ಮುಂಬೈ

ಮರಾಠ ಮೀಸಲು ಹೋರಾಟಕ್ಕೆ ಬೆಂಬಲಿಸಿ ಆತ್ಮಹತ್ಯೆಗೈದವರ ಸಂಖ್ಯೆ 5ಕ್ಕೆ ಏರಿಕೆ!

Pinterest LinkedIn Tumblr


ಮುಂಬೈ: ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ಉಗ್ರರೂಪಕ್ಕೆ ತಿರುಗಿದ್ದು, 35 ವರ್ಷದ ವ್ಯಕ್ತಿಯೊಬ್ಬ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಮೀಸಲಾತಿಗಾಗಿ ಒತ್ತಾಯಿಸಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 5ಕ್ಕೇರಿದೆ.

ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ವೀದಾ ಗ್ರಾಮದ ನಿವಾಸಿ ಅಭಿಜೀತ್‌ ದೇಶ್‌ಮುಖ್‌ ಎಂಬಾತ ತನ್ನ ಮನೆಯ ಸಮೀಪವೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್‌ನೋಟ್‌ನಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿಗಾಗಿ ಒತ್ತಾಯಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಈ ಕಠಿಣ ತೀರ್ಮಾನ ತೆಗೆದುಕೊಳ್ಳುತ್ತಿದ್ದೇನೆ. ಅಲ್ಲದೆ, ನಿರುದ್ಯೋಗ ಮತ್ತು ಬ್ಯಾಂಕ್ ಸಾಲದ ಸಮಸ್ಯೆಗಳನ್ನು ಸಹ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೀಡ್ ಸಬ್‌ಇನ್ಸ್‌ಪೆಕ್ಟರ್ ಜಿ. ಶ್ರೀಧರ್ ತಿಳಿಸಿದ್ದಾರೆ.

ಮರಾಠ ಮೀಸಲಾತಿಗಾಗಿ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದರಲ್ಲಿ ಇದು ಐದನೇ ಆತ್ಮಹತ್ಯೆ ಪ್ರಕರಣವೆಂದು ಮತ್ತೋರ್ವ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ

Comments are closed.