ಮುಂಬೈ

ಚೆನೈ, ಮುಂಬೈ,ಕರ್ನಾಟಕ ಏಕ ಕಾಲದಲ್ಲಿ “ದಬಾಂಗ್ 3” ಟ್ರೈಲರ್ ಬಿಡುಗಡೆ.

Pinterest LinkedIn Tumblr

ಬೆಂಗಳೂರು: ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆಹಂಚಿಕೊಂಡಿರುವ ‘ದಬಾಂಗ್ 3’ ಸಿನಿಮಾ‌ದ ಟ್ರೈಲರ್ ಬುಧವಾರ ಅದ್ಧೂರಿಯಾಗಿ ಬಿಡುಗಡೆಗೊಂಡಿತು.

ಚೆನೈ, ಹೈದ್ರಾಬಾದ್, ಮುಂಬೈ ಹಾಗೂ ಕರ್ನಾಟಕದಲ್ಲಿ ಏಕ ಕಾಲದಲ್ಲಿ ವಿಡಿಯೋ ಸ್ಟ್ರೀಮಿಂಗ್ ಮೂಲಕ ಚಿತ್ರತಂಡ ಟ್ರೈಲರ್ ಬಿಡುಗಡೆಗೊಳಿಸಿತು. ಡಿಸೆಂಬರ್ 20ರಂದು ಸಿನಿಮ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. ಕನ್ನಡದಲ್ಲಿಯೇ ಡಬ್ ಆಗಿ ಚಿತ್ರ ಬಿಡುಗಡೆಯಾಗಲಿದ್ದು, ಕನ್ನಡ ಅವತರಣಿಕೆಗೆ ಅಂಬಿ ನಿಂಗ್​ ವಯಸ್ಸಾಯ್ತೋ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಸಂಭಾಷಣೆ ಬರೆದಿದ್ದಾರೆ. ಹಾಡುಗಳಿಗೆ ನಿರ್ದೇಶಕ ಅನೂಪ್ ಬಂಡಾರಿ ಸಾಹಿತ್ಯ ಬರೆದಿದ್ದಾರೆ.

ವಿಭಿನ್ನ ಶೈಲಿಯಲ್ಲಿ ದಬಾಂಗ್ 3 ಸಿನಿಮಾ ಪ್ರಚಾರ ಮಾಡಲಾಗಿದ್ದು, ಇಂದು ಟ್ರೈಲರ್​ ಬಿಡುಗಡೆ ವೇಳೆ ನಟ ಸಲ್ಮಾನ್​ ಖಾನ್​ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮ ಮತ್ತು ಅಭಿಮಾನಿಗಳ ಜತೆ ಚರ್ಚಿಸಿದರು. ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ‌ಬರುವುದಾಗಿ ತಿಳಿಸಿದರು. ಇದೇ ವೇಳೆ ಕೆಜಿಎಫ್ ಸಿನಿಮಾ‌ ಬಗ್ಗೆ ಮಾತನಾಡಿ, ಕನ್ನಡದ ಕೆಜಿಎಫ್ ಸಿನಿಮಾ‌ವನ್ನು ಮುಂಬೈ ಪ್ರೇಕ್ಷಕರು ಕೂಡ ನೋಡಿದ್ದಾರೆ ಎಂದರು.

ಕಿಚ್ಚ ಸುದೀಪ್​ರನ್ನು ಹೊಗಳಲು ಮರೆಯದ ಸಲ್ಮಾನ್​, ಸುದೀಪ್​‌ ನನ್ನ ಸಹೋದರನ‌ ರೀತಿ ಎಂದರು. ಸೋಹಿಲ್​ಗೆ ಸುದೀಪ್ ಮೊದಲು‌ ಪರಿಚಯವಾಯಿತು. ಈಗ ನನಗೂ ತುಂಬಾ ಆತ್ಮೀಯರಾಗಿದ್ದಾರೆ. ಅವರೊಬ್ಬ ಒಳ್ಳೆಯ ಮನುಷ್ಯ, ಶ್ರಮಜೀವಿ ಹಾಗೂ ಸ್ವಚ್ಛ ಮನಸ್ಸಿನ ವ್ಯಕ್ತಿ ಎಂದು ಕೊಂಡಾಡಿದರು. ಅಲ್ಲದೆ, ಈ ಸಿನಿಮಾದಲ್ಲಿ ಸುದೀಪ್​ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ‌ಸುದೀಪ್ ಸೂಪರ್ ಸ್ಟಾರ್ ಆಗಿದ್ದಾರೆ. ಅದಕ್ಕಾಗಿ ಅವರನ್ನು ಆಯ್ಕೆ ಮಾಡಿಕೊಂಡೆವು ಎಂದು ತಿಳಿಸಿದರು.

Comments are closed.