ಮುಂಬೈ

ಮಹಿಳಾ ಪೊಲೀಸ್‌ ಪೇದೆ ಈಗಿನ್ನು ಪುರುಷ ಪೊಲೀಸ್‌ ಪೇದೆಯಾಗಿ ಕರ್ತವ್ಯಕ್ಕೆ ಸಿದ್ಧ

Pinterest LinkedIn Tumblr


ಮುಂಬಯಿ : ಈಚೆಗೆ ಲಿಂಗ ಪರಿವರ್ತನೆ ಮಾಡಿಕೊಂಡ ಮಹಾರಾಷ್ಟ್ರದ ಮಹಿಳಾ ಪೊಲೀಸ್‌ ಪೇದೆ ಈಗಿನ್ನು ಪುರುಷ ಪೊಲೀಸ್‌ ಪೇದೆಯಾಗಿ ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಾಗುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಈಗ ಪುರುಷನಾಗಿರುವ ಹಿಂದಿನ ಮಹಿಳಾ ಪೊಲೀಸ್‌ ಪೇದೆ ಲಲಿತಾ ಸಾಳ್ವೆ ಅವರು ಸ್ವ ಇಚ್ಛೆಯಿಂದ ಲಿಂಗ ಪರಿವರ್ತನೆ ಮಾಡಿಸಿಕೊಂಡು ಪುರುಷನಾಗಿದ್ದರು.

ಈ ಬಗ್ಗೆ ಹೇಳಿಕೆ ನೀಡಿರುವ ಮಹಾರಾಷ್ಟ್ರ ಪೊಲೀಸ್‌ ಇಲಾಖೆ, ಲಿಂಗ ಪರಿವರ್ತನೆ ಮೂಲಕ ಈಗ ಪುರುಷನಾಗಿರುವ ಲಲಿತ್‌ ಕುಮಾರ್‌ (ಹಿಂದಿನ ಲಲಿತಾ ಸಾಳ್ವೆ) ಅವರಿಗೆ ಪುರುಷ ಪೇದೆಗೆ ಸಿಗುವ ಎಲ್ಲ ಸವಲತ್ತುಗಳು ಸಿಗಲಿವೆ; ಆದರೆ ಪುರುಷನಾಗುವುದಕ್ಕೆ ಅವರು ಭರಿಸಿರುವ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ಖರ್ಚು ವೆಚ್ಚಗಳನ್ನು ಅವರು ಇಲಾಖೆಯಿಂದ ಪಡೆಯುವಂತಿಲ್ಲ ಎಂದು ಹೇಳಿದೆ.

ಲಲಿತಾ ಸಾಳ್ವೆ ಅವರು ತಾವಿರುವ ಪೊಲೀಸ್‌ ಇಲಾಖೆಯ ಅನುಮತಿ ಪಡೆದು ಕಳೆದ ಮೇ 25ರಂದು ಮುಂಬಯಿಯ ಜಾರ್ಜ್‌ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.

Comments are closed.