ಮುಂಬೈ

ಮೊಬೈಲ್​ನಲ್ಲಿ ಕ್ರಿಕೆಟ್​ ಆಡಿ 1 BHK ಫ್ಲಾಟ್ ಗೆದ್ದ!

Pinterest LinkedIn Tumblr


ಕನಸಿನ ಮನೆ ಪಡೆಯಲು ಜೀವನದುದ್ದಕ್ಕೂ ಶ್ರಮಪಡಬೇಕಾದ ಈ ಜಗತ್ತಿನಲ್ಲಿ, ಗೌರವ್ ಕುಮಾರ್ ಎಂಬ ಯುವಕ 2018ರ ಟಿ20 ಕ್ರಿಕೆಟ್ ಸೀಸನ್​ನಲ್ಲಿ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಆಡುವ ಮೂಲಕ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾರೆ. ನೆಲಹಾಸುಗಳಿಗೆ ಪ್ರಸಿದ್ಧವಾದ ಉತ್ತರ ಪ್ರದೇಶದ ಮಿರ್ಜಾಪುರದ ಗೌರವ್ ಕುಮಾರ್ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ನ ಭರ್ಜರಿ ಬಹುಮಾನ ಗೆಲ್ಲುವ ಮೂಲಕ ಮುಂಬಯಿ ದೊಂಬಿವಲಿಯ ಅಭಿವೃದ್ಧಿಶೀಲ ಪಲಾವಾ ಸಿಟಿಯಲ್ಲಿ 1 BHK ಫ್ಲಾಟ್ ಅನ್ನು ತನ್ನದಾಗಿಸಿಕೊಂಡಿದ್ದಾರೆ.

ಟಿ20 ಕ್ರಿಕೆಟ್ ಸೀಸನ್​ನಲ್ಲಿ ಜಿಯೋ ಡಿಜಿಟಲ್ ಲೈಫ್ ಅನುಭವದೊಡನೆ ಆಕರ್ಷಕ ಬಹುಮಾನಗಳನ್ನು ಗೆಲ್ಲಲು ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಎಂಬ ಪ್ರಶ್ನೋತ್ತರ ಗೇಮ್​ ಅನ್ನು ಪ್ರಸ್ತುತಪಡಿಸುತ್ತಿದೆ. ಇಲ್ಲಿ ಕ್ರಿಕೆಟ್​ ಸಂಬಂಧಿಸಿದ ಸರಳ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹಾಗೆಯೇ ಲೈವ್ ಕ್ರಿಕೆಟ್​ನಲ್ಲಿ ಏನಾಗಬಹುದು, ಮುಂದಿನ ಎಸೆತದಲ್ಲಿ ಎಷ್ಟು ರನ್ ಬರಬಹುದು ಇತ್ಯಾದಿ ಪ್ರಶ್ನೆಗಳನ್ನು ಮುಂದಿಡಲಾಗುತ್ತದೆ. ಇದಕ್ಕೆ ಉತ್ತರಿಸುತ್ತಾ ಹೋದರೆ ನಿಮಗೆ ಬಹುಮಾನ ಲಭ್ಯವಾಗಲಿದೆ.

ಅದರಂತೆ ಗೌರವ್ ಕುಮಾರ್ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಆಡಿದ್ದು, ಇದೀಗ ಅದರ ಬಹುಮಾನವಾಗಿ ಮುಂಬೈ ಎಂಬ ಮಾಯಾ ನಗರಿಯಲ್ಲಿ ಸ್ವಂತ ಮನೆಯನ್ನು ಗೆದ್ದುಕೊಂಡಿದ್ದಾರೆ.

‘ಆ್ಯಪ್​ನಲ್ಲಿ 200ರಿಂದ 300 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತಿದ್ದ ದಿನಗಳೂ ಇದ್ದವು. ಕೆಲ ದಿನಗಳಲ್ಲಿ ಸಂಜೆ ನಾಲ್ಕು ಗಂಟೆಗೊಂದು, ಎಂಟು ಗಂಟೆಗೆ ಇನ್ನೊಂದು ಪಂದ್ಯ ಇರುತ್ತಿತ್ತು. ಅಂತಹ ದಿನಗಳಲ್ಲಿ ರಾತ್ರಿಯ ಊಟ ತಪ್ಪಿಸಿದ್ದೂ ಉಂಟು’ ಭರ್ಜರಿ ಬಹುಮಾನ ಗೆದ್ದ ಖುಷಿ ಮತ್ತು ಮಾಡಿದ ಪ್ರಯತ್ನದ ಬಗ್ಗೆ ಗೌರವ್ ಹೇಳಿಕೊಂಡಿದ್ದಾರೆ.

ಇನ್ನು ಮುಂಬೈನ ಮನೆಗೆ ಭೇಟಿಕೊಟ್ಟ ಸಂದರ್ಭದಲ್ಲಿ ಭಾವುಕರಾಗಿದ್ದ ಗೌರವ್‌ನ ತಾಯಿ, ನಮ್ಮ ಮಗ ಜಿಯೋ ಕಾರಣದಿಂದ ಮನೆ ಗೆದ್ದುಕೊಂಡಿದ್ದಾನೆ. ಇದು ನಮ್ಮ ಅದೃಷ್ಟ ಎಂದು ಸಂತೋಷದಿಂದ ತಿಳಿಸಿದ್ದಾರೆ.

