅಗ್ರಿಪಾಡಾ ಪ್ರದೇಶದ ಪೊಲೀಸರು ಶುಕ್ರವಾರ ಬಂಧಿಸಿರುವ ಘಟನೆ ನಡೆದಿದೆ.

ಈ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಮುಂಬೈ ಬೈಕುಲ್ಲಾ ಪ್ರದೇಶದ ನಿವಾಸಿ, 20ವರ್ಷದ ಯುವತಿ ಪೊಲೀಸ್ ಠಾಣೆಗೆ ಆಗಮಿಸಿದ್ದು, ತನ್ನ ಅಕ್ಕನ ವಿರುದ್ಧ ದೂರು ನೀಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಪ್ರಕರಣ?

ಆರೋಪಿ ಮಹಿಳೆ(ಯುವತಿಯ ಅಕ್ಕ) ಉದ್ದೇಶಪೂರ್ವಕವಾಗಿ ಬಾಯ್ ಫ್ರೆಂಡ್ ಗೆ ವೀಡಿಯೋ ಕರೆ ಮಾಡಿದ್ದು, ನಂತರ ತನ್ನ ತಂಗಿ ಸ್ನಾನ ಮಾಡುತ್ತಿದ್ದುದ್ದನ್ನು ತೋರಿಸಿದ್ದಳು. ಈ ಸಂದರ್ಭದಲ್ಲಿ ಆತ ನಗ್ನದೇಹದ ಚಿತ್ರದ ಸ್ಕ್ರೀನ್ ಶಾಟ್ ತೆಗೆದು ತನ್ನ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ. ನಂತರ ಯುವತಿಯ ಸಂಬಂಧಿಕರ ವಾಟ್ಸಪ್ ಗೆ ಕಳುಹಿಸಿರುವುದಾಗಿ ಆರೋಪಿಸಿದ್ದಾಳೆ.

ಆರೋಪಿ ಮಹಿಳೆ ಬಳಿ ಬಾಯ್ ಫ್ರೆಂಡ್ ಆಕೆಯ ತಂಗಿಯ ನಗ್ನ ಚಿತ್ರವನ್ನು ತೆಗೆಯುವಂತೆ ಕೇಳಿಕೊಂಡಿದ್ದ..ಅದರಂತೆ ಈಕೆ ತಂಗಿ ಸ್ನಾನ ಮಾಡುತ್ತಿದ್ದಾಗಲೇ ವೀಡಿಯೋ ಮಾಡುವಂತೆ ಅನುಕೂಲ ಮಾಡಿಕೊಟ್ಟಿದ್ದಳು. ಇದೊಂದು ಪ್ರತೀಕಾರದ ಕೆಲಸವಾಗಿದೆ ಎಂದು ವರದಿ ತಿಳಿಸಿದೆ.

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸಹೋದರಿಯ ಬಾಯ್ ಫ್ರೆಂಡ್ ಗೆ ತಂಗಿ ಅವಮಾನಿಸಿದ್ದಳು ಎಂದು ವರದಿ ಹೇಳಿದೆ. ಈ ಘಟನೆ ಬಗ್ಗೆ ಮಹಿಳೆ ಮತ್ತು ಆಕೆಯ ಬಾಯ್ ಫ್ರೆಂಡ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.