ಮುಂಬೈ

ಯುವತಿಯ ಖಿನ್ನತೆ ಗುಣಪಡಿಸುವುದಾಗಿ ಹೇಳಿ 53 ಸಾವಿರ ವಂಚನೆ: ಮನೋವೈದ್ಯನ ಬಂಧನ

Pinterest LinkedIn Tumblr


ಮುಂಬಯಿ: ಖಿನ್ನತೆಯಿಂದ ಬಳಲುತ್ತಿದ್ದ ಯುವತಿಯೋರ್ವಳನ್ನು ಗುಣಪಡಿಸುವುದಾಗಿ ನಂಬಿಸಿ, 53 ಸಾವಿರ ರೂ. ವಂಚನೆ ಮಾಡಿದ ವೈದ್ಯನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸದಿಲ್ಲಿ ಮೂಲದ ಸುಮಂತ್‌ಕಾಂತ್‌ ಕೌಲ್‌(55) ಬಂಧಿತ ಆರೋಪಿ. ಮಾಧ್ಯಮ ಸಂಸ್ಥೆಯೊಂದರ ಉಪಾಧ್ಯಕ್ಷರ ಪುತ್ರಿ, 19 ವರ್ಷದ ಯುವತಿಯ ಖಿನ್ನತೆಯ ಸಮಸ್ಯೆಯನ್ನು ಪರಿಹರಿಸುವುದಾಗಿ ನಂಬಿಸಿದ್ದ. ಯುವತಿಗೆ ಖಿನ್ನತೆ ಸಮಸ್ಯೆ ವಾಸಿಯಾಗದ ಹಿನ್ನೆಲೆಯಲ್ಲಿ ದೂರು ನೀಡಲಾಗಿತ್ತು. ಸುಮಂತ್‌ಕಾಂತ್‌ ವಿರುದ್ಧ ಇಂತಹುದೇ ಇನ್ನೆರಡು ಪ್ರತ್ಯೇಕ ದೂರುಗಳು ಬಂದಿದ್ದು, ಈ ಸಂಬಂಧ ಪೊಲೀಸರು ತಮ್ಮ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

ದಿಲ್ಲಿ ಹಾಗೂ ಮುಂಬಯಿನಲ್ಲಿ ಕೌಲ್‌ ಅವರು ಸಂಸ್ಥೆಗಳನ್ನು ನಡೆಸುತ್ತಿದ್ದು, ತಮ್ಮ ಹತ್ತಿರ ಸಮಸ್ಯೆ ಎಂದು ಬರುವವರನ್ನು ಹಿಪ್ನೋಟೈಸ್‌ ಮಾಡುತ್ತಿದ್ದರು. ವಿವಿಧ ರೀತಿಯ ಭಾಷಣಗಳ ಮೂಲಕ ರೋಗಿಗಳನ್ನು ತಾವು ಹೇಳುವಂತೆ ಕೇಳಿಸುತ್ತಿದ್ದರು. ಖಿನ್ನತೆಯಿಂದ ಬಳಲುತ್ತಿದ್ದ ತನ್ನ ಪುತ್ರಿಯ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಕೌಲ್‌ ಪದೇ ಪದೇ ಹಣ ಕೇಳುತ್ತಿದ್ದ.

ಆರಂಭದಲ್ಲಿ 5,900 ರೂ. ಪಾವತಿ ಮಾಡಲಾಗಿತ್ತು. ಸೆಷನ್‌ಗಳ ಲೆಕ್ಕದಲ್ಲಿ ಹಣ ಪಾವತಿ ಮಾಡಬೇಕಿತ್ತು. ಹೀಗೆ ಪ್ರತಿ ಬಾರಿಯೂ ವಿವಿಧ ಕಾರಣ ಹೇಳಿ, 10, 20 ಸಾವಿರ ರೂಗಳನ್ನು ಪಡೆಯಲಾಗುತ್ತಿತ್ತು. ಆದರೆ ನನ್ನ ಪುತ್ರಿಯ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ ಎಂದು ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿದರು.

Comments are closed.