ಮುಂಬೈ

2015ರಿಂದ ಜೈಲಿನಲ್ಲಿ ಕೈದಿಯಾಗಿರುವ ಪೀಟರ್‌, ಇಂದ್ರಾಣಿ ಖುದ್ದು ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿ ವಿಚ್ಛೇದನಕ್ಕೆ ಅರ್ಜಿ

Pinterest LinkedIn Tumblr


ಮುಂಬಯಿ: ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿಗಳಾಗಿ ಬೈಕುಲಾ ಮಹಿಳಾ ಕಾರಾಗೃಹದಲ್ಲಿರುವ ಇಂದ್ರಾಣಿ ಮತ್ತು ಆರ್ಥೂರ್‌ ರೋಡ್‌ ಜೈಲಿನಲ್ಲಿರುವ ಪೀಟರ್‌ ಪೊಲೀಸ್‌ ಭದ್ರತೆಯಲ್ಲಿ ಬಾಂದ್ರಾದ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿ ವಿಚ್ಛೇದನ ಅರ್ಜಿ ಸಲ್ಲಿಸಿದರು. ಬಳಿಕ ಪೊಲೀಸ್‌ ಭದ್ರತೆಯಲ್ಲಿ ಜೈಲುಗಳಿಗೆ ವಾಪಸಾದರು.

ಇಂದ್ರಾಣಿ ಶ್ವೇತವರ್ಣದ ಸಲ್ವಾರ್‌ ಧರಿಸಿ, ಹಣೆಗೆ ಕೆಂಪು ಬಿಂದಿ ಮತ್ತು ಕುಂಕುಮ ಇರಿಸಿಕೊಂಡು ತಲೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಂಡಿದ್ದರು. ಕಪ್ಪು ಬಣ್ಣದ ಟಿ ಶರ್ಟ್‌ ಮತ್ತು ಬೂದು ಬಣ್ಣದ ಪ್ಯಾಂಟ್‌ ಧರಿಸಿದ್ದ ಪೀಟರ್‌ ‘ನಾನಿನ್ನೂ ನೋಡಲು ಫಿಟ್‌ ಆಗಿದ್ದು, ಸುಂದರವಾಗಿದ್ದೇನೆ ಎಂದು ಹೇಳಿಕೊಂಡರು. ತನ್ನ ವಯಸ್ಸನ್ನು ತಪ್ಪಾಗಿ 64 ಎಂದು ಹೇಳಲಾಗುತ್ತಿದ್ದು, ನನ್ನ ಉಳಿದ ಜೀವನ ಇನ್ನು ಆರಂಭಗೊಳ್ಳಲಿದೆ ಎಂದು ಹಾಸ್ಯ ಮಾಡಿಕೊಂಡರು.

ದಂಪತಿ ಜಂಟಿಯಾಗಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದು, ಇಂದ್ರಾಣಿ ಮೊದಲ, ಪೀಟರ್‌ ಎರಡನೇ ಅರ್ಜಿದಾರರು. ಎದಿತ್‌ ಡೆ ಅವರು ಇಂದ್ರಾಣಿ ಮತ್ತು ಸುಶ್ಮಿತಾ ಸೇರಿಗಾರ್‌ ಪೀಟರ್‌ ಅವರ ವಕೀಲರಾಗಿದ್ದು, ಅವರ ಸಲಹೆಯಂತೆ ದಂಪತಿ ಅರ್ಜಿ ಪ್ರಕ್ರಿಯೆ ಪೂರೈಸಿದರು. ಬಳಿಕ ದಂಪತಿ ಪ್ರತ್ಯೇಕವಾಗಿ ಮತ್ತು ಜತೆಯಾಗಿ ಆಪ್ತ ಸಮಾಲೋಚಕರನ್ನು ಭೇಟಿಯಾದರು. ಇಬ್ಬರೂ ಮತ್ತೆ ಜತೆಯಾಗಿ ಜೀವನ ಮಾಡುವ ಇಚ್ಛೆ ಇದೆಯೇ ಎಂದು ಪ್ರಶ್ನಿಸಿದರು.

ಕೋರ್ಟ್‌ ಈ ಅರ್ಜಿಯ ವಿಚಾರಣೆಯನ್ನು ಮಾರ್ಚ್‌ 25ಕ್ಕೆ ನಿಗದಿಗೊಳಿಸಿದೆ. 2002ರಲ್ಲಿ ಪೀಟರ್‌ ಮತ್ತು ಇಂದ್ರಾಣಿ ಮದುವೆಯಾಗಿದ್ದರು. ಇಂದ್ರಾಣಿ ಏಪ್ರಿಲ್‌ನಲ್ಲಿ ವಿಚ್ಛೇದನ ಕೋರಿ ನೋಟಿಸ್‌ ನೀಡಿದ್ದರು, ನಮ್ಮದು ಜೋಡಿಸಲಾಗದಷ್ಟು ಮುರಿದು ಹೋದ ಸಂಬಂಧ ಎಂದು ಹೇಳಿದ್ದರು.

ನನ್ನ ವೃತ್ತಿ ಜಿವನದಲ್ಲಿ ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ದಂಪತಿ ವಿಚ್ಛೇದನ ಕೋರಿ ಸಲ್ಲಿಸಿದ ಮೊದಲ ಅರ್ಜಿ ಇದು ಎಂದು ಇಂದ್ರಾಣಿ ಅವರ ವಕೀಲ ಎದಿತ್‌ ಡೆ ಹೇಳಿದ್ದಾರೆ.

ಪೀಟರ್‌ಗೆ 62 ವರ್ಷ, ಇಂದ್ರಾಣಿಗೆ 46 ವರ್ಷವಾಗಿದ್ದು ಅವರಿಬ್ಬರಿಗೆ 16 ವರ್ಷಗಳ ಅಂತರವಿದೆ. 2015 ರಿಂದ ಇಬ್ಬರೂ ಜೈಲಿನಲ್ಲಿ ಕೈದಿಗಳಾಗಿದ್ದಾರೆ. ಇಂದ್ರಾಣಿ ಶ್ವೇತವರ್ಣದ ಸಲ್ವಾರ್‌ ಧರಿಸಿ, ಹಣೆಗೆ ಕೆಂಪು ಬಿಂದಿ ಮತ್ತು ಕುಂಕುಮ ಇರಿಸಿಕೊಂಡು ತಲೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಂಡಿದ್ದರು. ಕಪ್ಪು ಬಣ್ಣದ ಟಿ ಶರ್ಟ್‌ ಮತ್ತು ಬೂದು ಬಣ್ಣದ ಪ್ಯಾಂಟ್‌ ಧರಿಸಿದ್ದ ಪೀಟರ್‌ ‘ನಾನಿನ್ನೂ ನೋಡಲು ಫಿಟ್‌ ಆಗಿದ್ದು, ಸುಂದರವಾಗಿದ್ದೇನೆ ಎಂದು ಹೇಳಿಕೊಂಡರು. ತನ್ನ ವಯಸ್ಸನ್ನು ತಪ್ಪಾಗಿ 64 ಎಂದು ಹೇಳಲಾಗುತ್ತಿದ್ದು, ನನ್ನ ಉಳಿದ ಜೀವನ ಇನ್ನು ಆರಂಭಗೊಳ್ಳಲಿದೆ ಎಂದು ಹಾಸ್ಯ ಮಾಡಿಕೊಂಡರು.

Comments are closed.