ಮುಂಬೈ

ಕೈತುಂಬ ಸಂಬಳ ಪಡೆಯುವ ಕೆಲಸವಿದ್ದರೂ ರಸ್ತೆಬದಿ ಹೋಟೆಲ್​ ನಡೆಸುವ ದಂಪತಿ

Pinterest LinkedIn Tumblr


ಮುಂಬೈ: ಎಂಬಿಎ ಪದವೀಧರರಾಗಿರುವ ಮುಂಬೈನ ಈ ದಂಪತಿ ಕೈತುಂಬ ಸಂಬಳ ಬರುವ ಉದ್ಯೋಗದಲ್ಲಿದ್ದರೂ ಮುಂಬೈನ ಕಂಡಿವಲಿ ನಿಲ್ದಾಣ ಬಳಿ ಪ್ರತಿದಿನ ಬೆಳಗ್ಗೆ ಹೋಟೆಲ್​ ತೆರೆಯುತ್ತಾರೆ. ಕೆಲಸಕ್ಕೆ ತೆರಳುವ ಮುನ್ನ ಬೆಳಗ್ಗೆ 4 ಗಂಟೆಯಿಂದ 10 ಗಂಟೆವರೆಗೆ ಹೋಟೆಲ್​ ತೆರೆಯುವ ದಂಪತಿ ಹಿಂದಿನ ಉದ್ದೇಶ ಕೇಳಿ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ.

ಫೇಸ್​ಬುಕ್​ ಬಳಕೆದಾರ ದೀಪಾಲಿ ಭಾಟಿಯಾ ಎಂಬುವರು ಬುಧವಾರ ಎಂಬಿಎ ದಂಪತಿ ಅಶ್ವಿನಿ ಶೆನಾಯ್​ ಮತ್ತವರ ಪತಿಯ ಫೋಟೋ ಶೇರ್​ ಮಾಡಿ ಅವರ ಬಗ್ಗೆ ಬರೆದುಕೊಂಡಿದ್ದಾರೆ.

ಗಾಂಧಿ ಜಯಂತಿ ದಿನದಂದು ಒಳ್ಳೆಯ ಆಹಾರಕ್ಕಾಗಿ ಹುಡುಕಾಡುತ್ತಿದ್ದೆ, ಈ ವೇಳೆ ಅಶ್ವಿನಿ ಶೇನಾಯ್​ ದಂಪತಿಯ ಹೋಟೆಲ್​ ಕಣ್ಣಿಗೆ ಬಿತ್ತು. ದಂಪತಿ ಪೋಹಾ, ಉಪ್ಮಾ, ಪರಾಂಥಸ್​ ಮತ್ತು ಇಡ್ಲಿಯಂತಹ ಸ್ನ್ಯಾಕ್ಸ್​​ಗಳನ್ನು ಮಾರಾಟ ಮಾಡುತ್ತಿದ್ದರು. ಆಹಾರದ ರುಚಿಯನ್ನು ಟೇಸ್ಟ್​ ಮಾಡಿದ ಬಳಿಕ ರಸ್ತಬದಿಯಲ್ಲಿ ಹೋಟೆಲ್​ ಏಕೆ ಸ್ಥಾಪಿಸಿದ್ದೀರಿ ಎಂದು ಪ್ರಶ್ನಿಸಿದೆ. ಅದಕ್ಕೆ ಅವರಿಂದ ಬಂದ ಉತ್ತರ ನನ್ನ ಹೃದಯ ಸ್ಪರ್ಶಿಸಿತು ಎಂದು ಭಾಟಿಯಾ ತಿಳಿಸಿದ್ದಾರೆ.

55 ವರ್ಷದ ತನ್ನ ಮನೆಕೆಲಸದಾಕೆಗೆ ನೆರವಾಗಲೆಂದು ಪ್ರತಿದಿನ ಬೆಳಗ್ಗೆ ದಂಪತಿ ಹೋಟೆಲ್​ನ್ನು ತೆರೆಯುತ್ತಾರೆ. ಮನೆಕೆಲಸದಾಕೆಯ ಪತಿಗೆ ಲಕ್ವ ಹೊಡೆದಿದ್ದು, ಆಕೆ ಪ್ರತಿದಿನ ತಯಾರಿಸಿದ ಆಹಾರವನ್ನು ಎಂಬಿಎ ದಂಪತಿ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಆಕೆ ನೀಡುತ್ತಾರೆ ಎಂದು ಭಾಟಿಯಾ ಹೇಳಿದ್ದಾರೆ.

ದಂಪತಿಯನ್ನು ಸೂಪರ್​ ಹೀರೋಸ್​ ಎಂದಿರುವ ಭಾಟಿಯಾ, ಅವರನ್ನು ಮನಸಾರೆ ಹೊಗಳಿದ್ದಾರೆ. ಅವರ ಮನೆಯ ಸೇವಕಿಗೆ ಬೆಂಬಲವಾಗಿ ನಿಂತು ಕೆಲಸ ಮಾಡುತ್ತಿರುವುದು ನಿಜಕ್ಕೂ ಸ್ಫೂರ್ತಿಯ ಕೆಲಸ ಎಂದು ಬರೆದುಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲ ಫೋಸ್ಟ್​ ವೈರಲ್​ ಆಗಿದ್ದು, ಈವರೆಗೂ 12,000 ಮಂದಿ ಲೈಕ್​ ಮಾಡಿದ್ದಾರೆ. ದಂಪತಿ ಕಾರ್ಯವನ್ನು ಮೆಚ್ಚಿ ಹಲವರು ಕಮೆಂಟ್​ ಮಾಡುವ ಮೂಲಕ ಅಭಿನಂದನೆ ಮಹಾಪೂರ ಹರಿಸುತ್ತಿದ್ದಾರೆ. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹಾರೈಸುತ್ತಿದ್ದಾರೆ.

Comments are closed.