ಮುಂಬೈ

ಮಹಿಳೆಯರನ್ನು ಕಾಡುವ ಮೆಸೇಜಿಂಗ್ ಮಜ್ನುಗಳ ಬಗ್ಗೆ ಮುಂಬೈ ಪೊಲೀಸರು ಟ್ವೀಟ್ ವೈರಲ್

Pinterest LinkedIn Tumblr

ಮುಂಬೈ: ಮಹಿಳೆಯರನ್ನು ಕಾಡುವ ಮೆಸೇಜಿಂಗ್ ಮಜ್ನುಗಳ ಬಗ್ಗೆ ಮುಂಬೈ ಪೊಲೀಸರು ಮಾಡಿರುವ ಟ್ವೀಟ್ ಈಗ ವೈರಲ್ ಆಗತೊಡಗಿದೆ.

ಮಹಿಳೆಯರಿಗೆ ಇಂಟರ್ ನೆಟ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಕಾಡುವ ಮಜ್ನುಗಳೊಂದಿಗೆ ಈಗ ಮುಂಬೈ ಪೊಲೀಸರು ಫ್ರೆಂಡ್ ಶಿಪ್ ಬಯಸುತ್ತಿದು, ಬೆಂಡೆತ್ತಲು ತಯಾರಾಗಿದ್ದಾರೆ. ಗೊತ್ತೇ ಇಲ್ಲದ ವ್ಯಕ್ತಿಗಳು ಮೆಸೇಜ್ ಮಾಡಿ ಕಾಟ ನೀಡುತ್ತಿರುವ ಪ್ರಕರಣಗಳಿಂದ ಮಹಿಳೆಯರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಮಹಿಳೆಯರಿಗೆ ಈ ಕಿರಿಕಿರಿಯಿಂದ ಮುಕ್ತಿಕೊಡಿಸಲು ಮುಂಬೈ ಪೊಲೀಸರು ಸಜ್ಜಾಗಿದ್ದಾರೆ.

ಈ ಬಗ್ಗೆ ಮುಂಬೈ ಪೊಲೀಸರು ಮಾಡಿರುವ ಟ್ವೀಟ್ ನಲ್ಲಿರುವ ಮೀಮ್ ಎಲ್ಲರ ಗಮನ ಸೆಳೆಯುತ್ತಿದೆ. ನಿಮಗೆ ಮೆಸೇಜ್ ಕಳಿಸುವ ಪರಿಚಯವಿಲ್ಲದ ವ್ಯಕ್ತಿಗಳ ನಂಬರ್ ನ್ನು ಬ್ಲಾಕ್ ಮಾಡಿ, ನಾವು ಅವರ ಭಾವನೆ ಮತ್ತು ಉದ್ದೇಶಗಳನ್ನು ವಿಚಾರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Comments are closed.