ಮುಂಬೈ

ಉತ್ತರ ಪ್ರದೇಶದಲ್ಲಿ ’ಕೊಲೆ’ಯಾಗಿದ್ದವ ಭಿವಾನಿಯಲ್ಲಿ ಜೀವಂತ ಪತ್ತೆ

Pinterest LinkedIn Tumblr


ಮುಂಬಯಿ: ದಾಖಲೆಗಳ ಪ್ರಕಾರ ಕೊಲೆಯಾಗಿದ್ದ ವ್ಯಕ್ತಿ ಬದುಕಿ ಬರುವ ಘಟನೆಗಳು ಹೊಸತೇನಲ್ಲ. ವ್ಯಕ್ತಿಯೋರ್ವ ತನ್ನನ್ನು ಕೊಲೆ ಮಾಡಿರುವುದಾಗಿ ನಂಬಿಸಲು ಎಲ್ಲ ರೀತಿಯ ಸಂಚು ರೂಪಿಸಿ, ಅತ್ತೆಯನ್ನು ಜೈಲಿಗಟ್ಟಲು ಪ್ರಯತ್ನಿಸಿದ 35 ವರ್ಷದ ವ್ಯಕ್ತಿಯೋರ್ವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಉತ್ತರ ಪ್ರದೇಶದ ಪನ್ನೆಲಾಲ್‌ ಯಾದವ್‌ (35) 2016ರಲ್ಲಿ ಕೊಲೆಯಾಗಿರುವುದಾಗಿ ಪೊಲೀಸ್‌ ದಾಖಲೆಗಳಲ್ಲಿದೆ. ಆದರೆ ಕೊಲೆಗಡುಕರ ಶೋಧ ಕಾರ್ಯದ ವೇಳೆ, ಪನ್ನೆಲಾಲ್‌ ಮುಂಬಯಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪನ್ನೆಲಾಲ್‌ ಕೊಲೆಯಾಗಿರುವ ಬಗ್ಗೆ ಸುಳ್ಳು ಕೇಸು ದಾಖಲಿಸಿ, ಅತ್ತೆಯನ್ನು ಜೈಲಿಗಟ್ಟಲು ಸಂಚು ರೂಪಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಅತ್ತೆ ತನ್ನ ವರದಕ್ಷಿಣೆ ಕಿರುಕಳದ ದೂರು ನೀಡುವುದಾಗಿ ಬೆದರಿಸುತ್ತಿದ್ದಳು. ಅದಕ್ಕಾಗಿ ಪನ್ನೆಲಾಲ್‌ ತನ್ನ ಕೆಲವು ಸಂಬಂಧಿಕರೊಂದಿಗೆ ಸೇರಿ ಕೊಲೆಯ ನಾಟಕ ಆಡಿದ್ದಾನೆ. ಅತ್ತೆ ಮನೆಗೆ ಹೋಗುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದಾನೆ. ಇತ್ತ ಸಂಬಂಧಿಕರು, ಅತ್ತೆಯೇ ಪನ್ನೆಲಾಲ್‌ನನ್ನು ಕೊಲೆ ಮಾಡಿರುವುದಾಗಿ ದೂರು ನೀಡಿ, ಸುಳ್ಳು ಕೇಸು ದಾಖಲಿಸಿದ್ದಾರೆ.

2 ವರ್ಷವಾದರೂ ಪನ್ನೆಲಾಲ್‌ ಶವ ಸಿಕ್ಕದ ಹಿನ್ನೆಲೆಯಲ್ಲಿ, ಅನುಮಾನಗೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ವೇಳೆ ಮುಂಬಯಿ ಪೊಲೀಸರ ಸಹಾಯದೊಂದಿಗೆ ಪನ್ನೆಲಾಲ್‌ ಜೀವಂತವಾಗಿರುವುದು ಗೊತ್ತಾಗಿದೆ. ಮಂಗಳವಾರ ಪನ್ನೆಲಾಲ್‌ನನ್ನು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ ಎಂದು ತಿಳಿದು ಬಂದಿದೆ.

Comments are closed.