ಮುಂಬೈ

ಮುಂಬೈನಲ್ಲಿ ಭಾರಿ ಮಳೆ: ಡ್ರೈನೇಜ್‌ನಲ್ಲಿ ಮುಳುಗಿದ ಮಗು ಸಾವು

Pinterest LinkedIn Tumblr

ಮುಂಬಯಿ: ಮಹಾರಾಷ್ಟ್ರ ರಾಜಧಾನಿ ಸುತ್ತಮುತ್ತ ಭಾರಿ ಮಳೆಯಾಗಿದ್ದು, ನಗರದಲ್ಲಿ ಗುರುವಾರ ಸುರಿದ ಮಳೆಗೆ 2 ವರ್ಷದ ಮಗುವೊಂದು ತೆರೆದ ಚರಂಡಿಯಲ್ಲಿ ಮುಳುಗಿ ಮೃತಪಟ್ಟಿದೆ. ಚೆಂಬೂರಿನ ಮಗುವಿನ ಅಜ್ಜನ ಮನೆ ಬಳಿ ಈ ದುರ್ಘಟನೆ ನಡೆದಿದೆ.

ಮುಂಬೈನ ಎಂ.ಜೆ.ರಸ್ತೆಯ ಚೀತಾ ಕ್ಯಾಂಪ್‌ನಲ್ಲಿ ಡ್ರೈನೇಜ್ ಬಳಿ ಆಟವಾಡುತ್ತಿದ್ದ ಆದಿಹಾನ್ ಪರ್ವೇಜ್ ತಂಬೋಲಿ ಜಾರಿ ಚರಂಡಿಯೊಳಗೆ ಬಿದ್ದಿದ್ದಾನೆ.
ಬಳಿಕ 55 ವರ್ಷದ ಮಗುವಿನ ತಾತ ಆ್ಯಡಮ್ ಅಬ್ಬಾಸ್ ತಂಬೋಲಿ ಡ್ರೈನೇಜ್‌ನಲ್ಲಿ ಇಳಿದು ಮಗುವಿಗಾಗಿ ಹುಟುಕಾಟ ನಡೆಸಿದ್ದಾರೆ. ಮಗು ಮುಳುಗಿದ ಒಂದು ಗಂಟೆ ಬಳಿಕ ಅವನನ್ನು ಹೊರತೆಗೆಯಲಾಯಿತಾದರೂ, ಅಷ್ಟರೊಳಗೆ ಆದಿಹಾನ್ ಮೃತಪಟ್ಟಿದ್ದ ಎಂದು ಮೃತಪಟ್ಟ ಮಗುವಿನ ತಾತ ಆ್ಯಡಮ್ ಹೇಳಿದ್ದಾರೆ.

ಈ ಸಂಬಂಧ ಟ್ರಾಂಬೇ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಸುನೀಲ್ ಗಾವ್ಕರ್ ಆಕಸ್ಮಿಕ ಸಾವು ಎಂದು ವರದಿ ಮಾಡಿದ್ದಾರೆ. ಅಲ್ಲದೆ, ಸಂಪೂರ್ಣ ತನಿಖೆ ಬಳಿಕ ಬಿಎಂಸಿ ಅಥವಾ ಕಂಟ್ರ್ಯಾಕ್ಟರ್ ವಿರುದ್ಧ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಇನ್ನು, ಘಟನೆ ಬಳಿಕ ಎಚ್ಚರಿಸಿದರೂ ಮುಂಬೈನ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿಲ್ಲ. ಜತೆಗೆ, ಚರಂಡಿ ಸ್ವಚ್ಛಗೊಳಿಸಿರಲಿಲ್ಲ ಎಂದು ಮಗುವಿನ ತಾತ ಆ್ಯಡಮ್ ಆರೋಪಿಸಿದ್ದಾರೆ.

Comments are closed.