ಮನೆಯ ಕೀಲಿ ಪಡೆದುಕೊಳ್ಳಲು ಮುಂಬೈಗೆ ಪ್ರಯಾಣ ಬೆಳೆಸಿದ್ದ ಗೌರವ್ ಕುಮಾರ್, ಮುಂಬೈನಲ್ಲಿ ನಮಗೊಂದು ಮನೆ ಸಿಗಬಹುದು ಎಂದು ನಾನು ಯೋಚಿಸಿಯೇ ಇರಲಿಲ್ಲ, ಈಗ ನನ್ನ ಭಾವನೆಗಳನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಏನಿದು ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್:

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಒಂದು ವಿನೂತನ ಪ್ರತಿಕ್ರಿಯಾತ್ಮಕ ಪರಿಕಲ್ಪನೆಯಾಗಿದ್ದು, ಮಾರ್ಚ್ 23, 2019 ರಿಂದ ಮೇ 5, 2019ರವರೆಗೆ ಪ್ರಸಾರವಾಗುವ ಕ್ರಿಕೆಟ್ ಪಂದ್ಯಗಳ ಜೊತೆಯಲ್ಲೇ ಬಳಕೆದಾರರಿಗೆ ಕ್ರಿಕೆಟ್ ಆಡುವ ಸಂತಸವನ್ನು ನೀಡುತ್ತದೆ.

ಪಂದ್ಯದ ಪ್ರಸಾರಕ್ಕೆ ಹೊಂದಿಕೊಂಡಂತೆ ಪ್ರತಿ ಚೆಂಡಿನ ಫಲಿತಾಂಶ ಏನಾಗಬಹುದು ಎಂದು ಮೈ ಜಿಯೋ ಆಪ್‌ನಲ್ಲಿ ಹೇಳುವ ಅವಕಾಶವನ್ನು ಈ ಅಪ್ಲಿಕೇಶನ್ ಗ್ರಾಹಕರಿಗೆ ನೀಡುತ್ತದೆ. ಸರಿಯುತ್ತರ ನೀಡಿದ ಬಳಕೆದಾರರಿಗೆ ಅಂಕಗಳು ದೊರಕುತ್ತವೆ. ಸರಿಯುತ್ತರಗಳನ್ನು ಆರಿಸುವ ಮೂಲಕ ಟ್ರಿವಿಯಾ ಪ್ರಶ್ನೆಗಳಿಗೆ ಉತ್ತರಿಸಿ ಹೆಚ್ಚುವರಿ ಅಂಕಗಳನ್ನೂ ಪಡೆಯಬಹುದು.

ಟಿವಿಯಲ್ಲಿ ಪಂದ್ಯಗಳ ನೇರಪ್ರಸಾರ ಆಗುತ್ತಿರುವಾಗಲೇ ಬಳಕೆದಾರರು ತಮ್ಮ ಮೊಬೈಲ್ ಪರದೆಯಲ್ಲಿ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ನಲ್ಲಿ ಭಾಗವಹಿಸಬಹುದು. ಈ ಪರಿಕಲ್ಪನೆಯು ಪ್ರತಿಕ್ರಿಯಾತ್ಮಕತೆಯ ಮೂಲಭೂತ ಸಿದ್ಧಾಂತವನ್ನು ಆಧರಿಸಿದ್ದು, ಬಳಕೆದಾರರು ತಮ್ಮ ಅಚ್ಚುಮೆಚ್ಚಿನ ಕ್ರಿಕೆಟ್ ಪಂದ್ಯವನ್ನು ನೋಡುವುದಷ್ಟೇ ಅಲ್ಲದೆ ಫಲಿತಾಂಶವನ್ನು ತತ್‌ಕ್ಷಣದಲ್ಲಿ ಊಹಿಸುವ ಮೂಲಕ ಅದರಲ್ಲಿ ಪಾಲ್ಗೊಳ್ಳಬಹುದು.

ಈ ಆಟವು ಜಿಯೋ ಚಂದಾದಾರರಿಗೆ ಹಾಗೂ ಚಂದಾದಾರರಲ್ಲದವರಿಗೂ ಲಭ್ಯವಿದೆ. ಬಳಕೆದಾರರು ಮೈ ಜಿಯೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ಸಾಕು. ತತ್‌ಕ್ಷಣದ ಫಲಿತಾಂಶಗಳನ್ನು ಊಹಿಸಿ ಸರಿಯಾದ ಊಹೆಗೆ ಅಂಕಗಳನ್ನು ಪಡೆದುಕೊಳ್ಳುವ ಜೊತೆಗೆ, ಆಟಗಾರರು ತಮ್ಮ ಕ್ರಿಕೆಟ್ ಜ್ಞಾನವನ್ನೂ ಪರೀಕ್ಷಿಸಿಕೊಳ್ಳಬಹುದಾಗಿದೆ. ಪ್ರತಿ ಪಂದ್ಯದದಲ್ಲಿ ಅತಿಹೆಚ್ಚು ಅಂಕ ಗಳಿಸಿದ ಆಟಗಾರರ ಜೊತೆಗೆ ಒಟ್ಟಾರೆಯಾಗಿ ಉನ್ನತ ಅಂಕ ಗಳಿಸಿದವರಿಗೂ ಬಹುಮಾನ ನೀಡಲಾಗುತ್ತದೆ.

Comments are closed.