ಮುಂಬೈ

ಶೀನಾ ಬೋರಾ ಮರ್ಡರ್‌ ಕೇಸಿನ ಇಂದ್ರಾಣಿ ಮುಖರ್ಜಿ ಹಠಾತ್‌ ಅನಾರೋಗ್ಯದಿಂದ ಮತ್ತೆ ಆಸ್ಪತ್ರೆಗೆ ದಾಖಲು

Pinterest LinkedIn Tumblr


ಮುಂಬಯಿ : ಪುತ್ರಿ ಶೀನಾ ಬೋರಾ ಮರ್ಡರ್‌ ಕೇಸಿನ ಪ್ರಧಾನ ಆರೋಪಿಯಾಗಿ ಜೈಲು ಪಾಲಾಗಿರುವ ಮಾಜಿ ಮಾಧ್ಯಮ ಕಾರ್ಯನಿರ್ವಾಹಕಿ ಇಂದ್ರಾಣಿ ಮುಖರ್ಜಿ ಅವರಿಗೆ ನಿನ್ನೆ ರಾತ್ರಿ ಮತ್ತೆ ಹಠಾತ್‌ ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಜೈಲಿನಿಂದ ಒಯ್ದು ಇಲ್ಲಿನ ಜೆಜೆ ಆಸ್ಪತ್ರೆಗೆ ಸೇರಿಸಲಾಗಿದೆ.

ಇಲ್ಲಿನ ಬೈಕುಲಾ ಮಹಿಳಾ ಜೈಲಿನಲ್ಲಿ ಇರಿಸಲಾಗಿರುವ 46ರ ಹರೆಯ ಮಾಜಿ ಐಎನ್‌ಎಕ್ಸ್‌ ಮೀಡಿಯಾ ಸಹ ಸ್ಥಾಪಕಿ “ಇಂದ್ರಾಣಿ ಮುಖರ್ಜಿ ಅವರಿಗೆ ನಿನ್ನೆ ರಾತ್ರಿ 11.30ರ ಹೊತ್ತಿಗೆ ಹಠಾತ್‌ ಎದೆ ನೋವು ಕಾಣಿಸಿಕೊಂಡಿತು; ಒಡನೆಯೇ ಅವರನ್ನು ಸರಕಾರದ ಜೆಜೆ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಕೊಡಿಸಲಾಯಿತು. ಈಗ ಅವರ ದೇಹಾರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.

ಇಂದ್ರಾಣಿ ಅವರು ಕಳೆದ ಎರಡು ತಿಂಗಳ ಅವಧಿಯಲ್ಲಿ ಎದೆ ನೋವೆಂದು ಆಸ್ಪತ್ರೆಗೆ ದಾಖಲಾಗಿರುವುದು ಇದು ಎರಡನೇ ಬಾರಿಯಾಗಿದೆ. ಕಳೆದ ಎಪ್ರಿಲ್‌ ನಲ್ಲಿ ಆಕೆಯನ್ನು ಅರೆ ಪ್ರಜ್ಞಾವಸ್ಥೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು.

Comments are closed.