ಮುಂಬೈ

ಕಳೆದುಹೋದ ಮೊಬೈಲ್’ನ್ನು ಪತ್ತೆ ಹಚ್ಚಿ ಸ್ಮಾರ್ಟ್ ಆದ ವಿದ್ಯಾರ್ಥಿನಿ ! ಪತ್ತೆ ಹಚ್ಚಿದ ರೀತಿಗೆ ಭೇಷ್ ಅನ್ನಲೇಬೇಕು…

Pinterest LinkedIn Tumblr

ಮುಂಬೈ: ಕಳೆದುಕೊಂಡ ಸ್ಮಾರ್ಟ್​ಫೋನನ್ನು ಸ್ನೇಹಿತರ ಮೊಬೈಲ್ ಸಹಾಯದಿಂದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪತ್ತೆ ಮಾಡಿದ್ದಾಳೆ.

19 ವರ್ಷದ ಜೀನತ್ ಬಾನು ಹಕ್ ಎಂಬಾಕೆ ಪ್ರವಾಸ ಮುಗಿಸಿ ಮನೆಗೆ ವಾಪಸಾದಾಗ ಮೊಬೈಲ್ ನಾಪತ್ತೆಯಾಗಿರುವುದು ಗಮನಕ್ಕೆ ಬಂತು. ಬಳಿಕ ‘ಸ್ಮಾರ್ಟ್’ ಆಗಿ ಫೋನ್ ಹುಡುಕುವ ಯತ್ನಕ್ಕೆ ಜೀನತ್ ಮುಂದಾದಳು. ಪೊಲೀಸ್ ಠಾಣೆಗೆ ದೂರು ನೀಡಿ, ಸಿಮ್ ಬ್ಲಾಕ್ ಮಾಡಿಸಿದಳು.

ಸ್ನೇಹಿತರ ಮೊಬೈಲ್ ಮೂಲಕ ಗೂಗಲ್ ಖಾತೆಗೆ ಸೈನ್-ಇನ್ ಆಗಿ ‘ಅಕೌಂಟ್’ ವಿಭಾಗಕ್ಕೆ ಹೋಗಿ ‘ಟ್ರೇಸ್ ಮೈ ಮೊಬೈಲ್’ ಆಯ್ಕೆ ಬಳಸಿ ಮೊಬೈಲ್ ಎಲ್ಲಿದೆ ಎಂದು ಹುಡುಕಿದಳು. ಬಳಿಕ ‘ಮೈ ಆಕ್ಟಿವಿಟಿ’ ಅವಕಾಶ ಬಳಸಿ ತನ್ನ ಮೊಬೈಲ್​ನಲ್ಲಿ ಯಾವ ಆಪ್ ಬಳಕೆಯಾಗುತ್ತಿದೆ? ಯಾವ್ಯಾವ ಚಟುವಟಿಕೆ ನಡೆದಿದೆ? ಎನ್ನುವುದನ್ನು ಹುಡುಕಿದಳು.

ವ್ಯಕ್ತಿಯೊಬ್ಬ ಈ ಮೊಬೈಲ್ ಬಳಸಿ ದಾದರ್-ತಿರುವಣ್ಣಮಲೈಗೆ ರೇಲ್ವೆ ಟಿಕೆಟ್ ಬುಕ್ ಮಾಡಿರುವುದು ಕಂಡುಬಂತು. ಗೂಗಲ್ ಫೋಟೋಸ್ ಮೂಲಕ ಟಿಕೆಟ್, ರೇಲ್ವೆ ವಿವರವನ್ನೂ ಪಡೆದಳು. ರೇಲ್ವೆ ನಿಲ್ದಾಣದಿಂದ ಸಂಜೆ 9.30ಕ್ಕೆ ರೈಲು ನಿರ್ಗಮಿಸುವುದು ಖಾತ್ರಿಯಾಯಿತು. ಆಕೆಯ ಮೊಬೈಲ್ ಬಳಸುತ್ತಿದ್ದ ಸೆಲ್ವರಾಜ್ ಶೆಟ್ಟಿಯನ್ನು ರೇಲ್ವೆ ಪೊಲೀಸರು ಬಂಧಿಸಿದ್ದಾರೆ.

