ಅಂತರಾಷ್ಟ್ರೀಯ

ಚೀನ ಸಾಲ ತೀರಿಸಲು ಪಾಕ್‌ ಐಎಂಎಫ್ ಸಾಲ: ಅಮೆರಿಕ ವಿರೋಧ

Pinterest LinkedIn Tumblr


ವಾಷಿಂಗ್ಟನ್‌ : ದೀವಾಳಿ ಅಂಚಿಗೆ ತಲುಪಿರುವ ಪಾಕಿಸ್ಥಾನ, ಐಎಂಎಫ್ ನಿಂದ ಆರ್ಥಿಕ ಪುನಶ್ಚೇತನಕ್ಕಾಗಿ ಪಡೆದುಕೊಳ್ಳುವ ಸಾಲವನ್ನು ಎಷ್ಟು ಮಾತ್ರಕ್ಕೂ ಚೀನದ ಸಾಲ ತೀರಿಸಲು ಬಳಸದಂತೆ ನೋಡಿಕೊಳ್ಳುವ ಸಕಲ ಪ್ರಯತ್ನವನ್ನು ಅಮೆರಿಕ ಮಾಡುತ್ತಿದೆ ಎಂದು ಟ್ರಂಪ್‌ ಆಡಳಿತೆಯ ಹಿರಿಯ ಅಧಿಕಾರಿಯೋರ್ವರು ಸಂಸದರಿಗೆ ಹೇಳಿದ್ದಾರೆ.

ದೇಶವನ್ನು ನಡೆಸಲು ಕೈಯಲ್ಲಿ ಚಿಕ್ಕಾಸು ಕೂಡ ಇಲ್ಲದ ಪಾಕಿಸ್ಥಾನ ಐಎಂಎಫ್ ನಿಂದ 8 ಶತಕೋಟಿ ಡಾಲರ್‌ ಸಾಲವನ್ನು ಕೇಳಿದೆ. ಈ ಮೊತ್ತವನ್ನು ತಾನು ಆಮದು-ರಫ್ತು ಪಾವತಿ ಬಿಕ್ಕಟ್ಟನ್ನು ನಿವಾರಿಸಲು ಬಳಸುವುದು ಅಗತ್ಯವೆಂದು ಅದು ಹೇಳಿದೆ.

ಹಾಗಿದ್ದರೂ ಐಎಂಎಫ್ ನಿಂದ ಈ ಸಾಲ ಪಡೆಯುವ ಈಚಿನ ಸಭೆಯಲ್ಲಿ ಯಾವುದೇ ನಿರ್ಧಾರವಾಗದೆ ಸಾಲ ಪ್ರಸ್ತಾವ ಹಾಗೆಯೇ ಬಾಕಿ ಉಳಿದಿದೆ.

ಚೀನದಿಂದ ಪಡೆದಿರುವ ಬೃಹತ್‌ ಗಾತ್ರದ ಸಾಲವೇ ಪಾಕಿಸ್ಥಾನಕ್ಕೆ ಗುರುತರ ಆರ್ಥಿಕ ಸವಾಲಿಗೆ ಕಾರಣವೆಂದು ಅಮೆರಿಕ ತಿಳಿದಿದೆ.

Comments are closed.