ಮುಂಬೈ

35 ವರ್ಷ ಹಳೆಯ ಸೀರೆ ಧರಿಸಿ ಮದುವೆಯಾದ ಇಶಾ ಅಂಬಾನಿ

Pinterest LinkedIn Tumblr


ತನ್ನ ಮದುವೆಯ ದಿನ ಅಮ್ಮ ನೀತಾ ಅಂಬಾನಿ ಧರಿಸಿದ್ದ ಸೀರೆಯನ್ನು ಧಾರೆಯ ವೇಳೆ ಧರಿಸುವ ಮೂಲಕ ಇಶಾ ಅಂಬಾನಿ 35 ವರ್ಷದ ಹಿಂದಿನ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದಾರೆ.

ದೇಶದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗಳು ಇಶಾ ಅಂಬಾನಿ ಮುಂಬೈನ ತಮ್ಮ ಅಂಟಿಲಿಯಾ ಬಂಗಲೆಯಲ್ಲಿ ಆನಂದ್​ ಪಿರಮಾಳ್​ ಜೊತೆಗೆ ಸಪ್ತಪದಿ ತುಳಿದಿದ್ದಾರೆ.

ಮೂರ್ನಾಲ್ಕು ದಿನಗಳಿಂದ ಮದುವೆಯ ನಾನಾ ಕಾರ್ಯಕ್ರಮಗಳು ನಡೆದಿದ್ದು, ಬಾಲಿವುಡ್ ತಾರೆಯರು, ವಿವಿಧ ದೇಶದ ಉದ್ಯಮಿಗಳು, ಸೆಲೆಬ್ರಿಟಿಗಳು, ರಾಜಕಾರಣಿಗಳು ಪಾಲ್ಗೊಂಡಿದ್ದರು. ಮದುವೆಗೂ ಮುನ್ನಾ ದಿನ ನಡೆದ ಸಂಗೀತ್​ ಕಾರ್ಯಕ್ರಮದಲ್ಲಿ ಬಾಲಿವುಡ್​ ತಾರೆಯರೊಂದಿಗೆ ಅಂಬಾನಿ ಕುಟುಂಬ ಡ್ಯಾನ್ಸ್​ ಮಾಡಿ ಸಂಭ್ರಮಿಸಿತ್ತು.

ಅಂದಹಾಗೆ, ಚಿನ್ನದ ಬಣ್ಣದ ಲೆಹೆಂಗಾ ಧರಿಸಿದ್ದ ಇಶಾ ಅಂಬಾನಿ ಜೊತೆಗೆ ಅದೇ ಬಣ್ಣದ ಶೇರ್ವಾನಿ ಧರಿಸಿದ್ದ ಆನಂದ್​ ಪಿರಮಾಳ್​ ಜೋಡಿ ಎಲ್ಲರ ಕಣ್ಣು ಕುಕ್ಕುವಂತಿತ್ತು. ಮದುವೆಗೆ ಖರ್ಚು ಮಾಡಿರುವ ಹಣ, ಅದರ ಅಲಂಕಾರ, ಊಟ-ತಿಂಡಿ, ಔತಣ, ಗಣ್ಯರ ಆಗಮನ ಹೀಗೆ ನಾನಾ ಕಾರಣಗಳಿಂದ ಅಂಬಾನಿ ಕುಟುಂಬದ ಈ ಮದುವೆ ಸುದ್ದಿ ಮಾಡಿತ್ತು.

ಮದುವೆಯ ವೇಳೆ ಇಶಾ ಅಂಬಾನಿ ಧರಿಸಿದ್ದ ಲೆಹೆಂಗಾ ಎಲ್ಲರ ಗಮನ ಸೆಳೆದಿತ್ತು. ತನ್ನ ಮದುವೆಯ ದಿನ ಅಮ್ಮ ನೀತಾ ಅಂಬಾನಿ ಧರಿಸಿದ್ದ ಸೀರೆಯನ್ನು ಧರಿಸುವ ಮೂಲಕ 35 ವರ್ಷದ ಹಿಂದಿನ ಸೀರೆಯನ್ನು ತನ್ನ ಮದುವೆಯಲ್ಲಿ ಬಳಸಿ ಅಮ್ಮನಿಗೆ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದಾರೆ.

ಉತ್ತರ ಭಾರತದ ಮದುವೆಗಳಲ್ಲಿ ಲೆಹೆಂಗಾದ ಜೊತೆಗೆ ಹೆಗಲ ಮೇಲೆ ದುಪಟ್ಟಾ ರೀತಿಯ ಬಟ್ಟೆಯನ್ನು ಹಾಕಿಕೊಳ್ಳಲಾಗುತ್ತದೆ. ಮದುವೆಯ ದಿನ ಇಶಾ ಧರಿಸಿರುವ ಆ ವಸ್ತ್ರ ತನ್ನ ತಾಯಿ ನೀತಾ ಅಂಬಾನಿ 35 ವರ್ಷಗಳ ಹಿಂದೆ ತನ್ನ ಮದುವೆಯಲ್ಲಿ ಧರಿಸಿದ್ದ ವಸ್ತ್ರವಾಗಿದೆ. ಚಿನ್ನದ ಬಣ್ಣದ ಲೆಹೆಂಗಾಕ್ಕೆ ಅಮ್ಮನ ಕೆಂಪು ಬಣ್ಣದ ವಸ್ತ್ರವನ್ನು ಧರಿಸುವ ಮೂಲಕ ಇಶಾ ತನ್ನ ಲುಕ್​ ಅನ್ನು ಇಮ್ಮಡಿಗೊಳಿಸಿದ್ದಾರೆ.

ಇಶಾ ಅಂಬಾನಿ ಧರಿಸಿರುವ 16 ನೆರಿಗೆಗಳಿರುವ ಗಾಗ್ರಾ (ಲೆಹೆಂಗಾ)ವನ್ನು ಹ್ಯಾಂಡ್​ ಎಂಬ್ರಾಯಿಡರಿ ಮೂಲಕ ಡಿಸೈನ್​ ಮಾಡಲಾಗಿದೆ. ಮೊಘಲ್​ ಜಾಲಿಸ್​ನಿಂದ ಎಂಬ್ರಾಯಿಡರಿ ಮಾಡಲಾಗಿದ್ದು, ಜರ್ದೋಸಿ, ವಾರ್ಲಿ, ಮುಖೈಶ್ ಮತ್ತು ನಕ್ಷಿ ಕುಸುರಿಯನ್ನೂ ಮಾಡಲಾಗಿದೆ. ಆ ಡಿಸೈನ್​ಗಳಿಗೆ ಹರಳುಗಳನ್ನು ಕೂರಿಸಲಾಗಿದೆ. ಲೆಹೆಂಗಾದ ತುದಿಯಲ್ಲಿ ಕೆಂಪು ಬಣ್ಣದ ಬಾರ್ಡರ್​ ಇರಿಸಲಾಗಿದೆ. ಆ ಬಾರ್ಡರ್​ಗೆ ಹೊಂದುವಂತೆ ಅಮ್ಮನ ಕೆಂಪು ಸೀರೆಯನ್ನು ಹೆಗಲ ಮೇಲೆ ಇಶಾ ಧರಿಸಿದ್ದಾರೆ.

Comments are closed.