ಕರಾವಳಿ

ಕುಂದಾಪುರದಲ್ಲಿ ಮಳೆ ಆರ್ಭಟ : ಕಮಲಶಿಲೆ ದೇವಸ್ಥಾನ ಪ್ರವೇಶಿಸಿದ ಕುಬ್ಜಾ

Pinterest LinkedIn Tumblr

ಕುಂದಾಪುರ: ಕಳೆದ ಎರಡು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಂದಾಪುರ ತಾಲೂಕಿನ ಪಂಚನದಿಗಳು ತುಂಬಿ ಹರಿಯುತ್ತಿದ್ದು, ತಗ್ಗುಪ್ರದೇಶ ಜಲಾವೃತಗೊಂಡಿದೆ.

ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದ್ದರಿಂದ ಆಲೂರು ಹುಂತಗೋಳಿ ದೇವಸ್ಥಾನ ಜಲಾವೃತ ಗೊಂಡಿದ್ದು, ಕುಬ್ಜಾ ನದಿ ತುಂಬಿ ಹರಿಯುತ್ತಿದ್ದು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಒಳಗೂ ನೀರು ಪ್ರವೇಶ ಮಾಡಿದೆ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಳಿಯೂ ಹೊಳೆ ತುಂಬಿ ಹರಿಯುತ್ತಿದ್ದು, ಮಳೆ ಹೀಗೆ ಮುಂದುವರಿರೆ ದೇವಸ್ಥಾನ ಓಳಗೂ ನೀರು ನುಗ್ಗಲಿದೆ.

ನೂಜಾಡಿ ಬಳಿ ಬುಧವಾರ ರಾತ್ರಿ ಸಿಡಿಲು ಬಡಿದ ಕರು ಮೃತಪಟ್ಟಿದ್ದು, ಗೋಪಾಡಿ ಪರಿಸರದಲ್ಲಿ ಕಡಲು ಕೊರೆತ ಭೀತಿ ತಲೆ ದೋರದೆ. ಹಡವು, ಪಡುಕೋಣೆ, ಬಡಾಕೆರೆ, ಕುರಿ, ಸಾಲ್ಬುಡ ಸಂಪೂರ್ಣ ಜಲವೃತ್ತಗೊಂಡಿದ್ದು, ದೋಣಿ ಮೂಲಕ ಸಂಚಾರ ಮಾಡುವ ಸ್ಥಿಯಿದ್ದು, ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಬೈಂದೂರು ಶಾಸಕ ಬಿ‌ಎಂಸುಕುಮಾರ ಶೆಟ್ಟಿ ನಾಡಾ, ಚಿಕ್ಕಳ್ಳಿ, ಬಡಾಕೆರೆ ಭೇಟಿ ನೀಡಿ ತುರ್ತು ಕ್ರಮದ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದು, ಅಗತ್ಯಬಿದ್ದರೆ ಗಂಜಿ ಕೇಂದ್ರ ತೆರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್ ಚಿತ್ರಪಾಡಿ ಗ್ರಾಮದ ಬೈಕುರ ಜೆಸಿಕೆರೆ ಪ್ರದೇಶ ಸಂಪರ್ಕಿಸುವ ಸೇತುವೆ ಕುಸಿದ್ದು, ಸಂಚಾರ ಸಂಕಷ್ಟ ತಂದಿದೆ. ಚಿತ್ರಪಾಡಿ ಬಹುತೇಕ ಪ್ರದೇಶಗಳು ನೀರಿನಿಂದ ಆವೃತವಾಗಿದ್ದು ನೀರಿನ ರಭಸಕ್ಕೆ ಈ ಭಾಗದಿಂದ ಇನ್ನೊಂದು ಭಾಗಕ್ಕೆ ಸಂಪರ್ಕಿಸುವ ಸೇತುವೆಗೆ ಸುತ್ತಮುತ್ತ ಪ್ರದೇಶ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದ್ದು ಸನಿಹದಲ್ಲಿ ಹಾದು ಹೋಗಿರು ವಿದ್ಯುತ್ ಕಂಬಗಳು ಬೀಳುವ ಸ್ಥಿತಿಯಲ್ಲಿದೆ. ಕೃಷಿ ಭೂಮಿ ಕೂಡಾ ನೀರಿನಿಂದ ಆವರಿಸಿ ಕೊಂಡಿದೆ. ಪಟ್ಟಣ ಪಂಚಾಯತ್ ಜನಪ್ರತಿನಿಧಿಗಳು ಅಧಿಕಾರಿಗಳಿಂದ ವಿಕ್ಷಣೆ ಕೂಡ ನೆಡೆದಿದೆ.

ಇನ್ನೆಲ್ಲೆಲ್ಲಿ ಸಮಸ್ಯೆ…?
ಕೆದೂರು, ಕೋಟ ಗ್ರಾಮ ಪಂಚಾಯಿತಿ ಕೊಯ್ಕೂರು, ಗಿಳಿಯಾರು, ಸಾಲಿಗ್ರಾಮ ಪ.ಪಂ. ಬೆಟ್ಲಕ್ಕಿ, ಚಿತ್ರಪಾಡಿ, ಕಾರ್ತಟ್ಟು, ಬನ್ನಾಡಿ ಕೆಲವು ಭಾಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಬೆಟ್ಲಕ್ಕಿ ಕೃಷಿ ಭೂಮಿ ಜಲಾವೃತವಾಗಿದೆ. ನಾಡಾ, ಚಿಕ್ಕಳ್ಳಿ, ಅರಾಟೆ, ಮುವತ್ತುಮುಡಿ, ಹಡವು, ಸಾಲ್ಬುಡ, ಕುರು, ಕನ್ನಡಕುದ್ರು, ಪಡುಕುದ್ರು, ಉಪ್ಪಿನಕುದ್ರು, ಜಾಡಿ, ಹರೆಗೋಡು, ಬಟ್ಟೆಕುದ್ರು, ಯಳೂರು, ತೊಪ್ಲು, ಗೋಪಾಡಿ, ಬೀಜಾಡಿ ಮುಂತಾದ ತಗ್ಗು ಪ್ರದೇಶ, ಬಯಲು ಗದೆ ಜಲಾವೃತ ಗೊಂಡಿದೆ. ಗೋಪಾಡಿಯಲ್ಲಿ ಮನೆಗೂ ನೀರು ನುಗ್ಗಿದ್ದು, ಕೃಷಿ ಭೈಮಿಗೆ ಉಪ್ಪು ನೀರು ಕೂಡಾ ನುಗ್ಗದೆ. ಕಡಲು ಕೊರತದ ಭೀತಿಯಿದೆ.

Comments are closed.