ಮೊಬೈಲ್ ಕಳುವಾದಾಗ ಏನು ಮಾಡಬೇಕು?

# ಸ್ಮಾರ್ಟ್​ಫೋನಲ್ಲಿ ಲಾಗ್​ಇನ್ ಆಗಿರುವ ಗೂಗಲ್ ಖಾತೆಗೆ ಲಾಗ್ ಇನ್ ಆಗಿ.

8 ಅಕೌಂಟ್ ಕ್ಲಿಕ್ ಮಾಡಿ, ಟ್ರೇಸ್ ಮೈ ಮೊಬೈಲ್ ಹಾಗೂ ಮೈ ಆಕ್ಟಿವಿಟಿ ಆಯ್ಕೆ ಮೂಲಕ ಕಳುವಾದ ಮೊಬೈಲ್​ನಲ್ಲಿ ಏನೇನು ಮಾಡಲಾಗುತ್ತಿದೆ ಎನ್ನುವ ಮಾಹಿತಿ ಪಡೆಯಬಹುದು.

# ಟ್ರೇಸ್ ಮೈ ಮೊಬೈಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಲಾಕ್ ಯುವರ್ ಫೋನ್ ಅವಕಾಶದ ಮೂಲಕ 4 ಅಂಕೆಯ ಪಾಸ್​ವರ್ಡ್ ಹಾಗೂ ಪರಿಚಿತರ ದೂರವಾಣಿ ಸಂಖ್ಯೆ ಹಾಕಿ ಮೊಬೈಲ್ ಲಾಕ್ ಮಾಡಬಹುದು. ಕಾಣೆಯಾದ ಮೊಬೈಲ್ ಸ್ಕ್ರೀನ್ ಮೇಲೆ ಕಾಲ್ ಓನರ್ ಎಂಬ ಸಂದೇಶ ತೋರಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿದರೆ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಕರೆ ಹೋಗುತ್ತದೆ.

# ಟ್ರೖೆ ಕಾಲಿಂಗ್ ಯುವರ್ ಫೋನ್ ಅವಕಾಶದ ಮೂಲಕ ಸೈಲೆಂಟ್ ಮೋಡ್​ನಲ್ಲಿದ್ದರೂ ನಿಮ್ಮ ಮೊಬೈಲ್ ರಿಂಗ್ ಮಾಡಬಹುದು.

# ಸೈನ್ ಔಟ್ ಆನ್ ಯುವರ್ ಫೋನ್ ಮೂಲಕ ಮೊಬೈಲ್​ನಲ್ಲಿನ ಎಲ್ಲ ಖಾತೆಗಳನ್ನು ಸೈನ್ ಔಟ್ ಮಾಡಬಹುದಾಗಿದೆ.

# ರೀಚ್ ಔಟ್ ಯುವರ್ ಕ್ಯಾರಿಯರ್ ಮೂಲಕ ಸಿಮ್ ಬ್ಲಾಕ್ ಮಾಡಬಹುದು.

# ಕನ್ಸಿಡರ್ ಎರೇಸಿಂಗ್ ಯುವರ್ ಡಿವೈಸ್ ಮೂಲಕ ಮೊಬೈಲ್​ನಲ್ಲಿನ ಎಲ್ಲ ಫೈಲ್​ಗಳನ್ನು ಡಿಲೀಟ್ ಮಾಡಬಹುದು.

# ಮೊಬೈಲ್ ಲೊಕೇಷನ್ ಆನ್ ಇದ್ದರೆ ಮೊಬೈಲ್​ನ್ನು ಸುಲಭವಾಗಿ ಪತ್ತೆ ಮಾಡಬಹುದು.

Comments are closed.